Latest

ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸಿದ ಮುಂಡಗೋಡ ಪೊಲೀಸರು!

ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ವ್ಯಾಪಾರಿಯ ಗಮನವನ್ನು ಬೇರೆ ಕಡೆ ಸೆಳೆದು ರೂ 1,68,442 ಹಣವನ್ನು ಹಾಗೂ ಮೂರು ಚೆಕ್ ಗಳನ್ನು ಕಳ್ಳತನ ಮಾಡಿದ್ದಆರೋಪಿಯನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 10 ರಂದು ಮುಂಡಗೋಡದ ಬಸ್ ನಿಲ್ದಾಣದಲ್ಲಿ ಹುಬ್ಬಳ್ಳಿಯ ದೇವರಾಮ ಖವಾಸ ಎಂಬ ಬಟ್ಟೆ ವ್ಯಾಪಾರಿಯು ಆನವಟ್ಟಿ ,ಹಾನಗಲ್, ಮುಂಡಗೋಡ ದಲ್ಲಿರುವ ಬಟ್ಟೆ ಅಂಗಡಿಗಳಲ್ಲಿ ಸಂಗ್ರಹಿಸಿದ್ದ ರೂ 1,68,442 ಹಣವನ್ನು ಹಾಗೂ ಬ್ಯಾಗ್ ನಲ್ಲಿದ್ದ ಕೆನರಾ ಬ್ಯಾಂಕಿನ ಎರಡು,ಎಸ್.ಬಿ.ಐ ಬ್ಯಾಂಕಿನ 1 ಚೆಕ್ ಗಳನ್ನು ಕಳ್ಳತನ ಮಾಡಿದ್ದಾರೆಂದು ದೂರು ದಾಖಲಿಸಿದ್ದರು.ಈ ಪ್ರಕರಣವನ್ನು ಕೈಗೆತ್ತಿಕೊಂಡ ಮುಂಡಗೋಡ ಪೊಲೀಸರು ಹುಬ್ಬಳ್ಳಿಯ ರಾಕೇಶ ಗುಂಜಾಳ ಎಂಬಾತನನ್ನು ಬಂಧಿಸಿದ್ದಾರೆ.ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿಯು ಭಾಗಿಯಾಗಿದ್ದು ಆತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಉತ್ತರ ಕನ್ನಡದ ಎಸ್.ಪಿ.ಸುಮನ್ ಪನ್ನೆಕರ್,ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಎಸ್. ಬದರಿನಾಥ್,ಡಿ.ಎಸ್.ಪಿ. ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದಪ್ಪ ಸಿಮಾನಿ,ಪಿ.ಎಸ್.ಐ ಬಸವರಾಜ್ ಮಬನೂರ,ಪಿ.ಎಸ್.ಐ ನಿಂಗಪ್ಪ ಜಕ್ಕಣ್ಣವರ,ಪ್ರೊಬೇಷನರಿ ಪಿ.ಎಸ್.ಐ ಮಹೇಶ ಮಾಳಿ,ಎ.ಎಸ್.ಐ ಮಣಿಮಾಲನ್ ಮೇಸ್ತ್ರೀ,ಸಿಬ್ಬಂದಿಗಳಾದ ಮಹ್ಮದ ಸಲಿಂ,ಕೊಟೇಶ್ ನಾಗರವಳ್ಳಿ ಅಣ್ಣಪ್ಪ ಬಡಿಗೇರ,ಬಸವರಾಜ ಲಮಾಣಿ, ಶಂಭುಲಿಂಗ ಜಾವೂರ, ಕಾಶಿರಾಯ ಕನ್ನಾಳ, ಸಂಗಮೇಶ ದೊಡ್ಡವಾಡ ,ಎ‌.ಎಚ.ಸಿ ನಾಗರಾಜ ಬೇಗಾರ ಮುಂಡಗೋಡ ಪೊಲೀಸ್ ಠಾಣೆ ಹಾಗೂ ಕಾರವಾರ ತಾಂತ್ರಿಕ ಸಿಡಿಆರ್ ವಿಭಾಗದ ಉದಯ ಗುನಗಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವರದಿ: ಮಂಜುನಾಥ ಹರಿಜನ

kiran

Recent Posts

ಬೈಕ್ ಟಿಪ್ಪರ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…

1 month ago

ಅಪರಿಚಿತ ಕಾರು ಡಿಕ್ಕಿ; ಐವರಿಗೆ ಗಂಭೀರ ಗಾಯ, ಓರ್ವ ಮಹಿಳೆ ಸ್ಥಳದಲ್ಲೇ ಸಾವು.

ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…

1 month ago

ರಸ್ತೆ ಅಪಘಾತ; ಗೊಲಗೇರಿ ಗ್ರಾಮದ ಯುವಕ ಸಾವು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…

1 month ago

ಕುಡಿಯುವ ನೀರಿನ ಬಿಲ್ ಪಾವತಿ ಮಾಡಬೇಡಿ -ಮಾಜಿ ಶಾಸಕ ಹರ್ಷವರ್ಧನ್

ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…

1 month ago

ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…

1 month ago

ಮಟ-ಮಟ ಮಧ್ಯಾಹ್ನ‌ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ ‌

ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…

1 month ago