ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಇನ್ನೊಬ್ಬ ಪುರುಷನೊಂದಿಗೆ ರೆಡ್ಹ್ಯಾಂಡ್ ಆಗಿ ಹಿಡಿದಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಪುರುಷ ಸಾರ್ವಜನಿಕ ಸ್ಥಳದಲ್ಲಿ ಪತ್ನಿಯನ್ನು ಹಿಂಬಾಲಿಸುತ್ತಿರುವುದನ್ನು ಕಾಣಬಹುದು. ಮಹಿಳೆ ಇನ್ನೊಬ್ಬ ಪುರುಷನೊಂದಿಗೆ ಕೈ-ಕೈ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿರುತ್ತಾಳೆ. ವ್ಯಕ್ತಿ ಇನ್ನೊಬ್ಬ ವ್ಯಕ್ತಿಯಲ್ಲಿ, ‘ನನಗೆ ತಕ್ಷಣ ಇಲ್ಲಿ ಅಗತ್ಯವಿದ್ದರೆ ನಾನು ಯಾರಿಂದ ಸಹಾಯವನ್ನು ಕೇಳಬಹುದು. ಅವಳು ನನ್ನ ಹೆಂಡತಿ ಮತ್ತು ಅವಳ ಗೆಳೆಯನೊಂದಿಗೆ ಕೈಕೈ ಹಿಡಿದುಕೊಂಡು ನಡೆಯುತ್ತಿದ್ದಾಳೆ. ನಾನು ಅನೇಕ ದಿನಗಳಿಂದ ಅವಳನ್ನು ಹಿಂಬಾಲಿಸುತ್ತಿದ್ದೇನೆ. ಇವತ್ತು ಅವಳ ಗೆಳೆಯನೊಂದಿಗೆ ಸಿಕ್ಕಿಬಿದ್ದಿದ್ದಾಳೆ’ ಎನ್ನುತ್ತಾನೆ. ಹೀಗೆ ವ್ಯಕ್ತಿ ಇತರರ ಬಳಿ ಸಹಾಯ ಕೇಳುತ್ತಾನೆ. ‘ತಾವಿಬ್ಬರು ಪ್ರೀತಿಸಿ ಮದ್ವೆಯಾಗಿದ್ದು, ಆಕೆ ತನಗೆ ಮೋಸ ಮಾಡುತ್ತಿದ್ದಾಳೆ’ ಎಂದು ವಿವರಿಸುತ್ತಾನೆ.
ಮಹಿಳೆ ತನ್ನ ಗೆಳೆಯನ ಜೊತೆ ಫುಡ್ ಕೌಂಟರ್ ಬಳಿ ನಡೆಯುತ್ತಾಳೆ. ಒಬ್ಬ ಪ್ರೇಕ್ಷಕ ಮಹಿಳೆಯ ಬಳಿ ಹೆಜ್ಜೆ ಹಾಕುತ್ತಾನೆ ಮತ್ತು ಅವಳನ್ನು ಕರೆಯುತ್ತಾನೆ. ಮಹಿಳೆ ಹಿಂದೆ ತಿರುಗಿ ತನ್ನ ಗಂಡನನ್ನು ನೋಡಿದ ತಕ್ಷಣ ಆಘಾತಕ್ಕೊಳಗಾಗುತ್ತಾಳೆ. ತಕ್ಷಣ ಗಂಡ ಅವಳಿಗೆ ಬೈಯಲು ಶುರು ಮಾಡುತ್ತಾನೆ. ತನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದಕ್ಕಾಗಿ ಅವಳನ್ನು ದೂಷಿಸುತ್ತಾನೆ. ಇಷ್ಟು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರೂ, ನನಗೂ ನನ್ನ ಮನೆಯವರಿಗೂ ಈ ರೀತಿ ಮೋಸ ಮಾಡಿದೆಯಲ್ಲ ಎಂದು ಬೇಸರದಿಂದ ಕಿರುಚುತ್ತಾನೆ. ಡಿವೋರ್ಸ್ ನೀಡುವುದಾಗಿ ಹೇಳುತ್ತಾನೆ. ಕೂಡಲೇ ಮಹಿಳೆ ಕೋಪಗೊಂಡು ಜೋರಾಗಿ ಕೂಗುತ್ತಾ ಅವನಿಗೆ ಹೊಡೆಯಲು ಯತ್ನಿಸುತ್ತಾಳೆ.
ಆರಂಭದಲ್ಲಿ ತನ್ನ ಜತೆ ಇರುವ ವ್ಯಕ್ತಿ ಫ್ರೆಂಡ್ ಎಂದು ಮಹಿಳ ವಾದಿಸುತ್ತಾಳೆ. ಇಬ್ಬರು ಕೈ ಕೈ ಹಿಡಿದು ಸುತ್ತಾಡಿರುವುದನ್ನು ರೆಕಾರ್ಡ್ ಮಾಡಿರುವುದನ್ನು ಗಂಡ ತಿಳಿಸಿದಾಗ ಕೋಪಗೊಳ್ಳುತ್ತಾಳೆ. ಗಂಡನ ಮೊಬೈಲ್ ಕಿತ್ತುಕೊಂಡು ಗಂಡನ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಾಳೆ. ಪತಿ-ಪತ್ನಿ ಇಬ್ಬರದ್ದು ಪ್ರೇಮ ವಿವಾಹ. ಮನೆ ಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಂಡ ಬಗ್ಗೆ ಮಾತನಾಡಿರುವುದು ವಿಡಿಯೋ ಸಂಭಾಷಣೆಯಲ್ಲಿದೆ.
ತಕ್ಷಣವೇ ಸ್ಥಳದಲ್ಲಿ ಜನರು ಸೇರಿ ಇಬ್ಬರನ್ನೂ ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಯಾರೂ ಕೇಳುವ ಮನಸ್ಥಿತಿಯಲ್ಲಿ ಇರಲ್ಲಿಲ್ಲ. ನಂತರ, ದಂಪತಿಗಳು ಎರಡನೇ ವ್ಯಕ್ತಿಯೊಂದಿಗೆ ಪೊಲೀಸ್ ಠಾಣೆಗೆ ತೆರಳಿದ್ದಾಗಿ ತಿಳಿದುಬಂದಿದೆ. ಇಡೀ ಘಟನೆಯನ್ನು ವ್ಯಕ್ತಿ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. ಶೋನೀಕಪೂರ್ ಎಂಬುವರು ಟ್ವಿಟರ್ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈವರೆಗೂ ಈ ವಿಡಿಯೋ 2 ಕೋಟಿ 90 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದ್ದು, ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
Caught his #wife holding hands with someone in public.
Look how she started the aggression.#cheatingwife #Adultery pic.twitter.com/5tRw4b2Xe8
— ShoneeKapoor (@ShoneeKapoor) July 21, 2023