ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಮನೆಯಿಂದ ಊಟ ಹಾಗೂ ಹಾಸಿಗೆ ಸೌಲಭ್ಯ ಪಡೆಯುವುದಕ್ಕೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ್ದು ನ್ಯಾಯಾಧೀಶರು ಜುಲೈ 25ಕ್ಕೆ ಆದೇಶ ಕಾಯ್ದಿರಿಸಿದ್ದಾರೆ.
ದರ್ಶನ್ ಪರ ವಕೀಲರು ಸೆಕ್ಷನ್ 30ರ ಪ್ರಕಾರ ಜೈಲಿನಲ್ಲಿ ಇರುವ ಆರೋಪಿ ಮನೆ ಊಟ ಪಡೆಯಬಹುದು. ಇದು ವಿಚಾರಣಾದಿನ ಕೈದಿ ಹಕ್ಕು, ಜೈಲಿನ ನಿಯಮಗಳಲ್ಲಿ ಇದರ ಉಲ್ಲೇಖ ಇದೆ. ಅಲ್ಲದೆ ಮನೆಯಿಂದ ಹಾಸಿಗೆ ವ್ಯವಸ್ಥೆ ಮತ್ತು ಪುಸ್ತಕಗಳನ್ನು ಹೊಂದುವ ಅವಕಾಶ ಇದೆ. ಧರ್ಶನ್ ರವರು ಸಿನಿಮಾದ ನಟರಾಗಿರುವ ಕಾರಣ ಅತಿ ಹೆಚ್ಚಿನ ಪ್ರಚಾರ ಸಿಗುತ್ತಿದೆ ಹೀಗಾಗಿ ಜೈಲಿನ ಅಧಿಕಾರಿಗಳು ಮನೆಯ ಊಟವನ್ನು ನೀಡುವುದಕ್ಕೆ ನಿರಾಕರಣೆ ಮಾಡುತ್ತಿದ್ದಾರೆ. ಈ ಹಿಂದೆ ಕುಕ್ಯತಾ ಆರೋಪಿ ಚಾರ್ಲ್ಸ್ ಶೋಬರಾಜ್ ಗೆ ಕೂಡ ಮನೆ ಊಟ ಕಲ್ಪಿಸಲಾಗಿತ್ತು. ಯಾವಾಗ ಆರೋಪಿ, ಅಪರಾಧಿ ಎಂದು ಕೋರ್ಟ್ ಶಿಕ್ಷೆ ನೀಡುತ್ತದೆ ಅಲ್ಲಿಯವರೆಗೆ ಈ ಎಲ್ಲಾ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ.
ಜೈಲಿನ ನಿಯಮಗಳ ಪ್ರಕಾರ ಮನೆ ಊಟ ಎನ್ನುವುದರ ಬಗ್ಗೆ ಉಲ್ಲೇಖ ಇಲ್ಲ ಆರೋಗ್ಯದ ಸಮಯದಲ್ಲಿ ಮಾತ್ರ ವಿಶೇಷ ಊಟ ನೀಡಬಹುದು ಹೊರೆತು ಮನೆ ಊಟವನ್ನು ನೀಡಬೇಕು ಎಂದು ಉಲ್ಲೇಖ ಮಾಡಿಲ್ಲ. ಆರೋಗ್ಯದ ಸಮಸ್ಯೆ ಇದ್ದಾಗ ಮಾತ್ರ ವಿಶೇಷ ಕಾಳಜಿ ಆಹಾರ ನೀಡಬೇಕು, ವಾರದಲ್ಲಿ ಒಮ್ಮೆ ಮಾತ್ರ ಮಾಂಸ ಆಹಾರ ಊಟ ಕೊಡಬಹುದು ಅದನ್ನು ಬಿಟ್ಟು ಪ್ರತಿದಿನ ಬಿರಿಯಾನಿ ತಿನ್ನಬೇಕು ಎಂದರೆ ನೀಡಲು ಸಾಧ್ಯವಿಲ್ಲ. ಆಹಾರ ಅಜೀರ್ಣ, ಪುಡ್ ಪಾಯಿಸನ್ ಗೆ ಭೇಧಿ ಆಗುತ್ತಿದೆ ಎಂದು ಮೆಡಿಕಲ್ ವರದಿಯನ್ನು ಸಲ್ಲಿಸಿದ್ದಾರೆ ಆದರೆ ಒಂದು ಬಾರಿಯೂ ಭೇಧಿಯಾಗಿದೆ ಎಂದು ಆಸ್ಪತ್ರೆಯಲ್ಲಿ ದರ್ಶನ್ ಚಿಕಿತ್ಸೆ ಪಡೆದಿಲ್ಲ. ದರ್ಶನ್ ರವರಿಗೆ ವೈರಲ್ ಫೀವರ್ ಇದ್ದು ಹಾಗೂ ಕೈನ ನೋವು ಬಂದಿರುವ ಕಾರಣ ಅದಕ್ಕೆ ಮಾತ್ರ ಚಿಕಿತ್ಸೆ ಪಡೆದಿದ್ದಾರೆ ಮೂರು ತಿಂಗಳ ಹಿಂದೆ ಆಪರೇಷನ್ ಆಗಿತ್ತು ಜೈಲಿಗೆ ಬಂದಾಗ ಅದರ ನೋವು ಪ್ರಾರಂಭವಾಗಿದ್ದು ಇದಕ್ಕೆ ಎಕ್ಸರೇ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗೆ ಭೇದಿಯಾಗುತ್ತಿದ್ದರೆ ಉಪ್ಪು ಕಾರ ಇಲ್ಲದ ಆಹಾರ ನೀಡಬೇಕು ಕುಡಿಯಲು ಬಿಸಿನೀರು ಕೊಡಬೇಕು ಜ್ವರ ಇದ್ದಾಗ ಮಾತ್ರ. ಅದನ್ನು ಬಿಟ್ಟು ಪ್ರತಿದಿನ ಸ್ನಾನ ಮಾಡಲು ಬಿಸಿ ನೀರು ಕೊಡಲು ಸಾಧ್ಯವಿಲ್ಲ ಅನಾರೋಗ್ಯ ಇದ್ದರೆ 15 ದಿನ ಮಾತ್ರ ವಿಶೇಷವಾಗಿ ಅವಕಾಶ ನೀಡಬಹುದು ಎಂದು ಪೊಲೀಸ್ ಪರವಾದ ಮಂಡಿಸಿದ್ದಾರೆ.
ಇಬ್ಬರ ಪರ ವಾದವನ್ನು ಆಲಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜುಲೈ 25ಕ್ಕೆ ಆದೇಶ ಕಾಯ್ದಿರಿಸಿದ.