ಉತ್ತರಕನ್ನಡ ಜಿಲ್ಲೆಯಲ್ಲಿ ಬರುವ ಯಲ್ಲಾಪುರ ತಾಲೂಕಿನ ಕಣ್ಣಿಗೆರಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಒಳಗೊಂಡ ಜಮಗುಳಿ ಹಾಗೂ ಮುಂದಿನ ಊರಿಗೆ ತೆರಳುವ ಮುಕ್ಯ ರಸ್ತೆ ಇದಾಗಿದ್ದು ಈ ರಸ್ತೆಯ ಸ್ಥಿತಿಯನ್ನು ಹೇಳತೀರದಾಗಿದೆ . ಯಲ್ಲಾಪುರದಿಂದ 3 ಕೀ ಮಿ ದೂರವಿರುವ ಜಮಗುಳಿ ಹಾಗೂ ಮುಂದಿನ ಊರಿಗೆ ತೆರಳಲು ಇದೆ ಮುಕ್ಯ ರಸ್ತೆಯಾಗಿದ್ದು ಇಲ್ಲಿನ ಕಳೆದ 10 ವರ್ಷದಿಂದ ಕೂಡ ಹೀಗೆಯೇ ಹಾಳಾಗಿದ್ದು ಇಲ್ಲಿನ ಸಾರ್ವಜನಿಕರಿಗೆ ಕೃಷಿಕರಿಗೆ ಶಾಲಾ ಕಾಲೇಜುಗಳ ಮಕ್ಕಳಿಗೆ ದಿನನಿತ್ಯ ಓಡಾಡಲು ತುಂಬಾ ತೊಂದರೆಯಾಗುತ್ತಿದ್ದನ್ನು ಕಂಡು ಸಹ ಕಾಣದೆ ಇರುವ ಹಾಗೆ ನಟನೆ ಮಾಡುತ್ತಿದ್ದಾರೆ ಇಲ್ಲಿನ ಭ್ರಷ್ಟ ಅಧಿಕಾರಿಗಳು ಹಾಗೂ ಭ್ರಷ್ಟ ರಾಜಕಾರಣಿಗಳು ಎಂದು ಗ್ರಾಮಸ್ಥರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಚುನಾವಣೆ ಇರುವ ಕಾರಣ ಇಲ್ಲಿನ ಗ್ರಾಮಸ್ತರು ಅವರಿಗೆ ಬೇಕಾಗಿರುವ ರಸ್ತೆಯನ್ನು ನಿರ್ಮಿಸಿ ಕೊಡದಿದ್ದಲ್ಲಿ ಚುನಾವಣಾ ಬಹಿಷ್ಕಾರ ಬ್ಯಾನರ್ ನಿರ್ಮಿಸಿದ್ದು ಚುನಾವಣಾ ಬಹಿಷ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು…
ವರದಿ: ಶ್ರೀಪಾದ್ ಎಸ್ ಏಚ್