Corruption

ಅಧಿಕಾರಿಗಳ ಅಲಕ್ಷಕ್ಕೆ ಹಳ್ಳ ಸೇರುತ್ತಿರುವ ನೀರು ..! ಇದಕ್ಕೆ ಹೊಣೆಯಾರು ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಗಳೇ..?!

ಮುಂಡಗೋಡ: ಒಂದು ಕಡೆ ಭೀಕರವಾದ ಬರಗಾಲ, ಮತ್ತೊಂದು ಕಡೆ ನೀರಿಗೆ ಹಾಹಾಕಾರ, ಅತ್ತ ರಾಜಧಾನಿ ಬೆಂಗಳೂರಿನಲ್ಲಿ ನಿರ್ದಿಷ್ಟ ಉದ್ದೇಶಗಳನ್ನು ಬಿಟ್ಟು ಅನಾವಶ್ಯಕವಾಗಿ ನೀರು ಬಳಸುವ ಸಾರ್ವಜನಿಕರಿಗೆ ಸಾವಿರಾರು ರೂಪಾಯಿಗಳ ದಂಡ.
ಇಲ್ಲಿ ಲಕ್ಷಾಂತರ ರೂಪಾಯಿ ವೇತನ ಪಡೆದು ತಮ್ಮ ಜವಾಬ್ದಾರಿಯನ್ನು ಮರೆತು ಜಲಾಶಯದ ನೀರನ್ನು ಕಾಲುವೆಗೆ ಬಿಟ್ಟು ಹಾಯಾಗಿ ಮನೆಯಲ್ಲಿ ಕುಳಿತ ಇಂಜಿನಿಯರ್ ಗಳು ಪರಿಣಾಮ ರೈತರ ಹೊಲಗಳಿಗೆ ಸೇರಬೇಕಾದ ನೀರು ಹಳ್ಳ ಸೇರುತ್ತಿದೆ ಇದಕ್ಕೆ ಕಾರಣ ಅಧಿಕಾರಿಗಳ ನಿರ್ಲಕ್ಷದ ಜೊತೆಗೆ ಜಲಾಶಯದ ಕಾಲುವೆಗಳ ಅವ್ಯವಸ್ಥೆಗಳ ಆಗರ.

ಅವ್ಯವಸ್ಥೆಯ ಆಗರವೇ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಜೇಬು ತುಂಬುತ್ತಿದೆಯಾ..???
ಹೌದು, ಈ ಅವ್ಯವಸ್ಥೆ ಎಲ್ಲಿಯದು ಅಂತೀರಾ? ಇದೆಲ್ಲವೂ ಚಿಗಳ್ಳಿ ಜಲಾಶಯದ ಸದ್ಯದ ಸ್ಥಿತಿಗತಿ. ಈ ಚಿಗಳ್ಳಿ ಜಲಾಶಯ ಕಟ್ಟಿದಾಗಿನಿಂದ ಇಲ್ಲಿಯವರೆಗೆ ಎರಡು ಬಾರಿ ಒಡ್ಡು ಒಡೆದು ಮತ್ತೆ ಪುನಃ ನಿರ್ಮಾಣಗೊಂಡಿದೆ. ಎರಡು ಬಾರಿಯೂ ಅವಶ್ಯಕತೆಗೆ ಬಳಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಕೊಳ್ಳೆ ಹೊಡೆದಿದ್ದೆ ಹೆಚ್ಚು. ಈ ಜಲಾಶಯದ ಎರಡು ಬದಿಯ ಕಾಲುವೆಗಳ ಅವ್ಯವಸ್ಥೆಯಂತೂ ಹೇಳತಿರದು.
ಅದರಲ್ಲೂ ಜಲಾಶಯದ ಎಡದಂಡೆ ಕಾಲುವೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಪಾಲಿಗೆ ಹಣವನ್ನು ದೋಚುವ ಸ್ವರ್ಗದಂತಿದೆ. ಕಾರಣ ಪ್ರತಿ ವರ್ಷ ಈ ಕಾಲುವೆಗೆ ಕೋಟ್ಯಾಂತರ ರೂಪಾಯಿ ಹಣವನ್ನು ಇಲಾಖೆಯವರು ಖರ್ಚು ಮಾಡುತ್ತಾರೆ ಆದರೆ ಇದುವರೆಗೂ ಸಹ ಸಂಪೂರ್ಣವಾಗಿ ಆ ಕಾಲುವೆ ಸುವ್ಯವಸ್ಥಿತವಾಗಿ ಕಾಣುತ್ತಿಲ್ಲ.
ಜಲಾಶಯದ ನಿರ್ಮಾಣದ ಹೊತ್ತಿಗೆ ಈ ಎಡದಂಡೆ ಕಾಲುವೆಗೆ ಅಲ್ಲಲ್ಲಿ ಬ್ರಿಡ್ಜ್ ಗಳನ್ನು ನಿರ್ಮಿಸಿದ್ದಾರೆ ಆ ಬ್ರಿಡ್ಜ್ ಗಳು ಇಂದು ತನ್ನ ಗುಣಮಟ್ಟವನ್ನು ಕಳೆದುಕೊಂಡು ಬಿರುಕು ಬಿಟ್ಟು ಅಲ್ಲಲ್ಲಿ ಅಪಾರ ಪ್ರಮಾಣದ ನೀರನ್ನು ಹಳ್ಳಕ್ಕೆ ಸೇರಿಸುತ್ತಿವೆ ಆದರೆ ಆ ಬ್ರಿಡ್ಜ್ ಗಳನ್ನು ಮಾತ್ರ ದುರಸ್ತಿ ಮಾಡದ ಅಧಿಕಾರಿಗಳು ತಮಗೆ ತೋಚಿದ ಜಾಗದಲ್ಲಿ ಕಾಮಗಾರಿ ನಡೆಸಿ ಹೋಗುತ್ತಾರೆ.

ಇದ್ಯಾವುದು ಚಿಕ್ಕ ನೀರಾವರಿ ಇಲಾಖೆಯ ಇಂಜಿನಿಯರ್ ಗಳ ಗಮನಕ್ಕೆ ಬಂದಿಲ್ಲವಾ…?
ಸದ್ಯದ ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ ಚಿಕ್ಕ ನೀರಾವರಿ ಇಲಾಖೆಯ ಇಂಜಿನಿಯರ್ ಗಳ ಗಮನಕ್ಕೆ ಬಂದಿಲ್ಲ ಎನ್ನುವುದು ಎದ್ದು ಕಾಣುತ್ತದೆ, ಕಾರಣ ಆ ಸ್ಥಳಕ್ಕೆ ಅವರು ಹೋದರೆ ತಾನೇ ಗೊತ್ತಾಗುವುದು ಅವರ ಕೆಲಸ ಏನಿದ್ದರೂ ಎಸಿ ರೂಮಿನಲ್ಲಿ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದು ಅಷ್ಟೇ ಅನಿಸುತ್ತಿದೆ.

60 ಲಕ್ಷದ ಕಾಮಗಾರಿ ಸಂಪೂರ್ಣ ಕಳಪೆಯಾ..?
ಹೌದು ಎನ್ನುತ್ತಿದೆ ಅಲ್ಲಿನ ಸದ್ಯದ ಸ್ಥಿತಿ, ಕೆಲವೇ ಕೆಲವು ದಿನಗಳ ಹಿಂದೆ ಈ ಚಿಗಳ್ಳಿ ಜಲಾಶಯದ ಎಡದಂಡೆ ಕಾಲುವೆಗೆ ಅಂದಾಜು 60 ಲಕ್ಷ ರೂಪಾಯಿಗಳ ಅನುದಾನದಲ್ಲಿ ಸಿಮೆಂಟ್ ಕಾಲುವೆ ನಿರ್ಮಾಣ ಮಾಡಿದ್ದಾರೆ ಆದರೆ ಆ ಕಾಮಗಾರಿಯನ್ನು ಮಾಡಿದ್ದು ಹಣವನ್ನು ಕೊಳ್ಳೆ ಹೊಡೆಯಲೋ ಅಥವಾ ಕಾಲುವೆಯನ್ನು ದುರಸ್ತಿ ಮಾಡಲೋ ಎಂಬ ಸಂಶಯ ಮೂಡುತ್ತಿದೆ ಕಾರಣ ಆ ಕಾಲುವೆಯ ಒಳಗಡೆ ನೀರು ಸರಾಗವಾಗಿ ಸಾಗಬೇಕು ಆದರೆ ನೀರು ಕಾಲುವೆಯ ಮೇಲೆ ಬಂದು ಎರಡು ಬದಿಗಳಲ್ಲಿ ಮಣ್ಣಿನ ಒಳಗೆ ಸೇರಿಕೊಂಡು ಹಳ್ಳ ಸೇರುತ್ತಿದೆ. ಹಾಗಾಗಿಯೇ ನಾವು ಹೇಳಿದ್ದು ಇದು ಹಣವನ್ನು ಕೊಳ್ಳೆ ಹೊಡೆಯಲು ಮಾಡಿದ ಕಾಮಗಾರಿಯೆನೋ ಎಂದು.

ಹೊಸದಾಗಿ ನಿರ್ಮಾಣವಾಗಬೇಕಿದೆ ಬಿರುಕು ಬಿಟ್ಟ ಬ್ರಿಡ್ಜ್..
ಜಲಾಶಯದ ನಿರ್ಮಾಣದ ಸಮಯದಲ್ಲಿ ನಿರ್ಮಾಣಗೊಂಡ ಈ ಬ್ರಿಡ್ಜ್ ಈಗಾಗಲೇ ತನ್ನ ಗುಣಮಟ್ಟವನ್ನು ಕಳೆದುಕೊಂಡು ಅಲ್ಲಲ್ಲಿ ಬಿರುಕು ಬಿಟ್ಟು ನೀರು ಹಳ್ಳ ಸೇರಲು ಕಾರಣವಾಗುತ್ತಿದೆ ಹಾಗಾಗಿ ಈ ಬ್ರಿಡ್ಜನ್ನು ಹೊಸದಾಗಿ ನಿರ್ಮಾಣ ಮಾಡಿದರೆ ಮಾತ್ರ ಇದಕ್ಕೆ ಸಂಪೂರ್ಣ ಪರಿಹಾರ ಸಿಗಲು ಸಾಧ್ಯ.

ಎರಡು ಕಾಲುವೆಗಳಲ್ಲಿ ಎಲ್ಲಿಯೂ ಕಾಣುತ್ತಿಲ್ಲ ಗೇಟುಗಳು..!
ಜಲಾಶಯದಿಂದ ನೀರು ಸರಾಗವಾಗಿ ರೈತರ ಹೊಲಗಳಿಗೆ ಸಾಗಲು ಜಲಾಶಯದ ಎರಡು ಬದಿಗಳಲ್ಲಿ ಕಾಲುವೆಗಳನ್ನು ನಿರ್ಮಾಣ ಮಾಡಿ ಆ ಕಾಲುವೆಗಳಿಗೆ ಅಲ್ಲಲ್ಲಿ ಸಣ್ಣ ಸಣ್ಣ ಗೇಟುಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಗೇಟುಗಳ ಎರಡು ಬದಿಗಳಲ್ಲಿ ಸಿಮೆಂಟ್ ಮತ್ತು ಕಲ್ಲುಗಳನ್ನು ಬಳಸಿ ಗೋಡೆಗಳನ್ನು ಕಟ್ಟಿ ಮಧ್ಯದಲ್ಲಿ ಕಬ್ಬಿಣದ ಪ್ಲೇಟನ್ನು ಬಳಸಿ ನೀರನ್ನು ಹಾಯಿಸಲು ಮತ್ತು ತಡೆಯಲು ವ್ಯವಸ್ಥೆ ಮಾಡಲಾಗಿತ್ತು ಆದರೆ ಸದ್ಯ ಈ ರೀತಿಯ ಗೇಟುಗಳು ಕೆಲವೊಂದು ಕಡೆ ಮಾತ್ರ ಕಾಣುತ್ತಿದ್ದು ಉಳಿದ ಗೇಟುಗಳೆಲ್ಲವೂ ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಹೀಗಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.

ಕಾಮಗಾರಿಯ ಹಣ ಅಧಿಕಾರಿಗಳ,ಗುತ್ತಿಗೆದಾರರ, ಪುಂಡ ರಾಜಕಾರಣಿಗಳ ಜೇಬಿಗೆ..?
ಹೌದು ಈ ಚಿಗಳ್ಳಿ ಜಲಾಶಯದ ಅವ್ಯವಸ್ಥೆಯು ಅಧಿಕಾರಿಗಳ ಜೇಬು ತುಂಬುತ್ತಿದೆಯಾ ಎಂದು ಪತ್ರಿಕೆ ಮೊದಲೇ ಪ್ರಶ್ನೆ ಮಾಡಿದೆ ಅದಕ್ಕೆ ಪುಷ್ಟಿ ನೀಡುವಂತೆ ಕಾಮಗಾರಿಗೆ ಬರುವ ಹಣದಲ್ಲಿ ಗುಣಮಟ್ಟದ ಕಾಮಗಾರಿಯನ್ನು ಮಾಡಿಸಬೇಕಾದ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಮತ್ತು ಸ್ಥಳೀಯ ಪುಂಡ ರಾಜಕಾರಣಿಗಳೊಂದಿಗೆ ಸೇರಿ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆಕ್ರೋಶಭರಿತರಾಗಿ ರೈತರಾದ ಮೋಹನ್ ಕೇದಾರ್ ಮತ್ತು ಇತರ ಹಲವಾರು ಜನ ರೈತರು ಆರೋಪಿಸಿದ್ದಾರೆ.

ವರದಿ: ಮಂಜುನಾಥ ಹರಿಜನ.

kiran

Recent Posts

ಬೈಕ್ ಟಿಪ್ಪರ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…

1 month ago

ಅಪರಿಚಿತ ಕಾರು ಡಿಕ್ಕಿ; ಐವರಿಗೆ ಗಂಭೀರ ಗಾಯ, ಓರ್ವ ಮಹಿಳೆ ಸ್ಥಳದಲ್ಲೇ ಸಾವು.

ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…

1 month ago

ರಸ್ತೆ ಅಪಘಾತ; ಗೊಲಗೇರಿ ಗ್ರಾಮದ ಯುವಕ ಸಾವು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…

1 month ago

ಕುಡಿಯುವ ನೀರಿನ ಬಿಲ್ ಪಾವತಿ ಮಾಡಬೇಡಿ -ಮಾಜಿ ಶಾಸಕ ಹರ್ಷವರ್ಧನ್

ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…

1 month ago

ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…

1 month ago

ಮಟ-ಮಟ ಮಧ್ಯಾಹ್ನ‌ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ ‌

ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…

1 month ago