ಬಿಗ್ ಬಾಸ್ ನ ಮೂಲಕ ಒಳ್ಳೆ ಹುಡುಗ ಪ್ರಥಮ್ ಎಂದು ಪ್ರಖ್ಯಾತಿ ಪಡೆದಿರುವ ಪ್ರಥಮ್ ರವರು ಟ್ವೀಟ್ ಮಾಡುವ ಮೂಲಕ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜೈ ಕರ್ನಾಟಕ ಪೋಲೀಸ್; ದರ್ಶನ್ ಸರ್ ಗೆ ಚಪ್ಪಲಿ ಎಸೆದವನ ಹಿಡಿಯೋಕಾಗಿಲ್ಲ, ಕೋಟ್ಯಾಂತರ ತೆರಿಗೆ ದೋಚೋ ಕಳ್ಳರ ಹಿಡಿಯಲ್ಲ, ರೀಲ್ಸ್ ಮಾಡೋ ಪೆದ್ದ ದೀಪಕ್ ಅನ್ನೋ ಹುಡುಗನ್ನ ಅರೆಸ್ಟ್ ಮಾಡಿದ್ ಕೇಳಿ ನಗು ಬಂತು! ಹೆಲ್ಮೇಟ್ ಹಾಕದವರನ್ನ ಟೆರರಿಸ್ಟ್ ಥರ ಓಡಿಸಿ ಹಿಡಿತೀರಾ, ದೀಪಕ್ ಗಿಂತಲೂ ದೊಡ್ಡ ತಪ್ಪು ಮಾಡಿದವರಿದ್ದಾರೆ. ಮೊದ್ಲು ಹಿಡಿಯಿರಿ;” ಎಂದು ಟ್ವೀಟ್ ಮಾಡುವ ಮೂಲಕ ಪೊಲೀಸರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇವರ ಈ ಟ್ವೀಟ್ ಗೆ ಕೆಲವರು ಒಳ್ಳೆಯ ಪ್ರಶ್ನೆ ಎಂದರೆ ಇನ್ನು ಕೆಲವರು ಇದು ಬೇಕಿತ್ತಾ ಎನ್ನುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರ ಈ ಟ್ವೀಟ್ ಇದೀಗ ವೈರಲಾಗುತ್ತಿದೆ.
ಜೈ ಕರ್ನಾಟಕ ಪೋಲೀಸ್;@dasadarshan sirಗೆ ಚಪ್ಪಲಿ ಎಸೆದವನ ಹಿಡಿಯೋಕಾಗಿಲ್ಲ,
ಕೋಟ್ಯಾಂತರ ತೆರಿಗೆ ದೋಚೋ ಕಳ್ಳರ ಹಿಡಿಯಲ್ಲ,
ರೀಲ್ಸ್ ಮಾಡೋ ಪೆದ್ದ #ದೀಪಕ್ ಅನ್ನೋ ಹುಡುಗನ್ನ ಅರೆಸ್ಟ್ ಮಾಡಿದ್ ಕೇಳಿ ನಗು ಬಂತು!
ಹೆಲ್ಮೇಟ್ ಹಾಕದವರನ್ನ terroristಥರ ಓಡಿಸಿ
ಹಿಡಿತೀರಾ,
ದೀಪಕ್ ಗಿಂತಲೂ ದೊಡ್ಡ ತಪ್ಪು ಮಾಡಿದವರಿದ್ದಾರೆ.ಮೊದ್ಲು ಹಿಡಿಯಿರಿ;— Olle Hudga Pratham (@OPratham) March 8, 2023