ಧಾರವಾಡ ನಗರದ ಸವಿತಾ ಎಂಬ ಮಹಿಳೆ ಎಲ್ಲರ ಹಾಗೇ ಮದುವೆ ಮಾಡಿಕೊಂಡು ಸಂಸಾರ ಮಾಡಬೇಕೆಂದು ಕನಸುಗಳನ್ನು ಕಟ್ಟಿಕೊಂಡು ಮದುವೆಯಾಗಿ ಸ್ವಲ್ಪೇ ದಿನಗಳಲ್ಲಿ ಗಂಡನನ್ನು ಕಳೆದುಕೊಂಡಿದ್ದಳು ಗಂಡನನ್ನು ಕಳೆದುಕೊಂಡಿದ್ದ ಈ ಮಹಿಳೆ ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡು ಧಾರವಾಡ ನೆಹರೂ ನಗರದ ನೆಹರೂ ನಗರದಲ್ಲಿ ವಾಸವಾಗಿದ್ದಳು ಗಂಡನನ್ನು ಕಳೆದುಕೊಂಡಿದ್ದ ಸವಿತಾಳಿಗೆ ಆನಂದ್ ಎಂಬ ಯುವಕ ಪರಿಚಯವಾಗಿ ಇಬ್ಬರ ಮದ್ಯೆ ಸ್ನೇಹ ಬೆಳೆದಿತ್ತು ಇಬ್ಬರ ಸ್ನೇಹ ದಿನದಿಂದ ದಿನಕ್ಕೆ ಹೆಚ್ಚಾಗಿ ಇವರಿಬ್ಬರ ನಡುವಿನ ಸಂಬಂಧ ಅನೈತಿಕ (ಅಕ್ರಮ ಸಂಬಂಧ) ಸಂಬಂಧವಾಗಿ ತಿರುಗಿತ್ತು ಇಬ್ಬರು ಅನೈತಿಕ ಸಂಬಂಧಕ್ಕೇ ಪರಸ್ಪರ ಒಪ್ಪಿಕೊಂಡಿದ್ದರು ಹೀಗೆ ಇದ್ದಾಗ ಆನಂದ್ ಸವಿತಾಳಿಗೆ ಆಗಾಗ ಹಣವನ್ನು ಕೊಡುತ್ತಿದ್ದ.
ಆದರೇ ಇಷ್ಟಕ್ಕೇ ಸುಮ್ಮನಿರದ ಸವಿತಾ ಮತ್ತೊಬ್ಬ ವ್ಯಕ್ತಿಯ ಜೊತೆ ಸಂಪರ್ಕದಲ್ಲಿ ಇರುವುದನ್ನು ತಿಳಿದ ಆನಂದ್ ಸವಿತಾಳಿಗೆ ನಾ ಏನೂ ಕಡಿಮೆ ಮಾಡಿಲ್ಲ ಆದರೂ ಇವಳು ಹೀಗೆ ನನಗೆ ಮೋಸ ಮಾಡುತ್ತಿದ್ದಾಳೆ ಎಂದರೇ ಇವಳನ್ನು ಜೀವ ಸಹಿತ ಉಳಿಸಬಾರದು ಎಂದು ಕೋಪವನ್ನು ನೆತ್ತಿಗೆರಿಸಿಕೊಂಡ ಆನಂದ ಕಳೆದ ಅ 14 ರಂದು ಸವಿತಾಳ ಉಸಿರು ನಿಲ್ಲಿಸಲು ನಿರ್ಧರಿಸಿದ ಅ 14 ರ ರಾತ್ರಿ ಧಾರವಾಡ ಜಿಲ್ಲಾ ಆಸ್ಪತ್ರೆಯ ಬಳಿ ಯಾವದೋ ಕೆಲಸಕ್ಕೇ ಬಂದಿದ್ದ ಸವಿತಳನ್ನು ಜಿಲ್ಲಾ ಆಸ್ಪತ್ರೆಯ ಬಳಿ ರಸ್ತೆ ಮದ್ಯೆ ತಡೆದು ಹರಿತವಾದ ತಲ್ವಾರ್ ದಿಂದ ಮನ ಬಂದಂತೆ ಕೊಚ್ಚಿ ಅವಳನ್ನು ಕೊಲೆ ಮಾಡಿ ಅಲ್ಲಿಂದ ತಲೆ ಮರೆಸಿಕೊಂಡಿದ್ದ ನಂತರ ತಡ ರಾತ್ರಿ ಆ ದಾರಿಯಲ್ಲಿ ಓಡಾಡುವ ಸಾರ್ವಜನಿಕರು ಸವಿತಾಳ ಮೃತ ದೇಹವನ್ನು ನೋಡಿ ಭಯದಿಂದ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದರು.
ಆ ರಾತ್ರೀ ಧಾರವಾಡ ನಗರದ ಸ್ಥಳಿಯರು ಬೆಚ್ಚಿಬಿದ್ದಿದ್ದರು ಇತ್ತ ಧಾರವಾಡ ಉಪನಗರ ಪೊಲೀಸ್ ಠಾಣೆಯ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿ ಸವಿತಾಳ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಲೆಗಾರ ಆನಂದನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿ ಆನಂದನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ವರದಿ : ಶಿವ ಹುಬ್ಬಳ್ಳಿ .