ಉತ್ತರ ಕನ್ನಡ ಜಿಲ್ಲೆಯ ತಾಲೂಕು ವ್ಯಾಪ್ತಿಯಲ್ಲಿ ಈ ಹಿಂದೆ ಸಾಕಷ್ಟು ಜಾನುವಾರುಗಳ ಮೇಲೆ ಕಾಡು ಮೃಗ ಜನರು ವಾಸಿಸುವ ಸ್ಥಳಕ್ಕೆ ಬಂದು ಜಾನುವಾರುಗಳ ಮೇಲೆ ಆಕ್ರಮಣ ಮಾಡಿ ಜನುವರುವನ್ನು ಕೊಂದಿರುವ ಘಟನೆ ನಡೆಯತ್ತಲೆ ಇದೆ. ಹೀಗೆಯೇ ಮತ್ತೊಂದು ಘಟನೆ ಯಲ್ಲಾಪುರ ತಾಲೂಕಿನ ಬಿಸಗೋಡು ಹಾಗೂ ಅನಗೊಡು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕಾಶ ಮರಾಠಿ ಹಾಗೂ ನಾರಾಯಣ ಸಿದ್ದಿ ಇವರ ಜಾನುವಾರು ಆಗಿದ್ದು ಹೊರಗೆ ಮೇವು ತಿನ್ನಲು ಬಿಟ್ಟ ಹಸುಗಳ ಮೇಲೆ ಹಲ್ಲೆ ನಡೆಸಿ ಕೊಂದು ಅಲ್ಲಿಂದ ಪರಾರಿಯಾಗಿದೆ . ದಿನಗಳೆದಂತೆ ಇದು ಹೆಚ್ಚಾಗಿದ್ದು ಇದರಿಂದಾಗಿ ದಿನನಿತ್ಯ ಮೇವು ತಿನ್ನಲು ಬಿಟ್ಟ ಜನುವಾರುವನ್ನು ಹೀಗೆ ಕೊಂದು ತಿಂದರೆ ರೈತರು ಹೇಗೆ ಹಸುಗಳನ್ನು ಕಾಪಾಡಿಕೊಳ್ಳಬೇಕು ಎನ್ನುವುದು ಮತ್ತು ಓಡಾಡುವ ಸಾರ್ವಜನಿಕರಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏನಾದರೂ ಅವರ ಮೇಲೆ ಆಕ್ರಮಣ ನಡೆಸಿದರೆ ಏನು ಮಾಡಬೇಕು ಎನ್ನುವುದು ಅಧಿಕಾರಿಗಳಿಗೆ ಇಲ್ಲಿನ ಗ್ರಾಮಸ್ಥರ ಪ್ರಶ್ನೆಯಾಗಿದೆ.?? ದಿನಗಳೆದಂತೆ ಹುಲಿಯು ಜಾನುವಾರಗಳನ್ನು ಬಲಿ ಪಡೆಯುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ .ಇಷ್ಟಾದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿದ್ದಾರೆ.ಯಾಕೆಂದರೆ ಅರಣ್ಯ ಇಲಾಖೆಯವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರು ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ…
ವರದಿ: ಶ್ರೀಪಾದ್ ಹೆಗಡೆ