ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ದಿನಾಂಕ 24/07/2024 ಬೆಳಿಗ್ಗೆ ಸುಮಾರು 9:30 ರ ಸಮಾಯಕ್ಕೆ ಯಲ್ಲಾಪುರ ತಾಲೂಕಿನ ಮಂಚಿಕೇರಿ ಹೋಬಳಿಯ ಹಸನಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಾಳಕೊಪ್ಪ ಗ್ರಾಮದಲ್ಲಿ, ವಿನಯ ಗಾಡಿಗ ಎನ್ನುವನು ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಹೋಗುವ ದಾರಿಯಲ್ಲಿ ಬೈಕ್ ಮೇಲೆ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಈತನ ವಯಸ್ಸು 25 ಕಬ್ಬಿನ ಗದ್ದೆ ನಿವಾಸಿ,ಆಗಿದ್ದು ಈ ಘಟನೆ ಸಂಭವಿಸಿದೆ, ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿ ಸಿಬ್ಬಂದಿಗಳು ವ್ಯಕ್ತಿಯ ಮೇಲೆ ಇದ್ದ ಮರವನ್ನು ತುಂಡರಿಸಿ ತೆರವುಗೊಳಿಸಿದರು,ಈ ಬಗ್ಗೆ ಮಾನ್ಯ ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿದ್ದಾರೆ.
ವರದಿ : ಶ್ರೀಪಾದ್ ಎಸ್