ರಾಜ್ಯದಲ್ಲಿ ಸ್ಮಶಾನ ಭೂಮಿ ಇಲ್ಲದ ಗ್ರಾಮ ಇರಬಾರದು , ರಾಜ್ಯದಲ್ಲಿ ಸ್ಮಶಾನ ಭೂಮಿ ಇಲ್ಲದಿರುವ ಬಗ್ಗೆ ಜನರಿಂದ ಮಾಹಿತಿ ಪಡೆಯಬೇಕು , ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ಸರ್ಕಾರ ಮಾಹಿತಿ ನೀಡಬೇಕು.
ಗ್ರಾಮಗಳಲ್ಲಿ ಮತದಾನದ ವ್ಯವಸ್ಥೆ ಇರುವಂತೆ ಮೂಲಭೂತ ಸೌಕರ್ಯ ಕೂಡ ಇರಬೇಕು. ಮತದಾನದ ವೇಳೆ ಬೇರೆ ಬೇರೆ ಹಂಚಿಕೆ ಮಾಡುವ ಬದಲು ಮೂಲಸೌಕರ್ಯ ಒದಗಿಸುದಲ್ವಾ ಎಂದು ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದೆ. ಸ್ಮಶಾನ ಭೂಮಿ ಒದಗಿಸಿರುವ ಸಂಬಂಧ ಕೆಲವು ಜಿಲ್ಲಾಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದು, ಖುದ್ದು ಹಾಜರಾಗಲು ಹೈಕೋರ್ಟ್ ಸೂಚನೆ ನೀಡಿತ್ತು. ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ಹೊರಡಿಸಿದ ಆದೇಶ ಜಾರಿಯಾಗದ ಹಿನ್ನೆಲೆ ಬೆಂಗಳೂರು ನಿವಾಸಿ ಮಹಮದ್ ಇಕ್ಬಾಲ್ ಅವರು ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.