ಮುಂಡಗೋಡ: ತಾಲೂಕಿನ ಕಾತೂರು ವಲಯ ಅರಣ್ಯಾಧಿಕಾರಿಗಳ ಸರಹದ್ದಿನಲ್ಲಿ ಬರುವ ಚಿಗಳ್ಳಿ ಗ್ರಾಮದ ಚಿಗಳ್ಳಿ ಜಲಾಶಯಕ್ಕೆ ಹೋಗುವ ರಸ್ತೆಯ ಪಕ್ಕದಲ್ಲೇ ಜೆಸಿಬಿ ಯಂತ್ರದ ಮೂಲಕ ಮಣ್ಣು ಅಗೆದು ಸಾಗಿಸಿದ್ದಾರೆ ಮತ್ತು ಚಿಗಳ್ಳಿ ಜಲಾಶಯದ ಉಬ್ಬುಗಡೆ ಪ್ರದೇಶದಲ್ಲಿ ಮೊಹರಂ (ಗೊಚ್ಚು) ಅನ್ನು ತೆಗೆದು ಸಾಗಿಸಿದ್ದಾರೆ.
ಹೌದು, ಅಂದ ಹಾಗೆ ಈ ಮಣ್ಣನ್ನು ಅಕ್ರಮವಾಗಿ ಕಳೆದ 15 ದಿನಗಳ ಹಿಂದೆಯೇ ಸಾಗಿಸಿದ್ದಾರೆನ್ನಲಾಗಿದೆ.ಈ ವಿಷಯವಾಗಿ ಕೆಲವರು ಕೇಳಿದಾಗ ಜೋಗೇಶ್ವರ ಹಳ್ಳದ ಹತ್ತಿರ ಇರುವ ಅರಣ್ಯ ಇಲಾಖೆಯ ನರ್ಸರಿಗೆ ಮಣ್ಣನ್ನು ಸಾಗಿಸಲಾಗಿದೆ ಎಂದು ಹೇಳಿದ್ದಾರೆ.ಆದರೆ ಅರಣ್ಯ ಇಲಾಖೆಯ ಈ ನರ್ಸರಿಗೆ ಮಣ್ಣು ಹೋಗಿಯೇ ಇಲ್ಲ.
ವಿಷಯ ಗೊತ್ತಿದ್ದರೂ ಸುಮ್ಮನಿದ್ದಾರಾ? ಹೌದು ,ಈ ವಿಷಯ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಗೊತ್ತಿದ್ದರೂ ಸುಮ್ಮನಿದ್ದಾರೆ ಎಂದು ಅನಿಸುತ್ತದೆ ಏಕೆಂದರೆ ರಸ್ತೆಯ ಪಕ್ಕದಲ್ಲಿ ಈ ಅಕ್ರಮ ನಡೆದರು ಇದುವರೆಗೂ ಈ ವಿಷಯದ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.
ಅಕ್ರಮ ಇಟ್ಟಿಗೆ ತಯಾರಿಕೆಗೆ ಸಾಗಾಣಿಕೆಯಾಗಿದೆಯಾ?ಅಕ್ರಮವಾಗಿ 30 ರಿಂದ 40 ಟಿಪ್ಪರ್ ಗಳಷ್ಟು ಮಣ್ಣು ಹೋಗಿರುವುದಾದರೂ ಎಲ್ಲಿಗೆ?ಅರಣ್ಯ ಇಲಾಖೆಯ ಸಿಬ್ಬಂದಿಗಳು ಅಕ್ರಮವಾಗಿ ತಯಾರಾಗುವ ಇಟ್ಟಿಗೆ ತಯಾರಕರೊಂದಿಗೆ ಶಾಮಿಲಾಗಿ ಮಣ್ಣು ಸಾಗಾಣಿಕೆ ಆಗಲು ಅನುವು ಮಾಡಿಕೊಟ್ಟಿದ್ದಾರಾ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಏನೇ ಆಗಲಿ ಹೀಗೆ ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ಮಣ್ಣು ಅಗೆದು ಸಾಗಿಸಿದವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವವರೇ ಎಂದು ಕಾಯ್ದು ನೋಡಬೇಕಾಗಿದೆ.
ವಲಯ ಅರಣ್ಯ ಅಧಿಕಾರಿಗಳು ಹೇಳೋದೇನು: ಈ ಬಗ್ಗೆ ಕಾತೂರು ವಲಯ ಅರಣ್ಯ ಅಧಿಕಾರಿಗಳನ್ನು ಕೇಳಿದಾಗ ನಮ್ಮ ಸಿಬ್ಬಂದಿಗಳನ್ನು ಕಳುಹಿಸಿ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ವರದಿ: ಮಂಜುನಾಥ ಹರಿಜನ