12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಾಳೆ ಎಂಬ ಕಾರಣಕ್ಕೆ ವರನೊಬ್ಬ ವಧುವನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಈ ವಿಲಕ್ಷಣ ಘಟನೆ ವರದಿಯಾಗಿದೆ. ಪೊಲೀಸರು ಎರಡು ಕುಟುಂಬಗಳಿಗೆ ಕೌನ್ಸಿಲಿಂಗ್ ಮಾಡುವ ಮೂಲಕ ಪ್ರಕರಣವನ್ನು ಭೇದಿಸಲು ಪ್ರಯತ್ನಿಸುತ್ತಿದ್ದಾರೆ.
ಆದಾಗ್ಯೂ, ಎರಡೂ ಕುಟುಂಬಗಳು ಒಮ್ಮತಕ್ಕೆ ಬರದಿದ್ದರೆ, ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿರ್ವಾ ಕೊತ್ವಾಲಿ ಪ್ರದೇಶದ ಪೊಲೀಸ್ ಠಾಣೆಯ ಪ್ರಭಾರಿ ಪಿಎನ್ ಬಾಜ್ಪೈ ಹೇಳಿದ್ದಾರೆ. ವರದಿಯ ಪ್ರಕಾರ, ವಧುವಿನ ಕುಟುಂಬವು ತಮ್ಮ ವರದಕ್ಷಿಣೆ ಬೇಡಿಕೆಗಳನ್ನು ಈಡೇರಿಸದ ಕಾರಣ ವರನ ಕುಟುಂಬವು ಮದುವೆಯನ್ನು ರದ್ದುಗೊಳಿಸಿದೆ ಎಂದು ಆರೋಪಿಸಿ ವರನ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, 12ನೇ ತರಗತಿ ಅಂಕಪಟ್ಟಿಯಲ್ಲಿ ವಧುವಿಗೆ ಕಡಿಮೆ ಅಂಕ ಬಂದಿದೆ ಎಂದು ತಿಳಿಸಿದ್ದಾರೆ.
ಬಾಗನವಾ ಗ್ರಾಮದ ರಾಮಶಂಕರ್ ಎಂಬುವವರ ಪುತ್ರ ಸೋನು ಎಂಬುವರೊಂದಿಗೆ ಮಗಳು ಸೋನಿ ಮದುವೆ ನಿಶ್ಚಯಿಸಿದ್ದು, ಮದುವೆಗೆ ಸಾಕಷ್ಟು ಹಣ ಖರ್ಚು ಮಾಡಿ, ವರನಿಗೆ ಬಂಗಾರದ ಉಂಗುರ ಕೂಡ ನೀಡಿ ಸಮಾರಂಭ ಏರ್ಪಡಿಸಿದ್ದರು. ಆದ್ರೆ, ಮರುದಿನವೇ ವರನ ಮನೆಯವರು ವರದಕ್ಷಿಣೆ ಬೇಡಿಕೆ ಮುಂದಿಟ್ಟಿದ್ದಾರೆ. ವಧುವಿನ ತಂದೆ ಹೆಚ್ಚಿನ ವರದಕ್ಷಿಣೆ ನೀಡಲು ಅಸಮರ್ಥತೆಯನ್ನು ವ್ಯಕ್ತಪಡಿಸಿದಾಗ, ವರನ ಕುಟುಂಬವು ಹುಡುಗಿಯು ಪಿಯುಸಿಯಲ್ಲಿ ಕಡಿಮೆ ಅಂಕಪಡೆದಿದ್ದಾಳೆ ಎಂದು ಹೇಳಿ ಮದುವೆಯನ್ನು ಕ್ಯಾನ್ಸಲ್‌ ಮಾಡಿದೆ.

error: Content is protected !!