ಕಾಡಂಚಿನ ಹೆಡಿಯಾಲ ಸಮೀಪದ ಅಳಲಹಳ್ಳಿ ಚೈನ್ ಗೇಟ್ ಬಳಿ ಘಟನೆ ನಂಜನಗೂಡು: ಅರಣ್ಯ ಇಲಾಖೆ ಸಿಬ್ಬಂದಿಗಳ ಎಡವಟ್ಟಿಗೆ ಜೆಸಿಬಿ ಯಂತ್ರವೊಂದು ಸುಟ್ಟು ಕರಕಲಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಸಮೀಪದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶದ ಚೈನ್ ಗೇಟ್ ಬಳಿ ನಡೆದಿದೆ. ಐತಿಹಾಸಿಕ ಧಾರ್ಮಿಕ ಕ್ಷೇತ್ರ ಶ್ರೀ ಬೇಲದಕುಪ್ಪೆ ಮಹದೇಶ್ವರ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಘಟನೆ ನಡೆದಿದೆ. ಆನೆಕಂದಕ ನಿರ್ಮಾಣ ಕಾಮಗಾರಿ ನಡೆಸಲು ಜೆಸಿಬಿ ಯಂತ್ರ ಬಳಸಲಾಗುತ್ತಿದ್ದು ಅನಾರೋಗ್ಯದ ನಿಮಿತ್ತ ಜೆಸಿಬಿ ಚಾಲಕ ಜೆಸಿಬಿ ನಿಲ್ಲಿಸಿ ಆಸ್ಪತ್ರೆಗೆ ತೆರಳಿದ್ದರೆಂದು ಹೇಳಲಾಗಿದೆ. ಈ ವೇಳೆ ಕುರುಚಲು ಸಸ್ಯಗಳ ನಿರ್ಮೂಲನೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಂಕಿ ಹಚ್ಚಿದ್ದಾರೆ. ಕುರುಚಲು ಸಸ್ಯಗಳಿಗೆ ಹಚ್ಚಿದ್ದ ಬೆಂಕಿ ಪಸರಿಸಿದ ಹಿನ್ನೆಲೆ ಸಮೀಪದಲ್ಲಿದ್ದ ಜೆಸಿಬಿ ಯಂತ್ರದ ಟಯರ್ ಮತ್ತು ಎಂಜಿನ್ ಗೆ ತಗುಲಿದೆ. ಬೆಂಕಿ ತಗುಲಿದ ಕೆಲವೇ ಸಮಯದಲ್ಲಿ ಜೆಸಿಬಿ ಯಂತ್ರ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ ಸುಟ್ಟು ಕರುಕಲಾಗಿದೆ.
ಅರಣ್ಯ ಇಲಾಖೆಯು ಅರಣ್ಯ ಪ್ರದೇಶಕ್ಕೆ ಪ್ರವೇಶಿಸಲು ನಿರ್ಭಂದ ಹೇರಿರುವ ಕಾರಣ ಸ್ಥಳಕ್ಕೆ ತುರ್ತಾಗಿ ಅಗ್ನಿಶಾಮಕ ವಾಹನವೂ ಸಹ ತಲುಪಲು ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ. ಒಟ್ಟಾರೆ ಅರಣ್ಯ ಇಲಾಖೆ ಸಿಬ್ಬಂದಿಗಳ ಎಡವಟ್ಟಿಗೆ ಖಾಸಗಿ ವ್ಯಕ್ತಿಗೆ ಸೇರಿದ ಲಕ್ಷಾಂತರ ರೂಪಾಯಿಯ ಜೆಸಿಬಿ ಯಂತ್ರ ಸುಟ್ಟುಕರಕಲಾಗಿ ಕೇವಲ ಅವಶೇಷವಾಗಿ ಮಾತ್ರ ಉಳಿದಿದೆ. ವರದಿ: ಮೋಹನ್
ಕೆಂಡ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು, 37 ವರ್ಷದ ತಮಿಳುನಾಡು ಮೂಲದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಇಬ್ಬರನ್ನು…
ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ಪಟ್ಟಣದ ಮೋಳೆ ರಿಂಗ್ ರಸ್ತೆಯಲ್ಲಿ ಒಂದು ಅಂಶಾತುರ ಘಟನೆ ನಡೆದಿದೆ, ಕಾಡು ರಕ್ಷಣೆ ಮತ್ತು ಪರಿಸರ…
ಸಿಂಧನೂರು ತಾಲ್ಲೂಕಿನ ಉಪ್ಪಳ ಮತ್ತು ದಢೇಸುಗೂರು ಗ್ರಾಮದ ರೈತರಿಂದ 4,500 ಚೀಲ ಭತ್ತವನ್ನು ಖರೀದಿಸಿದ್ದ ವ್ಯಾಪಾರಿ ಮಲ್ಲೇಶ ₹60 ಲಕ್ಷ…
ಹುಕ್ಕೇರಿ ತಾಲೂಕಿನ ಸುಲ್ತಾನಪುರದಲ್ಲಿ ಏಳು ವರ್ಷದ ಬಾಲಕನನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿರುವ…
ಕುಂದಗೋಳ: ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಸಮಸ್ಯೆಗಳು ತೀವ್ರ ಸ್ವರೂಪ ತಾಳುತ್ತಿದ್ದು, ಗ್ರಾಮ ಪಂಚಾಯಿತಿ ಮುಂಭಾಗದ ರಸ್ತೆಗಳು…
ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಘಟನೆ ನಡೆದಿದ್ದು, ವಿವಾಹಿತ ಮಹಿಳೆಯೊಂದಿಗೆ ಮಾತನಾಡಿದ ಯುವಕನನ್ನು ಕೆಲವರು ಹಾಡಹಗಲೇ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು…