ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಪಾತಪಲ್ಲಿ ಗ್ರಾಮದ ಅಪ್ಪಿರೆಡ್ಡಿ ಎಂಬುವವರನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೇವರಾಜ್, ಐ.ಪಿ.ಎಸ್ ಹಾಗೂ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಸಚಿನ್ ಘೋರ್ಪಡೆ ರವರ ಮಾರ್ಗದರ್ಶನದಲ್ಲಿ ಮುಳಬಾಗಿಲು ಉಪವಿಭಾಗದ ಡಿ.ಎಸ್.ಪಿ ಶ್ರೀ ಜಯಶಂಕರ್ ರವರ ಮುಂದಾಳತ್ವದಲ್ಲಿ ಶ್ರೀನಿವಾಸಪುರ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಜಿ.ಸಿ ನಾರಾಯಣಸ್ವಾಮಿ ರವರು ತಮ್ಮ ಸಿಬ್ಬಂದಿಯವರೊಡನೆ ಕಾರ್ಯಾಚರಣೆ ನಡೆಸಿ ಆರೋಪಿಗಳಾದ (1) ಮಂಜುನಾಥ ಬಿನ್ ನರಸಿಂಹಯ್ಯ ಹಾಗೂ (2) ಮಂಜುನಾಥ ಬಿನ್ ರೆಡ್ಡಪ್ಪ ಎಂಬುವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿಗಳು ಬಳಸಿದ್ದ ದ್ವಿಚಕ್ರವಾಹನ ಹಾಗೂ ಕಳವು ಮಾಡಿದ್ದ 1.25 ಲಕ್ಷ ರೂ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.