ಕುಂದಗೋಳ: ಗ್ರಾಮೀಣ ಪ್ರದೇಶದ ಜನರಿಗೆ ಶುದ್ದ ಮತ್ತು ಆರೋಗ್ಯಪೂರ್ಣ ಕುಡಿಯುವ ನೀರು ಪೂರೈಸುವು ಮಹತ್ವಾಕಾಂಕ್ಷೆ ಯೋಜನೆಯ ಅನುಷ್ಠಾನದಲ್ಲಿ ಇದ್ದು, ಹೀರೆಗುಂಜಳ ಗ್ರಾಮದಲ್ಲಿ ಅಂಗನವಾಡಿ ಪಕ್ಕ ನಿರ್ಮಿಸಲಾಗಿದ್ದ ಶುದ್ದ ನೀರಿನ ಘಟಕ ಸ್ಥಗತಿಗೊಂಡಿದೆ.

ಹೀರೆಗುಂಜಳ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನದ ರಸ್ತೆ ಮದ್ಯ ನಿರ್ಮಿಸಲಾಗಿರುವ ಶುದ್ದ ಕುಡಿಯುವ ನೀರಿನ ಘಟಕ ಹಲವಾರು ದಿನಗಳು ಕಳೆದರು ಇನ್ನೂ ಕಾರ್ಯಾರಂಭ ಮಾಡಿಲ್ಲ.

ಈಗಾಗಲೇ ಚಳಿ ಆರಂಭದಲ್ಲಿ ಇದ್ದು,ಕೆಲವು ತಿಂಗಳ ಕಳೆದರು ಬೇಸಗೆ ಬಿಸಿ ದಿನದಿನಗಳು ಸಮೀಪಿಸುತ್ತಿದ್ದಂತೆ ಹೆಚ್ಚು ಅನುಕೂಲಕರವಾಗಿರಬೇಕಾದ ಶುದ್ದ ನೀರಿನ ಘಟಕಗಳು ನಿರ್ಮಾಣವಾದರೂ ಉಪಯೋಗ ವಿಲ್ಲದಂತಾವಾಗಿದೆ. ಈ ಘಟಕ ಕೆಲವು ವರ್ಷ ಕಳೆದರು ಕಾರ್ಯಾರಂಭ ಮಾಡಿಲ್ಲ ಅಂತ ಇಲ್ಲಿ ಸ್ಥಳೀಯರು ಹೇಳ್ತಾ ಇದ್ದಾರೆ.

ಈ ಘಟಕದಲ್ಲಿ ನೀರು ಸಂಗ್ರಹಣ ಟ್ಯಾಂಕ್ ಮತ್ತು ಇತರ ಶುದ್ದೀಕರಣ ಉಪಕರಣಗಳು ಸಹಿತ ಲಕ್ಷಾಂತರ ರೂಪಾಯಿ ವೆಚ್ಚದ ಸಲಕರಣೆಗಳು ಘಟಕದಲ್ಲಿ ಅಳವಡಿಸಿಲಾಗಿದ್ದು ಅವುಗಳೆಲ್ಲವೂ ಕಾರ್ಯರಂಭಗೂಳ್ಳೆದೆ ನಿಷ್ಪ್ರಯೋಜಕವಾಗಿದ್ದು ತುಕ್ಕು ಹಿಡಿಯಲಾರಂಭಿಸುವೆ.

ಈಗಲಾದರೋ ಎಚ್ಚೆತ್ತು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಶುದ್ದ ನೀರಿನ ಘಟಕ ದುರಸ್ತಿ ಕಾಮಗಾರಿ ಕೈಗೂಳ್ಳತ್ತಾರೋ ಇಲೋ ಕಾದು ನೋಡಬೇಕು.

ವರದಿ; ಶಾನು ಯಲಿಗಾರ

1 thought on “ಶುದ್ದ ನೀರಿನ ಘಟಕ ದುರಸ್ಥಿಯಲ್ಲಿ ಇದ್ದರು ದುರಸ್ತಿ ಭಾಗ್ಯ ಏಕೆ ಒದಗಿಲ್ಲ ಅಧಿಕಾರಿಗಳೇ..?

Comments are closed.

error: Content is protected !!