ಉತ್ತರ ಪ್ರದೇಶದ ಹಮೀರ್ ಪುರದಲ್ಲಿ ಇಂಜಿನಿಯರ್ ಒಬ್ಬ ಮೊದಲ ರಾತ್ರಿಯಲ್ಲಿ ಕಾಮೋತೇಜಕ ಮಾತ್ರೆಗಳನ್ನು ಸೇವಿಸಿ, ಮದವೇರಿದವನಂತೆ ಪತ್ನಿಯ ಮೇಲೆ ಎರಗಿದ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.
ಮಹಿಳೆಯ ಪೋಷಕರು ಯಾರು ಇಲ್ಲದ ಕಾರಣ ಸರ್ಕಾರಿ ಹುದ್ದೆಯಲ್ಲಿರುವ ಆಕೆಯ ಸಹೋದರ ಹಾಗೂ ಸಂಬಂಧಿಕರೇ ಮುಂದೆ ನಿಂತು ಫೆಬ್ರವರಿ 3ರಂದು ಇಂಜಿನಿಯರ್ ನ ಜೊತೆ ಆಕೆಯ ಮದುವೆಯನ್ನು ಮಾಡಿಸಿರುತ್ತಾರೆ. ಫೆಬ್ರವರಿ 4ರಂದು ಮಹಿಳೆ ಅತ್ತೆಯ ಮನೆ ಸೇರುತ್ತಾಳೆ.
ಮೊದಲ ರಾತ್ರಿಯಂದು ಕಾಮೋತೇಜಕ ಮಾತ್ರೆಗಳನ್ನು ಸೇವಿಸಿದ ಇಂಜಿನಿಯರ್ ವರ, ವಧುವಿನ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿದ್ದಾನೆ. ಇದರ ಪರಿಣಾಮವಾಗಿ ತೀವ್ರ ಗಾಯಗೊಂಡ ಆಕೆಯನ್ನು ಫೆಬ್ರವರಿ 7ರಂದು ಆಸ್ಪತ್ರೆಗೆ ದಾಖಲಿಸುತ್ತಾರೆ.
ಕಾನ್ಪುರದ ಖಾಸಗಿ ನರ್ಸಿಂಗ್ ಹೋಂ ಗೆ ಆಕೆಯನ್ನು ಕರೆದೊಯ್ಯಲಾಗಿದ್ದು ಆಕೆ ತೀವ್ರ ಅಸ್ವಸ್ಥಗೊಂಡಿದ್ದು, ಮಹಿಳಾ ಸ್ಥಿತಿ ತೀವ್ರ ಹದಗೆಟ್ಟಿರುತ್ತದೆ ಅದನ್ನು ನೋಡಿದ ಗಂಡ ಕಾಮೋತೇಜಕ ಮಾತ್ರೆ ಸೇವಿಸಿ ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ತಪ್ಪನ್ನು ಒಪ್ಪಿಕೊಂಡಿರುತ್ತಾನೆ.
ಆಕೆಗೆ ಚಿಕಿತ್ಸೆ ನೀಡಿದ ಸ್ತ್ರೀರೋಗ ತಜ್ಞರು ಮಹಿಳೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುವಷ್ಟು ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂದು ಹೇಳಿರುತ್ತಾರೆ.
ಮೊದಲ ರಾತ್ರಿಯಂದು ಗಂಡ ನಡೆಸಿದ ಲೈಂಗಿಕ ಕ್ರಿಯೆಯಿಂದ ಮಹಿಳೆಯ ಖಾಸಗಿ ಭಾಗದಲ್ಲಿ ಆಗಿರುವ ಗಾಯಗಳು ಸೋಂಕಿಗೆ ಕಾರಣವಾಗಿ ಚಿಕಿತ್ಸೆ ಫಲಿಸದೆ ಫೆಬ್ರವರಿ 10ರಂದು ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟಿರುತ್ತಾಳೆ.
ಮೊದಲ ರಾತ್ರಿಯಂದು ಗಂಡ ಕಾಮೋತೇಜಕ ಮಾತ್ರೆ ಸೇವಿಸಿ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಮಹಿಳೆ ಮದುವೆಯಾದ ಒಂದೇ ವಾರಕ್ಕೆ ಮೃತಪಟ್ಟಿದ್ದಾಳೆ.
ಇಂಜಿನಿಯರ್ ಗಂಡ ಮನೆಗೆ ಬೀಗ ಹಾಕಿಕೊಂಡು ಪೋಷಕರೊಂದಿಗೆ ಪರಾಗಿದ್ದು, ಮಹಿಳೆ ಸಹೋದರ ಹಾಗೂ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುತ್ತಾರೆ.