ಯಲ್ಲಾಪುರ ತಾಲೂಕಿನಲ್ಲಿ ಪ್ರಸಿದ್ಧವಾದ ಜಲಪಾತದಲ್ಲಿ ಸಾತೊಡ್ಡಿ ಜಲಪಾತ ಕೂಡ ಒಂದು ಈ ಜಲಪಾತವನ್ನು ನೋಡಲು ಹೊರ ಊರಿನ ಸಾಕಷ್ಟು ಜನರು ಬಂದು ಹೋಗುತ್ತಿರುತ್ತಾರೆ .ಹೀಗೆಯೆ ಒಂದು ಘಟನೆ ದೀ 25/12/2022 ರಂದು ಹುಬ್ಬಳಿಯಿಂದ ಹೆಂಡತಿ ಮಕ್ಕಳ ಜೊತೆ ಬಂದ ಪ್ರವಾಸಿಗರು ಸಾತೊಡ್ಡಿ ಜಲಪಾತಕ್ಕೆ ಆಗಮಿಸುತ್ತಾರೆ. ಬಂದ ನಂತರ ಊಟವನ್ನು ಅಲ್ಲಿಯೇ ಮುಗಿಸಿ ಪೋತುಲ ರಮನೆಂದ್ರ ರಾವ್ ವರ್ಷ 51 ಇವರು ಹಾಗೂ ಇವರ ತಮ್ಮ ಸೇರಿ ಈಜಲು ನೀರಿಗೆ ಇಳಿಯುತ್ತಾರೆ. ಈಜಾಡುವ ಸಮಯದಲ್ಲಿ ಪೋತುಲ ರಮಣೆಂದ್ರ ರಾವ್ ನೀರಿನ ಸುಳಿಗೆ ಸಿಕ್ಕಿ ಮುಳುಗಿ ಕಣೆಯಾಗಿರುತ್ತರೆ. ಗಾಬರಿಗೊಂಡ ಜೊತೆಗಿದ್ದವರು ಹಾಗೂ ಸ್ಥಳೀಯರು ಸೇರಿ ಹುಡುಕಾಟ ನಡೆಸಿದರು ಪತ್ತೆಯಗಲಿಲ್ಲ.ನಂತರ ಸಂಬಂದ ಪಟ್ಟ ಪೋಲೀಸ್ ಠಾಣೆಗೆ ಬಂದು ದೂರನ್ನು ನೀಡಿರುತ್ತಾರೆ. ವಿಷಯ ತಿಳಿದ ಪೋಲಿಸ್ ಅಧಿಕಾರಿಗಳು ಅರಣ್ಯ ಅಧಿಕಾರಿಗಳು ಅಗ್ನಿಶಾಮಕ ಸಿಬ್ಬಂದಿಗಳು ಸೇರಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರ ತೆಗೆದು ಕಾನೂನು ಕ್ರಮ ಜರುಗಿಸಿದ್ದರೆ.
ವರದಿ: ಶ್ರೀಪಾದ್ ಎಸ್ ಏಚ್