ಇತ್ತೀಚಿನ ದಿನಗಳಲ್ಲಿ ಕಾಡು ಮೃಗಗಳು ಕಾಡನ್ನು ಬಿಟ್ಟು. ಸಾರ್ವಜನಿಕರು ವಾಸಿಸುವ ಸ್ಥಳಕ್ಕೆ ಬಂದು. ಸಾರ್ವಜನಿಕರಿಗೆ ಮತ್ತು ಸಾಕು ಪ್ರಾಣಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದು ಯಾರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಹಿಗೆಯ ಒಂದು ಪ್ರಕರಣ ಕೂಡ ಯಲ್ಲಾಪುರ ತಾಲೂಕು ವ್ಯಾಪ್ತಿಯಲ್ಲಿ ಕೂಡಾ ಒಂದು ಹಸುವಿನ ಮೇಲೆ ಹಲ್ಲೆ ಮಾಡಿ ಹಸುವನ್ನು ಕೊಂದು ಅಲ್ಲಿಂದ ಪರಾರಿಯಾಗಿತ್ತು.ಇಂತಹ ಘಟನೆ ಜಿಲ್ಲೆಯಲ್ಲಿ ಸಾಕಷ್ಟು ಕೇಳಿ ಬರುತ್ತಿದೆ. ಹೀಗೆಯೆ ತಾಲೂಕು ವ್ಯಾಪ್ತಿಯಲ್ಲಿ ಬರುವ ಮಂಚಿಕೆರಿ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡಿತ್ತು .ಮಂಚಿಕೇರಿ ಮತ್ತು ಕಾತುರು ಅರಣ್ಯ ವ್ಯಾಪ್ತಿಯಲ್ಲಿ. ಅಧಿಕಾರಿ ಸಿಬ್ಬಂದಿಗಳು ಗಸ್ತಿಗೆ ಹೋದ ಸಂದರ್ಭದಲ್ಲಿ ತಾಲೂಕಿನ ಚಿಪಗಿ ಕಾತುರ ಮುಖ್ಯ ರಸ್ತೆಯಲ್ಲಿ ಯಾವಗಲು ಹೋಗುವ ಹಾಗೆ ಅಧಿಕಾರಿ ಸಿಬ್ಬಂದಿಗಳು ಉಪ ವಲಯದ ಅರಣ್ಯ ಅಧಿಕಾರಿ ಬೀ ಸುರೇಶ ಮತ್ತು ಅರಣ್ಯ ರಕ್ಷಕ ಬಸವನಗೌಡ ಹಲಗಿ ಮತ್ತು ಶಿವಾನಂದ ಮಾಯನ್ನವರ ತಮ್ಮ ವಾಹನದಲ್ಲಿ ಗಸ್ತಿಗೆ ಹೋದ ಸಂದರ್ಭದಲ್ಲಿ ಚಿರತೆ ಕಾಣಿಸಿಕೊಂಡಿದೆ.ಅಧಿಕಾರಿ ಸಿಬ್ಬಂದಿಗಳು ತಮ್ಮ ವಾಹನದಲ್ಲಿ ಸುರಕ್ಷಿತವಾಗಿ ಇರುವ ಕಾರಣ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಇನ್ನು ಮುಂದಾದರೂ ಕಾಡು ಮೃಗಗಳು ನಾಡಿಗೆ ಬರದಂತೆ ಯಾವುದೇ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಾರ ಕಾದು ನೋಡಬೇಕಾಗಿದೆ…

ವರದಿ: ಶ್ರೀಪಾದ್ ಹೆಗಡೆ .

error: Content is protected !!