ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲಕೇರಿಯಿಂದ ಕೊಂಡಗೂಳಿ ವರೆಗೆ ಇರುವ ರಸ್ತೆಯನ್ನು ಕಳೆದ ಎಂಟು ತಿಂಗಳ ಹಿಂದೆ ಹೊಸದಾಗಿ ನಿರ್ಮಾಣ ಮಾಡಲಾಗಿತ್ತು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿಯು ನಿರ್ಮಾಣವಾಗಿತ್ತು.
ಭ್ರಷ್ಟ ಅಧಿಕಾರಿಗಳು ಮಾಡಿಸಿರುವ ಕಳಪೆ ಕಾಮಗಾರಿಯಿಂದಾಗಿ ಎಂಟೆ ತಿಂಗಳಿಗೆ ರಸ್ತೆ ಹಾಳಾಗಿದೆ.
ಕೆಲವು ಗ್ರಾಮಸ್ಥರು ಇದು ಶಾಸಕರ ಬೇಜವಾಬ್ದಾರಿತನ ಎಂದು ದೂರಿದರೆ ಇನ್ನು ಕೆಲವರು ಭ್ರಷ್ಟ ಅಧಿಕಾರಿಗಳು ಕಾಮಗಾರಿ ಕಳಪೆ ಮಾಡಿಸಿ ಹಣ ಹೊಡೆದಿದ್ದಾರೆ ಎಂದು ದೂರುತ್ತಿದ್ದಾರೆ.
ಅದೇನೇ ಇರಲಿ, ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ನಿರ್ಮಾಣ ಮಾಡಿರುವಂತಹ ರಸ್ತೆ ಕೆಲವೇ ತಿಂಗಳಲ್ಲಿ ಹಾಳಾಗಿದೆ ಎಂದರೆ ಸರ್ಕಾರದ ಹಣವೇನು ಬ*** ಬಿದ್ದಿದೆಯಾ ಈ ರೀತಿ ಕಳಪೆ ಮಾಡಿಸಲು.
ಅಧಿಕಾರಿಗಳು ಸರ್ಕಾರ ನೀಡಿರುವಂತಹ ಕಾರಿನಲ್ಲಿ ನೆಮ್ಮದಿಯಾಗಿ ಓಡಾಡುತ್ತಾರೆ ಇನ್ನು ಶಾಸಕರ ಬಗ್ಗೆಯಂತೂ ಹೇಳುವ ಹಾಗೆ ಇಲ್ಲ ಹೊರಟರೆ ಹಿಂದೆ ಎರಡು ಮುಂದೆ ಎರಡು ಕಾರು ಇದ್ದೇ ಇರುತ್ತವೆ. ಆದರೆ ಜನರ ಪಾಡೇನು? ಚಿಕ್ಕ ಪುಟ್ಟ ದ್ವಿಚಕ್ರ ವಾಹನಗಳನ್ನು ಇಟ್ಟುಕೊಂಡು ಇಂತಹ ಹಾಳಾದ ರಸ್ತೆಯಲ್ಲಿ ಹೋಗುವಾಗ ಅಪಘಾತವಾದರೆ ಅದಕ್ಕೆ ಹೊಣೆ ಯಾರು? ಭ್ರಷ್ಟ ಅಧಿಕಾರಿಗಳ? ಅಥವಾ ಜನಪ್ರತಿನಿಧಿಗಳ?
ಈ ರಸ್ತೆಯಿಂದಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯುವ ಮುನ್ನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ರಸ್ತೆ ಸರಿಪಡಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

error: Content is protected !!