ಇಳಕಲ್ ತಾಲೂಕಿನ ಕೆಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಳ್ಳಿಕೆರೆ ಗ್ರಾಮದ ದಲಿತ ಕಾಲೊನಿಯ ದುಸ್ಥಿತಿ ಇದು. ಸುಮಾರು ಎರಡು ವರ್ಷಗಳಿಂದ ರಸ್ತೆಯೆಲ್ಲಾ ಚರಂಡಿಮಯ ಆಗಿರುತ್ತದೆ, ಅತ್ತ ಕಡೆಗೆ ಅಧಿಕಾರಿಗಳು ಹೋಗೋದು ನೋಡೋದು ಬಿಟ್ಟರೆ ಸ್ವಚ್ಛತೆ ಮಾಡಿಸುವ ಕೆಲಸ ಇಲ್ಲ. ದಲಿತ ಕಾಲೊನಿ ಸ್ಥಿತಿಗತಿ ನೋಡಿದಾಗ ಚರಂಡಿಗಳೆಲ್ಲಾ ಗಬ್ಬೆದ್ದು ನಾರುತ್ತಿದ್ದು ಅದರ ವಾಸನೆಗೆ ಸರಿಯಾಗಿ ಊಟ ಮಾಡಲಾಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಚಿಕ್ಕ ಪುಟ್ಟ ಮಕ್ಕಳು ಆಡ್ಡಾಡುವ ಜಾಗದಲ್ಲಿ ಕೆಲಸ ಕಾರ್ಯ ಬಿಟ್ಟು ಮಕ್ಕಳನ್ನು ಕಾಯುತ್ತಾ ಜೀವ ಕೈಯಲ್ಲಿ ಇಟ್ಟುಕೊಂಡು ಜೀವನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಾಲೂ ಜನ ಓಡಾಡುವ ರಸ್ತೆ ಇದಾಗಿದ್ದು, ರಸ್ತೆಯಲ್ಲಿಯೇ ಸಂಪೂರ್ಣ ನೀರು ನಿಂತು ಗಬ್ಬೆದ್ದು ನಾರುತಿದ್ದು, ಈ ಅವ್ಯವಸ್ಥೆಯಿಂದ ಗ್ರಾಮದ ಜನರಿಗೆ ಹಲವು ರೋಗಗಳ ಭೀತಿ ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಅದೇ ರಸ್ತೆಯಲ್ಲಿಯೇ ದಿನಾಲೂ ಸೈಕಲ್ ಮೋಟಾರ್ ಗಳಿಂದ ಗ್ರಾಮದ ರೈತರು ಮನೆಗೆ ಹಾಗೂ ಹೊಲಗಳಿಗೆ ಈ ದಾರಿಯಲ್ಲಿಯೇ ಹೋಗಬೇಕು. ರಸ್ತೆಯ ಮೇಲೆ ಇರುವ ಈ ಕೊಳಚೆಯ ಪರಿಸ್ಥಿತಿ ನೋಡಿದರೆ ಗ್ರಾಮಕ್ಕೆ ಚರಂಡಿ ವ್ಯವಸ್ಥೆ ಸರಿಯಾಗಿ ಇರದೇ ಇರುವುದು ಕಂಡುಬರುತ್ತದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮನಾ ಬಾವಲತ್ತಿ ಗಮನಹರಿಸದೇ ಇರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ. ಪಂಚಾಯಿತಿ ಅಧಿಕಾರಿಗಳು ದಿವ್ಯ ನಿರ್ಲಕ್ಷ ವಹಿಸುತ್ತಿದ್ದು ವರದಿ ಕಂಡ ಮೇಲಾದರೂ ಅಧಿಕಾರಿಗಳು ರಸ್ತೆಗೆ ಕಾಂಕ್ರೀಟ್ ವ್ಯವಸ್ಥೆ ಅಥವಾ ಘರ್ಸು(ಮರಂ) ಹಾಕುವ ಮೂಲಕ ಗ್ರಾಮದ ಜನರಿಗೆ ಅನುಕೂಲ ಮಾಡಿಕೊಡಬೇಕು.
ರಾಮನಗರ: 36 ವರ್ಷದ ಮಹಿಳೆ ಮತ್ತು 27 ವರ್ಷದ ವೈದ್ಯನ ನಡುವೆ ಲೈಂಗಿಕ ದೌರ್ಜನ್ಯ ಆರೋಪ, ಪ್ರಕರಣ ಗಂಭೀರ ತಿರುವು.…
ಉತ್ತರಪ್ರದೇಶ: ಪತ್ನಿಯ ಎದುರೇ ಪ್ರೇಯಸಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಪತಿ ಜೀವಂತ ಸುಟ್ಟು ಹತ್ಯೆ. ಉತ್ತರಪ್ರದೇಶದ ಇಟಾವಾದಲ್ಲಿ ರಾಘವೇಂದ್ರ…
ಬಳ್ಳಾರಿ ಜಿಲ್ಲೆಯ ತೋರಣಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಯೊಬ್ಬ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬಹಿರಂಗವಾಗಿದೆ.…
ಮಧ್ಯಪ್ರದೇಶದ ಸಾರಿಗೆ ಇಲಾಖೆಯ ಮಾಜಿ ಕಾನ್‌ಸ್ಟೇಬಲ್ ಸೌರಭ್ ಶರ್ಮಾ ಮೇಲೆ ಲೋಕಾಯುಕ್ತ ದಾಳಿ ನಡೆಸಿದ ನಂತರ ಅವರು ನಾಪತ್ತೆಯಾಗಿದ್ದಾರೆ. ಈ…
ಕಾನ್ಪುರ ಸೆಂಟ್ರಲ್ ನಿಲ್ದಾಣದಲ್ಲಿ RPF ಪೊಲೀಸರ ತ್ವರಿತ ಕ್ರಮದಿಂದ ಮಹಿಳಾ ಪ್ರಯಾಣಿಕರೊಬ್ಬರ ಜೀವ ರಕ್ಷಣೆಯಾಗಿದೆ. ನಿಲ್ದಾಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ…
ಜೂಜಿನ ಚಟಕೆ ಬಿದ್ದು ಟೆಕ್ ಉದ್ಯೋಗಿ ಒಬ್ಬನು 18 ಲಕ್ಷ ಮೌಲ್ಯದ ಚಿನ್ನ ಕಳ್ಳತನ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.…