ಮುಂಡಗೋಡ: ಅಡಿಕೆ ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆಯನ್ನು ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿ ಆತನಿಂದ ಎರಡುವರೆ ಲಕ್ಷ ಲಕ್ಷ ಮೌಲ್ಯದ ಅಡಿಕೆ ಹಾಗೂ ಅಶೋಕ ಲೈಲ್ಯಾಂಡ್ ವಾಹನ ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಕೊಪ್ಪ ಇಂದಿರಾನಗರ ಗ್ರಾಮದ ಪಕ್ಕಿರೇಶ ದೊಡ್ಮನಿ ಬಂಧಿತ ಆರೋಪಿಯಾಗಿದ್ದಾನೆ.
ಈತನು ರಮೇಶ ಕಾಮತ್ ಹಾಗೂ ನವೀನ ಹುದ್ಲಮನಿ ಅವರ ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆಯನ್ನು ಕಳ್ಳತನ ಮಾಡಿದ್ದಾನೆ. ಘಟನೆಯ ವಿವರ:ಪಕ್ಕಿರೇಶ ದೊಡ್ಮನಿ ಇವನು ಜುಲೈ 26 ರಂದು ಹಳೂರ ಓಣಿಯಲ್ಲಿರುವ ತೋಟಗಳಲ್ಲಿಯ ಮನೆಯಲ್ಲಿದ್ದ ರಮೇಶ ಕಾಮತ್ ಹಾಗೂ ನವೀನ್ ಹುದ್ಲಮನಿ ಅವರ ಅಡಿಕೆಯನ್ನು ಕಳ್ಳತನ ಮಾಡಿ ಆ ಅಡಿಕೆಯನ್ನು ರಸ್ತೆ ಬದಿಗೆ ತಂದು ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಮನೆಗೆ ಸಾಗಿಸಿದ್ದಾನೆ ನಂತರ ಎರಡು ಮೂರು ದಿನಗಳ ನಂತರ ಯಲ್ಲಾಪುರ ತಾಲೂಕಿನ ಗಣೇಶ ಪ್ರಸಾದ್ ಟ್ರೇಡರ್ಸ ಅವರಿಗೆ ಮಾರಾಟ ಮಾಡಿ ಬಂದ ಹಣದಿಂದ ೮೦ ಸಾವಿರ ನೀಡಿ ಹೊಸ ಟಾಟಾ ಎಸ್ ವಾಹನ ಖರೀದಿ ಮಾಡಿದ್ದಾನೆ.ಪೈನಾನ್ಸನಲ್ಲಿ ಕಂತು ಮೂಲಕ ಸಾಲಮಾಡಿ ವಾಹನ ಖರೀದಿ ಮಾಡಿರುವುದಾಗಿ ತನಿಖೆ ವೇಳೆ ಪೊಲೀಸರಿಗೆ ಬಾಯಿ ಬಿಟ್ಟಿದ್ದಾನೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ್, ಹೆಚ್ಚುವರಿ ಎಸ್.ಪಿ ಎಸ್ ಬದರಿನಾಥ, ಡಿ.ವಾಯ್.ಎಸ್.ಪಿ ರವಿ ನಾಯ್ಕ, ಸಿ.ಪಿ.ಐ ಸಿದ್ದಪ್ಪ ಸಿಮಾನಿ ಅವರ ನೇತ್ರತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಕೈ ಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಸಿ.ಪಿ.ಐ ಸಿದ್ದಪ್ಪ ಸಿಮಾನಿ, ಪಿ‌.ಎಸ್.ಐ ಬಸವರಾಜ್ ಮಬನೂರ, ಎನ್. ಡಿ. ಜಕ್ಲಣ್ಣನವರ ಹಾಗೂ ಮಣಿಮಾಲನ್ ಮೆಸ್ತಾ, ಸಲೀಮ, ಕೋಟೇಶ ನಾಗರೊಳ್ಳಿ, ಅಣ್ಣಪ್ಪ ಬಡಿಗೇರ, ಬಸವರಾಜ್ ಲಮಾಣಿ, ವಿವೇಕ್ ಪಟಗಾರ, ಸಹದೇವ, ಶರತ್ ದೇವಳ್ಳಿ ಇವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ್ ಪ್ರಶಂಸಿಸಿ ಸಾಧನೆ ವ್ಯಕ್ತಪಡಿಸಿದ್ದಾರೆ
ವರದಿ: ಮಂಜುನಾಥ ಹರಿಜನ

error: Content is protected !!