Latest

ನವಜಾತ ಶಿಶುವಿಗೆ ರಸ್ತೆಗೆ ಬಿಟ್ಟು ಹೋದ ತಾಯಿ! ಆಮೇಲೇನಾಯ್ತು?

ಶಿವಮೊಗ್ಗ: ರಸ್ತೆ ಬದಿಯಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗುವ ಘಟನೆ ಶಿವಮೊಗ್ಗ ನಗರದ ಶ್ರೀರಾಮಪುರದಲ್ಲಿ ನಡೆದಿದೆ.
ಗುರುವಾರ (ಜನವರಿ.10) ರಾತ್ರಿ ಶಿಶು ಹೆರಿಗೆಯಾಗಿದ್ದು, ತಾಯಿ ಮಗುವನ್ನು ಕೈ ಚೀಲದಲ್ಲಿ ಸುತ್ತಿ, ರಸ್ತೆಗೆ ಬಿಟ್ಟು ಹೋಗಿದ್ದಾರೆ. ಘಟನೆ ಶ್ರೀರಾಮಪುರದ 2ನೇ ಕ್ರಾಸ್ ಬಳಿ, ಬೋರೆವೆಲ್ ಸಮೀಪವಾಗಿದೆ. ಶಿಶುವನ್ನು ಬಿಟ್ಟು ಹೋಗಿದ ನಂತರ, ಸ್ಥಳೀಯರು ಶುಕ್ರವಾರ ಬೆಳಿಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಆರೋಗ್ಯ ಇಲಾಖೆಯವರು ಸ್ಥಳಕ್ಕೆ ಬರುವ ಪೂರ್ವವೇ, ಸ್ಥಳೀಯರು ಶಿಶುವನ್ನು ರಕ್ಷಿಸಿ ಸ್ನಾನ ಮಾಡಿಸಿ, ಪ್ರಾಥಮಿಕ ಆರೈಕೆ ನೀಡಿದ್ದಾರೆ. ನಂತರ, ಮಗುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಯ ಹೆರಿಗೆ ಮತ್ತು ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಯನ್ನು ತಿಳಿದು, ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಂಗಾಭಾಯಿ ಅವರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ, ಅಗತ್ಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ತುಂಗಾನಗರ ಪೊಲೀಸರು ಭೇಟಿ ನೀಡಿ, ತನಿಖೆ ಮುಂದುವರೆದಿದೆ.

nazeer ahamad

Recent Posts

ರಾಷ್ಟ್ರೀಯ ಕಾರ್ಯಕ್ರಮ ಸಭೆಯಲ್ಲಿ ಶಿಸ್ತುಲೋಪ: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅಮಾನತು.

ಗಂಗಾವತಿ: ಗಂಗಾವತಿ ತಾಲ್ಲೂಕು ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕ ವಿಜಯಪ್ರಸಾದ ಅವರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

1 hour ago

ಮಕ್ಕಳ ತಟ್ಟೆಯಲ್ಲಿ ಮೊಟ್ಟೆ ಕಾಣೆ: ತಹಶೀಲ್ದಾರ್ ಶಾಕ್!

ಕೊಪ್ಪಳ: ಮಕ್ಕಳಿಗೆ ವಿಟಮಿನ್ ಮತ್ತು ಪ್ರೋಟೀನ್ ಅಗತ್ಯವಾಗಿರುವುದರಿಂದ, ಬಿಸಿ ಊಟದ ಜೊತೆಗೆ ಅವರಿಗೆ ಮೊಟ್ಟೆ ನೀಡಲಾಗುತ್ತಿದೆ.  ಇತ್ತೀಚೆಗೆ, ಅಜೀಂ ಪ್ರೇಮ್…

2 hours ago

ಸಾಲ ಮರುಪಾವತಿಸದ್ದಕ್ಕೆ ದಾಳಿ: ಮಾಜಿ ಶಾಸಕ ಚರಂತಿಮಠ ಮತ್ತು ನಾಲ್ವರು ವಿರುದ್ಧ ಎಫ್‌ಐಆರ್‌ ದಾಖಲು.

ಬಾಗಲಕೋಟೆ: 35 ಲಕ್ಷ ರೂ. ಬ್ಯಾಂಕ್ ಸಾಲದ ಮರುಪಾವತಿಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ಆನಂದ ಮುತ್ತಗಿ…

15 hours ago

ನ್ಯಾಯಾಲಯಕ್ಕೆ ಸುಳ್ಳು ವರದಿ : ಇಬ್ಬರು ಕಾನ್‌ಸ್ಟೆಬಲ್‌ ಅಮಾನತು ಮಾಡಿದ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ.

ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸ್‌ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳು, ಸಮನ್ಸ್‌ ಮತ್ತು ವಾರಂಟ್‌ಗಳನ್ನು ಜಾರಿ ಮಾಡದೆ, ನ್ಯಾಯಾಲಯಕ್ಕೆ ಸುಳ್ಳು ವರದಿಗಳನ್ನು…

17 hours ago

ಪ್ರಸಿದ್ಧ ಯೂಟ್ಯೂಬರ್ ಹಾಗೂ ಟಿಕ್‌ಟಾಕ್ ಫನ್‌ ಬಕೆಟ್‌ ಭಾರ್ಗವ್‌, ಪೋಕ್ಸೋ ಕೇಸ್ ನಲ್ಲಿ ಒಳಗಡೆ.

ಪ್ರಸಿದ್ಧ ಯೂಟ್ಯೂಬರ್ ಹಾಗೂ ಟಿಕ್‌ಟಾಕ್ ಪ್ರಭಾವಿ ಫನ್‌ ಬಕೆಟ್‌ ಭಾರ್ಗವ್‌ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ…

18 hours ago

ಕೆಲಸದ ಒತ್ತಡ ತಾಳಲಾರದೆ ಕಟ್ಟಡದಿಂದ ಹಾರಿ ಬ್ಯಾಂಕ್ ಸಿಬ್ಬಂದಿ ಆತ್ಮಹತ್ಯೆ..!

ಹೈದರಾಬಾದ್‌ನ ಬಾಚುಪಲ್ಲಿಯ ರಾಜೀವ್ ಗಾಂಧಿ ನಗರದಲ್ಲಿ ಕೆಲಸದ ಒತ್ತಡದಿಂದ ಬೇಸತ್ತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಮಹಿಳೆ…

19 hours ago