ಗುಜರಾತಿನ ಸೂರತ್ ಮೂಲದ ಕಿಶೋರ್ ಎಂಬಾತ ತನ್ನ ಮೊಬೈಲ್ ನಲ್ಲಿ ಕಳೆದ ಭಾನುವಾರ ಪಾರ್ನ್ (ಅಶ್ಲೀಲ) ವಿಡಿಯೋಸ್ ಗಳನ್ನು ನೋಡುತ್ತಿದ್ದನ್ನು ಆತನ ಪತ್ನಿ ಕಾಜಲ್ ಗಮನಿಸಿದ್ದಾಳೆ ಅದನ್ನು ಕಂಡ ಅಕೆ ನೋಡಬೇಡ ಎಂದು ಹೇಳಿದ್ದಾಳೆ. ನಂತರ ಮತ್ತೆ ಸೋಮವಾರ ಕಿಶೋರ್ ಅಶ್ಲೀಲ ವಿಡಿಯೋಗಳನ್ನು ನೋಡಲು ಮುಂದುವರಿಸಿದ್ದಾನೆ ನಂತರ ಇವರಿಬ್ಬರ ಮಧ್ಯೆ ಜಗಳ ಶುರುವಾಗಿದೆ ಜಗಳ ದೊಡ್ಡದಾಗಿ ಕಿಶೋರ್ ತನ್ನ ಪತ್ನಿಗೆ ಬೆಂಕಿ ಹಚ್ಚಿದ್ದಾನೆ.
ಶೇಕಡ 40ರಷ್ಟು ಬೆಂಕಿಯಲ್ಲಿ ಸುಟ್ಟಿದ್ದ ಕಾಜಲ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ಹೇಳಿಕೆಯ ಮೇರೆಗೆ ಕಿಶೋರ್ನ ವಿರುದ್ಧ ಪೊಲೀಸರು ಕೊಲೆಯ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಬೆಂಕಿಯಿಂದ ಸುಟ್ಟು ಗಂಭೀರ ಗಾಯಗೊಂಡಿದ್ದ ಕಾಜಲ್ ಮೃತಪಟ್ಟಿರುತ್ತಾಳೆ.