Latest

ಮುಸ್ಲಿಂ ಹುಡುಗಿಯನ್ನು ಮದುವೆಯಾದ ಹಿಂದೂ ಯುವಕನ ಹತ್ಯೆ!

ಮುಸಲ್ಮಾನ ಯುವತಿಯನ್ನು ವಿವಾಹವಾದ ಹರೀಶ ಹೆಸರಿನ ಯುವಕನನ್ನು ಯುವತಿಯ ಸಹೋದರರು ದೇವಸ್ಥಾನದ ಹತ್ತಿರ ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ತೇಲಂಗಾಣಾದ ಭಾಗ್ಯನಗರದಲ್ಲಿ ನಡೆದ್ದಿದೆ.
ದೇವರಕೊಂಡಾದಲ್ಲಿ ವಾಸಿಸುವ ಹರೀಶನು 7 ತಿಂಗಳ ಹಿಂದೆ ಭಾಗ್ಯನಗರದ ಎಲ್ಲಾರೆಡ್ಡಿಗುಡಾ ಪ್ರದೇಶದಲ್ಲಿ ವಾಸಿಸಲು ಬಂದಿದ್ದನು. ಅಲ್ಲಿ ಅವನಿಗೆ ಮುಸಲ್ಮಾನ ಯುವತಿಯ ಪರಿಚಯವಾಗಿತ್ತು. ಅವರಲ್ಲಿ ಪ್ರೀತಿ ನಿರ್ಮಾಣವಾಗಿತ್ತು. ಆದರೆ, ಯುವತಿಯ ಕುಟುಂಬದವರಿಗೆ ಅದು ಒಪ್ಪಿಗೆಯಿರಲಿಲ್ಲ. ಯುವತಿಯ ಸಹೋದರರು ಹರೀಶನನ್ನು ಅವಳಿಂದ ದೂರವಿರುವಂತೆ ಹೇಳಿದ್ದರು ಮತ್ತು ಅವನ ಮೇಲೆ ಹಲ್ಲೆ ಮಾಡಿದ್ದರು. ತದನಂತರವೂ ಅವರು ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕದಲ್ಲಿದ್ದರು. 10 ದಿನಗಳ ಹಿಂದೆ ಅವರು ಕದ್ದುಮುಚ್ಚಿ ವಿವಾಹ ಮಾಡಿಕೊಂಡರು.

ಆದರೆ, ಅವರು ಪ್ರತ್ಯೇಕವಾಗಿಯೇ ಇರುತ್ತಿದ್ದರು. ಹರೀಶನ ಕುಟುಂಬದವರಿಗೆ ‘ಅವನು ಎಲ್ಲಿ ವಾಸಿಸುತ್ತಿದ್ದಾನೆ ?’ ಎನ್ನುವುದು ತಿಳಿದಿರಲಿಲ್ಲ. ಇನ್ನೊಂದೆಡೆ ಮುಸಲ್ಮಾನ ಯುವತಿಯೂ ನಾಪತ್ತೆಯಾಗಿದ್ದರಿಂದ ಅವಳ ಸಹೋದರರು ಹುಡುಕುತ್ತಿದ್ದರು. ಅವರು ಹರೀಶನ ಸ್ನೇಹಿತ ಶಿವನನ್ನು ಅಪಹರಿಸಿ ಅವನಿಂದ ಹರೀಶನ ಮಾಹಿತಿಯನ್ನು ಪಡೆದುಕೊಂಡರು.

ಯುವತಿಯ ಸಹೋದರರಿಗೆ ದುಲಪಲ್ಲಿ ಪ್ರದೇಶದಲ್ಲಿ ಹರೀಶ ಇದ್ದಾನೆಂದು ತಿಳಿದಾಗ ಅವನನ್ನು ಭೇಟಿಯಾಗಲು ಹೋದನು. ಅವನನ್ನು ಅಲ್ಲಿಯ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಭೇಟಿಯಾದಾಗ ಯುವತಿಯ ಸಹೋದರರು ಹರೀಶನ ಮೇಲೆ ಹಲ್ಲೆ ಮಾಡುತ್ತಾ ಚೂರಿಯಿಂದ ಇರದಿದ್ದಾನೆ. ಆ ಸಮಯದಲ್ಲಿ ಯುವತಿಯೂ ಅಲ್ಲಿ ಉಪಸ್ಥಿತಳಿದ್ದಳು. ಆಕೆಯ ಸಹೋದರನು ಅವಳನ್ನು ಅಲ್ಲಿಂದ ಕರೆದುಕೊಂಡು ಹೋಗಿದಾನೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, 5 ಜನರನ್ನು ವಶಕ್ಕೆ ಪಡೆದಿದ್ದಾರೆ.

kiran

Recent Posts

ಅಮೆರಿಕದಲ್ಲಿ ಕಾಡ್ಗಿಚ್ಚು ದುರಂತ: ಸಾವಿರಾರು ಮನೆಗಳು ಸುಟ್ಟುಹೋಯಿತು, ಜನರು ತೀವ್ರ ಆತಂಕದಲ್ಲಿ.

ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಲಾಸ್ ಏಂಜಲೀಸ್ ಭಾಗಗಳಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚು, ಈಗಾಗಲೇ ಸಾವಿರಾರು ಮನೆಗಳನ್ನು ಸುಟ್ಟುಹಾಕಿದೆ ಮತ್ತು ಲಕ್ಷಾಂತರ…

10 hours ago

ಸೆಲ್ಫಿ ಚಿತ್ತದಲ್ಲಿ ತೆಲಂಗಾಣದಲ್ಲಿ ಐವರು ವಿದ್ಯಾರ್ಥಿಗಳ ದುಃಖಕರ ಸಾವು.

ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ಐವರು ಹೈದರಾಬಾದ್ ಮೂಲದ ವಿದ್ಯಾರ್ಥಿಗಳು ಜಲಾಶಯದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.…

10 hours ago

ಬಾವನೊಂದಿಗೆ ಅಕ್ರಮ ಸಂಬಂಧ, ಪತಿ ಹತ್ಯೆ, – ಹೊತ್ತಿರುವ ಕಥೆ ಭಯಾನಕ ಸತ್ಯ!

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮುಕ್ಕಂದೂರು ಹೊಸಳ್ಳಿ ಗ್ರಾಮದಲ್ಲಿ ಒಂದು ಭಯಾನಕ ಘಟನೆ ನಡೆದಿದೆ. ಪತಿಯ ಹತ್ಯೆಯನ್ನು ತನ್ನ ಬಾವನೊಂದಿಗೆ…

10 hours ago

ಹೊಸ್ಪೇಟೆಯಲ್ಲಿ ವೇದಿಕೆ ಮೇಲೆ ಕುಳಿತಿದ್ದ ಜಿಲ್ಲಾಧಿಕಾರಿಯನ್ನು ಗದರಿಸಿ ಕಳುಹಿಸಿದ ಸಿಎಂ ಸಿದ್ದರಾಮಯ್ಯ!

ಹೊಸಪೇಟೆ: 2025 ಜನವರಿ 13 ರಂದು, ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಯ…

11 hours ago

ಕುಂಭಮೇಳದಲ್ಲಿ ಸುಂದರ ಸಾಧ್ವಿ; ಸಂದರ್ಶನದ ವಿಡಿಯೋ ವೈರಲ್!

2025 ಜನವರಿ 13ರಿಂದ ಮಹಾಕುಂಭಮೇಳ ಪ್ರಾರಂಭವಾಗಿದ್ದು, ಸಂಗಮ ದಡದಲ್ಲಿ ನಾಗಾ ಸಾಧುಗಳ ಹಠಯೋಗ, ಸಂತರ ತಪಸ್ಸು ಮತ್ತು ಭಕ್ತರ ಭಕ್ತಿ…

12 hours ago

ಮಹಿಳೆಯರನ್ನು ಗರ್ಭಿಣಿ ಮಾಡಿದ್ರೆ 10 ಲಕ್ಷ ಬಂಪರ್ ಆಫರ್: ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್

ಬಿಹಾರ: ಮಹಿಳೆಯರನ್ನು ಗರ್ಭಿಣಿ ಮಾಡುವುದಾಗಿ ಭರವಸೆ ನೀಡಿ ₹10 ಲಕ್ಷ ಬಹುಮಾನ ನೀಡಿ ವಂಚನೆ ನಡೆಸುತ್ತಿದ್ದ ಖತರ್ ನ್ಯಾಕ್ ಗ್ಯಾಂಗ್…

13 hours ago