2016ರ ಆಗಸ್ಟ್ನಲ್ಲಿ ಕೆಂಗೇರಿ ಸ್ಯಾಟಲೈಟ್ನಲ್ಲಿ ಕೊಲೆ ಮಾಡಿ 6 ತಿಂಗಳು ಮನೆಯಲ್ಲೇ ಶವವನ್ನು ಆರೋಪಿಗಳು ಹೂತಿಟ್ಟಿದ್ದರು. ಶಾಂತಕುಮಾರಿ, ಮಗಳು ಶಶಿಕಲಾ, ಮೊಮ್ಮಗ ಸಂಜಯ್ ಒಟ್ಟಿಗೆ ವಾಸವಾಗಿದ್ದು, ಮೊಮ್ಮಗ ಸಂಜಯ್ ಅಜ್ಜಿಗೆ ರಸ್ತೆ ಬದಿಯಲ್ಲಿ ಮಾರುತ್ತಿದ್ದ ಗೋಬಿ ಮಂಚೂರಿ ತಂದು ಕೊಟ್ಟಿದ್ದ. ಮಡಿವಂತಿಕೆ, ಶಿಸ್ತಿನಿಂದ ಇರುತ್ತಿದ್ದ ಶಾಂತಮ್ಮ ಗೋಬಿ ಮಂಚೂರಿ ತಂದಿದ್ದಕ್ಕೆ ಸಿಟ್ಟುಗೊಂಡು ಸಂಜಯ್ ಮುಖಕ್ಕೆ ಎಸೆದು ನಿಂದಿಸಿದ್ದರು.
ಕೋಪಗೊಂಡ ಸಂಜಯ್ ಅಜ್ಜಿ ತಲೆಗೆ ಲಟ್ಟಣಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ನಂತರ ಶವವನ್ನು ಕೆಮಿಕಲ್ ಹಾಕಿ ಕಬೋರ್ಡ್ನಲ್ಲಿ ಮುಚ್ಚಿಟ್ಟು, ಊರಿಗೆ ಹೋಗಿ ಬರುತ್ತೇವೆ ಅಂತ ಯಾರಿಗೂ ಅನುಮಾನ ಬಾರದಂತೆ ತಾಯಿ-ಮಗ ಮನೆ ಖಾಲಿ ಮಾಡಿದ್ದರು.
6 ತಿಂಗಳ ಬಳಿಕ ಮನೆ ಮಾಲೀಕ ಮನೆ ರಿಪೇರಿ ಮಾಡಿಸಲು ಹೋದಾಗ ಶವದ ಅಸ್ಥಿಪಂಜರ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂಜಯ್ ಸ್ನೇಹಿತ ನಂದೀಶ್ ನನ್ನು ಬಂಧಿಸಿದ್ದರು. ಆದರೆ ಕೊಲೆಗೈದ ಮಗಳು ಮತ್ತು ಮೊಮ್ಮಗ ಪತ್ತೆಯಾಗಿರಲಿಲ್ಲ.
5 ವರ್ಷಗಳ ನಂತರ ಮೊಮ್ಮಗ ಸಂಜಯ್ ಹಾಗೂ ಮಗಳು ಶಶಿಕಲಾರನ್ನು ಕೆಂಗೇರಿ ಪೊಲೀಸರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಂಧಿಸಿದ್ದಾರೆ.