ತಮ್ಮ ಮಗಳ ಮೇಲೆಯೇ ಕಣ್ಣು ಹಾಕಿದ ವ್ಯಕ್ತಿಯನ್ನು ಅವನ ಇಬ್ಬರು ಪತ್ನಿಯರು ಸೇರಿ ಕೊಲೆಗೈದ ಘಟನೆ ತೆಲಂಗಾಣದ ಸೂರ್ಯಪೇಟಾ ಜಿಲ್ಲೆಯ ಚಿವ್ವೆನ್ಲಾ ತಾಲ್ಲೂಕಿನ ಹಳ್ಳಿಯಲ್ಲಿ ಸೋಮವಾರ ನಸುಕಿನ ಜಾವ ನಡೆದಿದೆ.
ಕೊಲೆಯಾದ ವ್ಯಕ್ತಿ 43 ವರ್ಷದ ಚಾಲಕನಾಗಿದ್ದು, ಹಲವು ವರ್ಷಗಳ ಹಿಂದೆ ನಲ್ಗೊಂಡ ಜಿಲ್ಲೆಯ ಯುವತಿಯನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಗಂಡು ಮಗುವಿನ ಮೊಹದಲ್ಲಿ, ತನ್ನ ಪತ್ನಿಯ ತಂಗಿಯೊಂದಿಗೆ ಮದುವೆಯಾಗಿದ್ದು, ಅವಳಿಗೆ ಗಂಡು ಮಗು ಜನಿಸಿದ ನಂತರ ಎಲ್ಲರೂ ಒಟ್ಟಾಗಿ ನೆಲೆಸಿದ್ದ ಕುಟುಂಬ.
ಕೆಲವು ತಿಂಗಳ ಹಿಂದೆ ತನ್ನ ಮೊದಲ ಪತ್ನಿಯ ಕಿರಿ ಮಗಳು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಮಗಳ ಸಾವಿನ ನಂತರ ಆರೋಪಿ ಮದ್ಯದ ಚಟಕ್ಕೆ ದಾಸನಾಗಿದ್ದ. ನಂತರ, ಇಬ್ಬರು ಪತ್ನಿಯರಿಗೆ ಮಾನಸಿಕ, ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದ. ಇದರಿಂದ ಪತ್ನಿಯರು ಸಾಕಷ್ಟು ಮನನೊಂದಿದ್ದರು. ಹಿರಿ ಮಗಳ ಜೊತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. ದಿನ ಕಳೆದಂತೆ ಆಕೆಗೆ ಲೈಂಗಿಕ ಕಿರುಕುಳ ನೀಡಲೂ ಶುರು ಮಾಡಿದ್ದಾನೆ.
ಹೈದರಾಬಾದ್ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಿರಿ ಮಗಳು ಸಂಕ್ರಾಂತಿ ಹಬ್ಬದ ಸಮಯದಲ್ಲಿ ಊರಿಗೆ ಬಂದಿದ್ದಳು. ಮಗಳೊಂದಿಗೆ ತಂದೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದನು. ಪತ್ನಿಯರು ಈ ಕ್ರಮ ತಪ್ಪು ಎಂದು ಹೇಳಿದರೂ, ಆರೋಪಿ ತನ್ನ ಹಳೆ ನಡವಳಿಕೆಯನ್ನು ಬದಲಾಯಿಸಲು ಇಚ್ಛಿಸಲಿಲ್ಲ. ಇದರ ಪರಿಣಾಮವಾಗಿ, ತಾಯಿ ಮತ್ತು ಮಗಳು ಆತ್ಮಹತ್ಯೆಗೆ ತೀರ್ಮಾನಿಸಿದರು.
ಆದರೆ, ಆ ಸಮಯದಲ್ಲಿ, ತಂದೆ ಮತ್ತೊಮ್ಮೆ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದಾಗ, ಕೋಪಗೊಂಡ ಇಬ್ಬರು ಪತ್ನಿಯರು ಪತಿಯ ಮರ್ಮಾಂಗಕ್ಕೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಪೊಲೀಸರು ಘಟನ ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ.
ಪತಿ ಶಫಿ ಅಹ್ಮದ್ ವಿರುದ್ಧ ಪತ್ನಿ ಲಕ್ಷ್ಮೀ ಮತಾಂತರ ಮಾಡಿಸಲು ಕಿರುಕುಳ ನೀಡಿದುದಾಗಿ ಆರೋಪ ಮಾಡಿದ್ದಾರೆ. 2014-15 ರಲ್ಲಿ ಪ್ರೀತಿಸಿ…
ವ್ಯಕ್ತಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಒಂದು ದುರ್ಘಟನೆ ಧಾರವಾಡ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ…
ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಚಿಟಗಿನಕೊಪ್ಪ ಗ್ರಾಮದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ 50 ರ ಬಳಿ ಕಳೆದ ಎರಡು…
ಸಾಮಾಜಿಕ ಜಾಲತಾಣಗಳಲ್ಲಿ ಐಫೋನ್ ಮತ್ತು ಆಂಡ್ರಾಯ್ಡ್ ಫೋನುಗಳಲ್ಲಿ ಆನ್ಲೈನ್ ಶಾಪಿಂಗ್ ಮಾಡುವಾಗ ವಸ್ತುಗಳ ಬೆಲೆ ಹೆಚ್ಚು ಕಡಿಮೆಯಾಗುತ್ತಿವೆ ಎಂಬ ಸಾಕಷ್ಟು…
ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ನಾಲ್ವರು ಮಕ್ಕಳು ಜಲಸಮಾಧಿಯಾದ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ…
ಭಾರತದಲ್ಲಿ ಲೈಂಗಿಕತೆ ಮತ್ತು ಸಂಬಂಧಗಳ ಬಗ್ಗೆ ಮುಕ್ತ ಚರ್ಚೆ ಹೆಚ್ಚುತ್ತಿದೆ. ಇತ್ತೀಚೆಗೆ ನಡೆದ 'ಲೇಡ್ ಇನ್ ಇಂಡಿಯಾ 2025' ಸಮೀಕ್ಷೆಯಲ್ಲಿ…