ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ಈಶ್ವರ್ ಉಳ್ಳಾಗಡ್ಡಿ ರವರು ಇಂದು ಬೆಳಗ್ಗೆ ವಾಕಿಂಗ್ ಜೊತೆ ನಗರದ ಸ್ವಚ್ಛತೆ ಬಗ್ಗೆ ಹಲವು ಪ್ರದೇಶಗಳಲ್ಲಿ ಸಂಚಾರ ಮಾಡಿ ಕ್ಲೀನಿಂಗ್ ಮತ್ತು ಕಸ ವಿಲೇವಾರಿ ಯನ್ನು ವೀಕ್ಷಿಸಿದರು. ಹುಬ್ಬಳ್ಳಿ ನಗರದ ದಾಜಿಬಾನ್ ಪೇಟೆ, ಡಾಕಪ್ಪ ಸರ್ಕಲ್, ಜವಳಿ ಸಾಲ್, ಬೆಳಗಾಂ ಗಲ್ಲಿ, ಸಿ ಬಿ ಟಿ, ಮರಾಠಾ ಗಲ್ಲಿ, ಹಾಗೂ ದುರ್ಗದ ಬೈಲ್ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸರಿಯಾಗಿ ಕಸ ವಿಲೇವಾರಿ ಮಾಡಿದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವರದಿ: ಶಿವು ಹುಬ್ಬಳ್ಳಿ.
error: Content is protected !!