ಮುಂಡಗೋಡ: ತಾಲೂಕಿನ ಶ್ರೀಮತಿ ದೇವಕ್ಕ ಛಾಯಪ್ಪ ಕಲಾಲ್ ಸರಕಾರಿ ಪ್ರೌಢಶಾಲೆ ಚಿಗಳ್ಳಿಯಲ್ಲಿ ಮೂರು ಸಿಸಿ ಕ್ಯಾಮೆರಾಗಳು ಕಳ್ಳತನವಾಗಿವೆ.
ಈ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳ ಸಹಾಯದಿಂದ ಕಳೆದು ಎರಡು ವರ್ಷಗಳ ಹಿಂದೆ ಆರು ಸಿ ಸಿ ಕ್ಯಾಮೆರಾ ಗಳನ್ನು ಶಾಲೆಯ ಭದ್ರತೆ ದೃಷ್ಟಿಯಿಂದ ಅಳವಡಿಸಲಾಗಿತ್ತು. ಆದರೆ ಕೆಲವು ದಿನಗಳ ಹಿಂದೆ ಗುಡುಗು ಸಹಿತ ಮಳೆಯಾಗಿದ್ದರಿಂದ ಮುನ್ನೆಚ್ಚರಿಕೆಯಾಗಿ ಸಿಸಿ ಕ್ಯಾಮೆರಾ ಗಳು ಹಾಳಾಗಬಾರದು ಎಂದು ಅವುಗಳನ್ನು ಆಫ್ ಮಾಡಲಾಗಿತ್ತಂತೆ. ಈ ಸಿಸಿ ಕ್ಯಾಮೆರಾ ಗಳು ಆಫ್ ಆದ ಬಗ್ಗೆ ತಿಳಿದುಕೊಂಡವರೇ ಈ ರೀತಿ ಮಾಡಿದ್ದಾರೆ ಎಂದು ಶಿಕ್ಷಣ ಪ್ರೇಮಿಗಳು ತಮ್ಮ ಅಸಮಾಧಾನವನ್ನು ಹೊರಗೆ ಹಾಕಿದ್ದಾರೆ.
ಇನ್ನೂ ಈ ಸಿಸಿ ಕ್ಯಾಮೆರಾ ಗಳು ರವಿವಾರವೇ ಕಳ್ಳತನವಾಗಿದ್ದು ಇದುವರೆಗೂ ಶಾಲೆಯ ಮುಖ್ಯ ಶಿಕ್ಷಕರು ಪೊಲೀಸ್ ಪ್ರಕರಣ ದಾಖಲಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ಇದೂವರೆಗೂ ಪ್ರಕರಣ ಯಾಕೆ ದಾಖಲಿಸಿಲ್ಲ ಮತ್ತು ತಾವು ರಜಾ ಅವಧಿಯಲ್ಲಿಯೂ ಶಾಲೆಯಲ್ಲಿ ಇರಬೇಕು ಎಂದು ಕೇಳಿದಾಗ ನಾನು ಗುರುವಾರ ಪ್ರಕರಣ ದಾಖಲಿಸುತ್ತೇನೆ ನಾನು ಶಾಲೆಗೆ ಬರುವ ಬಗ್ಗೆ ಬಿಡುವ ಬಗ್ಗೆ ನೀವು ಕೇಳಬೇಡಿ ಎನ್ನುತ್ತಾರೆ ಶಾಲೆಯ ಆಸ್ತಿಯನ್ನು ರಕ್ಷಿಸಬೇಕಾದ ಶಾಲೆಯ ಮುಖ್ಯ ಶಿಕ್ಷಕರೆ ಈ ರೀತಿಯಾಗಿ ಬೇಜವಾಬ್ದಾರಿ ಉತ್ತರ ನೀಡಿದರೆ ಹೇಗೆ.?ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳು ಯಾವ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತಾರೆಂದು ಕಾಯ್ದು ನೋಡಬೇಕಾಗಿದೆ.