ಕಾರಿನಲ್ಲಿ ಸಿಗ್ನಲ್ ಜಂಪ್ ಮಾಡಿದ ಕಾರಣ ಪೊಲೀಸ್ ವಾಹನವನ್ನು ತಡೆದು ತಪಾಸಣೆಗೆ ಮುಂದಾಗುವಂತಹ ಸಂದರ್ಭದಲ್ಲಿ ಚಾಲಕ ವಾಹನವನ್ನು ನಿಲ್ಲಿಸದೆ ಕಾರಿನ ಬ್ಯಾನೆಟ್ ಮೇಲೆ ಬಿದ್ದ ಪೊಲೀಸನನ್ನು ಎಳೆದೊಯ್ದಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿ ಕಾರೊಂದು ಸಿಗ್ನಲ್ ಜಂಪ್ ಮಾಡಿದ್ದನ್ನು ಕಂಡ ಸಂಚಾರಿ ಪೊಲೀಸ್ ತಡೆದು ಪರೀಕ್ಷಿಸಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಚಾಲಕ ವಾಹನವನ್ನು ನಿಲ್ಲಿಸದೆ ಪೊಲೀಸನನ್ನು ಗುದ್ದಿಕೊಂಡು ಚಲಾಯಿಸಲು ಮುಂದಾಗಿದ್ದಾನೆ. ಪೊಲೀಸ್ ಕಾರಿನ ಬ್ಯಾನೆಟ್ ಮೇಲೆ ಬಿದ್ದಿದ್ದು ಸುಮಾರು 1.5 ಕಿಲೋಮೀಟರ್ ದೂರದಷ್ಟು ಚಾಲಕ ಪೊಲೀಸನನ್ನು ಎಳೆದೊಯ್ದಿದ್ದಾನೆ. ನಂತರ ಸ್ಥಳೀಯರು ವಾಹನವನ್ನು ಅಡಗಟ್ಟಿ ನಿಲ್ಲಿಸಿದ್ದಾರೆ. ಕಾರಿಗೆ ಉತ್ತರ ಪ್ರದೇಶದ ನಂಬರ್ ಪ್ಲೇಟ್ ಹಾಕಲಾಗಿತ್ತು ಮತ್ತು ಸಿಗ್ನಲ್ ಜಂಪ್ ಮಾಡಿದ್ದ ಹಾಗೂ ಚಲಾಯಿಸುತ್ತಿದ್ದ ವ್ಯಕ್ತಿಯು 19 ವಯಸ್ಸಿನ ಹುಡುಗನಾಗಿದ್ದ ಹಾಗೂ ಆತನ ಬಳಿ ಪರವನಿಗೆ ಇರಲಿಲ್ಲ ಆದಕಾರಣ ಭಯದಲ್ಲಿ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.

error: Content is protected !!