ಉತ್ತರಕನ್ನಡ ಜಿಲ್ಲೆಯಲ್ಲಿ ಗಾಂಜದ ಗಮಲು ಮತ್ತೆ ಮತ್ತೆ ಸದ್ದು ಮಾಡುತ್ತಾ ಇದೆ.
ಹೀಗೆಯೆ ಒಂದು ಘಟನೆ ಅಕ್ರಮವಾಗಿ ಗಾಂಜವನ್ನು ದೀ 7/3/2023 ರಂದು ಕುಮಟಾ ತಾಲೂಕಿನಲ್ಲಿ ಮೂರೂರು ಗುಡ್ಡದ ಬಳಿ ವಿಶ್ವಕರ್ಮ ಹಾಲ್ ಪಕ್ಕದಲ್ಲಿ ಅನಧಿಕೃತವಾಗಿ ಗಾಂಜವನ್ನ ಮಾರಾಟ ಮಾಡುತ್ತಿದ್ದರು.ವಿಷಯ ತಿಳಿದ ಪೊಲೀಸ್ ಅಧಿಕಾರಿಗಳು ಆರೋಪಿಗಳಾದ ಮೂರೂರು ಅಂಗಡಿಕೆರಿ ನಿವಾಸಿ ಪ್ರಸಾದ ಹೊಸಳ್ಳಿ, ಪ್ರಾಯ(24) ಸುನಿಲ್ ಸತ್ಯನಾರಾಯಣ ಮಕ್ರಿ ಪ್ರಾಯ (30) ಇವರು ಅನಧಿಕೃತವಾಗಿ 10,000 ಬೆಲೆಯ 230 ಗ್ರಾಂ ಗಾಂಜಾ ಮಾರಾಟ ಮತ್ತು ನ ಮಾಡುತ್ತಿದ್ದ ಇವರನ್ನು ಹಾಗೂ ಹೊಂಡ ದ್ವಿಚಕ್ರ ವಾಹನ KA 22.W.0528, ಮತ್ತು ನಗದು ಹಣ 660 ಪೊಲೀಸರು ವಶಕ್ಕೆ ತೆಗೆದುಕೊಂಡು 15 ದಿನಗಳ ಕಾಲ ನ್ಯಾಯಂಗ ವಶಕ್ಕೆ ಒಪ್ಪಿಸಿದ್ದಾರೆ.
ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯು ಹವಾಲ್ದಾರ ಗಣೇಶ ನಾಯಕ್ , ರಾಜನಾಯಕ್,ಕಾನ್ಸ್ಟೇಬಲ್,ಗುರು ನಾಯಕ ಶಿವಾನಂದ ಪ್ರದೀಪ ಮಲ್ಲಿಕಾರ್ಜುನ್ ಮುಂತಾದವರು ಪಾಲ್ಗೊಂಡಿದ್ದರು.
ಪಿ ಎಸ್ ಐ,ಮಂಜುನಾಥ ಗೌಡರ್ ಪ್ರಕರಣ ದಾಕಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ..
ವರದಿ: ಶ್ರೀಪಾದ್ ಎಸ್ ಏಚ್