ಬೈಕ್ ಸ್ಟಂಟ್ ಎಂಬುದು ಈಗ ಹಲವರ ಶೋಕಿ. ತಾವು ತಮ್ಮ ಸಾಹಸವನ್ನು ಪ್ರದರ್ಶಿಸಬೇಕು, ನಮ್ಮ ಸಾಮರ್ಥ್ಯವನ್ನು ಕಂಡು ಎಲ್ಲರೂ ಅಚ್ಚರಿಪಡಬೇಕು, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಬೇಕು ಎಂಬುದು ಇವರ ಹಪಹಪಿ. ಈ ಹಪಹಪಿಯಲ್ಲಿ ಇವರು ಕೆಲವೊಮ್ಮೆ ಯಾವ ಅಪಾಯವನ್ನು ಬೇಕಾದರೂ ಎದುರಿಸಲು ಸಿದ್ಧರಿರುತ್ತಾರೆ. ಜತೆಗೆ, ಸಂಕಷ್ಟಕ್ಕೂ ಗುರಿಯಾಗುತ್ತಾರೆ. ಇಂತಹ ಸಾಕಷ್ಟು ದೃಶ್ಯಗಳನ್ನು ನೀವು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ನೋಡಿಬಹುದು. ಹೀಗೆ ಸ್ಟಂಟ್ ಪ್ರದರ್ಶಿಸುವವರ ವಿರುದ್ಧ ಸಾಕಷ್ಟು ಬಾರಿ ಕ್ರಮ ಕೂಡಾ ಕೈಗೊಳ್ಳಲಾಗಿದೆ. ಆದರೆ, ಸಾಹಸ ಪ್ರದರ್ಶಿಸಿ ಕಷ್ಟಕ್ಕೆ ಗುರಿಯಾಗುವವರ ಸಂಖ್ಯೆಯಂತು ಕಡಿಮೆಯಾಗಿಲ್ಲ. ಸದ್ಯ ಅಂತಹದ್ದೇ ಇನ್ನೊಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.