ವಿಜಯಪುರ: ದೇಶದ ಸ್ವಾತಂತ್ರ್ಯದ ಆಡಳಿತಕ್ಕೆ ಬಂದು ಸುಮಾರು ದಿನಗಳು ಕಳದಿವೆ ಆದರೆ ಇಲ್ಲಿ ಸೇತುವೆ ನಿರ್ಮಾಣ ಮಾಡಬೇಕು ಎಂದು ಈ ಗ್ರಾಮಕ್ಕೆ ಬಂದಿರುವ ಶಾಸಕರಾಗಲಿ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕ ಪ೦ಚಾಯಿತಿ ಸದಸ್ಯರಾಗಾಲಿ ಗಮನಕ್ಕೆ ಬಂದರು. ಕೂಡಾ ಬಾರದೆ ಇರುವಂತೆ ಇರುವುದು ಗ್ರಾಮಸ್ಥರಿಗೆ ಒದಗಿ ಬ೦ದ ದುರಂತ: ಮಳೆಗಾಲದಲ್ಲಿ ಇಲ್ಲಿನ ಜನರಿಗೆ ಅನಾರೋಗ್ಯ ಉಂಟಾದರೆ ಸಾವೊಂದೇ ಮೊದಲ ಹಾಗೂ ಕೊನೆಯ ಆಯ್ಕೆ ಪಟ್ಟಣವನ್ನು ಸಂಪರ್ಕಿಸಲು ಈ ಹಳ್ಳದಾಟೆ ಹೋಗಬೇಕು.
ಹೌದು ಇದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮಸ್ಥರ ಪರಿಸ್ಥಿತಿ ಮಳೆಗಾಲ ಆರಂಭವಾದರೆ ಜನರಿಗೆ ಆಂತಕ ಶುರುವಾಗುತ್ತಿದೆ.
ಮಳೆಗಾಲದಲ್ಲಿ ಜನರ ಸಂಕಷ್ಟ ಮಾತ್ರ ತಪ್ಪಿದ್ದಲ್ಲ. ಪ್ರತಿ ವರ್ಷ ಮಳೆಗಾಲ ಬತ್ತೆಂದರೆ ಈ ಗ್ರಾಮದ ಜನರಿಗೆ ಭಯ ಕಾಡುತ್ತಿದೆ ತುಂಬಿ ಹರಿಯುವ ಹಳ್ಳ ದಾಟೋದು ಹೇಗೆ ಎಂಬ ಚಿಂತೆ ಕಾಡುತ್ತಿದೆ.ಸೇತುವೆ ಇಲ್ಲದ ಕಾರಣ ಇಲ್ಲಿಯ ಜನರ ಗೋಳು ಹೇಳತಿರದಾಗಿದೆ ಹಳ್ಳ ಮಳೆಗಾಲದಲ್ಲಿ ಅಪಾರ ನೀರಿನೊಂದಿಗೆ ದೊಡ್ಡ ನದಿಯಂತೆ ಹರಿಯುತ್ತಿದೆ ಇದರಿಂದ ಪ್ರತಿ ವರ್ಷ ಗ್ರಾಮಸ್ಥರು ಮಳೆಗಾಲದಲ್ಲಿ ಉಕ್ಕಿ ಹರಿಯುವ ಹಳ್ಳದಿಂದ ತೊಂದರೆಗೆ ಒಳಗಾಗುತ್ತಿದ್ದಾರೆ. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುದರಿಂದ ಗ್ರಾಮದಿಂದ ಪಟ್ಟಣಕ್ಕೆ ತೆರಳಲು ಸಾಧ್ಯವಾಗುವುದಿಲ್ಲ ಅನಾರೋಗ್ಯ ಪೀಡಿತರು, ಗರ್ಭಿಣಿಯರು,ಚಿಕಿತ್ಸೆಗೆಂದು ಆಸ್ಪತ್ರೆಗಳಿಗೆ ಹೋಗಲು ಆಗಲ್ಲ ಸಂಜೆ ವೇಳೆಗೆ ಮಳೆ ಬಂದು ಹಳ್ಳ ತುಂಬಿದರೆ ಮನೆಗೆ ತಲುಪಲು ಸಾಧ್ಯವಾಗುವುದೇ ಇಲ್ಲ ನೀರಿನ ಸೆಳೆತೆ ಅರಿಯದ ಸಾರ್ವಜನಿಕರು ಮನೆ ಸೇರುವ ತವಕದಲ್ಲಿ ಹಳ್ಳ ದಾಟುವ ಬಂಡ ದೈರ್ಯ ಮಾಡುತ್ತಾರೆ. ತಿಳಿಯದ
ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ.ಇದಕ್ಕೆ ಮೂಲ ಕಾರಣ ಇಲ್ಲಿನ ಜನ ಪ್ರತಿನಿಧಿಗಳು ಮಾತ್ರ ಕಣ್ಣಿದ್ದೂ ಜಾಣ ಕುರುಡುತನ ಪ್ರದರ್ಶನ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಈಗಲಾದರೂ ಎಚ್ಚೆತ್ತುಕೊಂಡು ಈ ಗ್ರಾಮದ ಕಡೆಗೆ ಗಮನ ಹರಸಿ ಮಾರ್ಕಬ್ಬಿನಹಳ್ಳಿ ಗ್ರಾಮದ ಉರು ಮುಂದಿನ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಿ ಗ್ರಾಮಸ್ಥರಿಗೆ ಹಾಗೂ ಈ ರಸ್ತೆಗೆ ಅಡ್ಡಾಡುತ್ತಿರುವ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡುತ್ತಾರೋ ಇಲ್ಲವೋ ಕಾಯ್ದು ನೋಡಬೇಕಾಗಿದೆ.
ವರದಿ: ಮಹಾಂತೇಶ ಹಾದಿಮನಿ.