ರೋಣ ತಾಲೂಕು ಜಕ್ಕಲಿ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದ ಪಕ್ಕದಲ್ಲಿರುವ ಮುಖ್ಯ ಚರಂಡಿಯಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿದ್ದು ಸೂಕ್ತವಾದ ಸ್ವಚ್ಛತೆ ಇಲ್ಲದೆ ಕೊಳಚೆ ನೀರು ಅಲ್ಲೇ ನಿಂತು ಗಬ್ಬುನಾರುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ 5 ನೇ ವಾರ್ಡಿನಲ್ಲಿ ಈ ಚರಂಡಿಯ ಪಕ್ಕದಲ್ಲಿ ಕುಡಿಯುವ ನೀರಿನ ಘಟನೆ ನಿರ್ಮಾಣವಾಗಿದ್ದು, ಜನರು ನೀರು ತರಲು ಪ್ರತಿನಿತ್ಯ ಬರುತ್ತಿದ್ದು, ಚರಂಡಿ ದುರ್ವಾಸನೆಯಿಂದ ಮುಗೂ ಮುಚ್ಚಿಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆ ವಾರ್ಡಿನ ಸದಸ್ಯರು ಹಾಗೂ ಸಾರ್ವಜನಿಕರು ಸ್ವಚ್ಛತೆ ಮಾಡಿಸಿ ಎಂದು ಅಧಿಕಾರಿಗಳ ಗಮನಕ್ಕೆ ತಂದರು ಇತ್ತ ಸ್ವಚ್ಛತೆ ಕಡೆ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಹಲವಾರು ಸಮಸ್ಯೆಗಳು ಇದ್ದು, ಗ್ರಾ.ಪಂ‌‌.ಅಧಿಕಾರಿಗಳು ಅಭಿವೃದ್ಧಿ ಕಡೆ ಗಮನಹರಿಸದೇ ಇರುವುದು ವಿಪರ್ಯಾಸ. ವರದಿ ಕಂಡ ಮೇಲಾದರೂ ಅಧಿಕಾರಿಗಳು ಎಚ್ಚೆತ್ತು ಕೊಳ್ಳುವರಾ ಇಲ್ಲವಾ ಕಾದು ನೋಡೋಣ.

error: Content is protected !!