ಶೌರ್ಯ ಏರ್ಲೈನ್ಸ್ನ 9ಎನ್-ಎಎಂಇ (ಸಿಆರ್ಜೆ 200) ವಿಮಾನ ಟೇಕಾಫ್ ಆಗುವ ವೇಳೆ ಪತನಗೊಂಡು 18 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ನೇಪಾಳ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಜುಲೈ 24ರ ಬೆಳಗ್ಗೆ ನಡೆದಿದೆ.
🔴#BREAKING | Video Shows Exact Moment Plane Crashed At Kathmandu Airport #NepalPlaneCrash #Kathmandu #Nepal pic.twitter.com/saj1eUNN9m
— NDTV (@ndtv) July 24, 2024
ವಿಮಾನದಲ್ಲಿ ಪೈಲಟ್ ಸೇರಿ 19 ಮಂದಿ ಇದ್ದರು. 18 ಮಂದಿಯ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ. ವಿಮಾನದ ಅವಶೇಷಗಳಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ 37 ವರ್ಷದ ಪೈಲಟ್ ಮನಿಶ್ ಶಕ್ಯ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶೌರ್ಯ ಏರ್ಲೈನ್ಸ್ ವಿಮಾನವು ವಿಮಾನಯಾನ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ವಿಮಾನವು ಕಠ್ಮಂಡುವಿನಿಂದ ಪೋಖರಾಗೆ ತೆರಳುತ್ತಿತ್ತು. ಟೇಕಾಫ್ ಆಗುವಾಗ ರನ್ವೇನಿಂದ ಜಾರಿದ್ದು, ಬೆಳಗ್ಗೆ 11 ಗಂಟೆ ಸುಮಾರಿಗೆ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿತು. ಈ ಅಪಘಾತದ ನಂತರ ವಿಮಾನದಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ.
#NepalPlaneCrash Update | Bodies of 5 people have been recovered so far.
Visuals from accident site. pic.twitter.com/T6kj3cyImC
— NDTV (@ndtv) July 24, 2024