Categories: Latest

ಹಾಸನದಲ್ಲಿ ದುರಂತ: ಹೇಮಾವತಿ ನದಿ ಮತ್ತು ಕೆರೆಯಲ್ಲಿ ಮುಳುಗಿ ನಾಲ್ವರು ಸಾವು.

ಹಾಸನ: ಹಾಸನ ಜಿಲ್ಲೆಯ ಎರಡು ವಿಭಿನ್ನ ಘಟನೆಯಲ್ಲಿ ನಾಲ್ವರು ದುರ್ಘಟನಾವಶಾತ್ ನೀರುಪಾಲಾಗಿದ್ದಾರೆ. ಒಂದು ಘಟನೆ ಸಕಲೇಶಪುರ ತಾಲ್ಲೂಕಿನ ಹೆನ್ಲಿ ಈ ಗ್ರಾಮದಲ್ಲಿ, ಇನ್ನೊಂದು ಅರಕಲಗೂಡು ತಾಲ್ಲೂಕಿನ ಮಣಜೂರು ಗ್ರಾಮದಲ್ಲಿ ನಡೆದಿದೆ.

ಸಕಲೇಶಪುರ: ಈಜಲು ಹೋದ ಇಬ್ಬರು ಯುವಕರು ನೀರುಪಾಲು

ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸ್ನೇಹಿತರು ತಂಪಿಗಾಗಿ ಹೇಮಾವತಿ ನದಿಗೆ ಈಜಲು ತೆರಳಿದ ಸಂದರ್ಭ ದುರಂತ ಸಂಭವಿಸಿದೆ. ಭರತ್ (27) ಮತ್ತು ಪ್ರಕಾಶ್ (29) ಎಂಬ ಇಬ್ಬರು ಯುವಕರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರಾದ ಭರತ್ ಚಿಕ್ಕಮಗಳೂರು ಜಿಲ್ಲೆಯ ಹಾಂದಿ ಗ್ರಾಮದವರು, ಮತ್ತು ಪ್ರಕಾಶ್ ಸಕಲೇಶಪುರ ತಾಲ್ಲೂಕಿನ ಕಾಟಳ್ಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.

ಈ ಘಟನೆಯು ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಅವರ ಶವಗಳನ್ನು ಸ್ಥಳೀಯರ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ.

ಅರಕಲಗೂಡು: ಕೆರೆಯಲ್ಲಿ ಮುಳುಗಿ ಇಬ್ಬರ ದಾರುಣ ಅಂತ್ಯ

ಇನ್ನೊಂದು ಘಟನೆಯಲ್ಲಿ, ಅರಕಲಗೂಡು ತಾಲ್ಲೂಕಿನ ಮಣಜೂರು ಗ್ರಾಮದ ಕೆರೆಯಲ್ಲಿ ಮುಳುಗಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷ್ಮಣ (46) ಮತ್ತು ರವಿ (40) ಮೃತ ದುರ್ದೈವಿಗಳು.

ಮಣಜೂರು ಕೆರೆಯ ಬಳಿ ತೆರಳಿದ್ದ ಈ ಇಬ್ಬರು ಅಚಾನಕ್ಕಾಗಿ ಕಾಲು ಜಾರಿ ನೀರಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ನಂತರ ಅಗ್ನಿಶಾಮಕದಳವು ಶೋಧ ಕಾರ್ಯಾಚರಣೆ ನಡೆಸಿದ್ದು, ಒಬ್ಬನ ಶವವನ್ನು ಹೊರತೆಗೆದಿದ್ದು, ಇನ್ನೊಬ್ಬನ ಶೋಧ ಕಾರ್ಯ ಮುಂದುವರಿಯುತ್ತಿದೆ. ಈ ಸಂಬಂಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನदी ಮತ್ತು ಕೆರೆ ಸಮೀಪ ಮುಂಜಾಗ್ರತೆ ವಹಿಸುವಂತೆ ಸ್ಥಳೀಯರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಈ ಘಟನೆಗಳು ಗ್ರಾಮಗಳಲ್ಲಿ ವಿಷಾದ ಮೂಡಿಸಿದೆ.

nazeer ahamad

Recent Posts

ಪತ್ನಿಯೊಂದಿಗೆ ಜಗಳವಾಡಿ ಮೂರು ವರ್ಷದ ಮಗನನ್ನು ಕೊಂದ ಪಾಪಿ ತಂದೆ.!

ಪುಣೆ: ಪತ್ನಿಯೊಂದಿಗಿನ ಕಲಹದ ಬಳಿಕ ತನ್ನ ಮೂರು ವರ್ಷದ ಮಗನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಐಟಿ ಎಂಜಿನಿಯರ್ ಮಾಧವ್…

23 minutes ago

ಒಎಎಸ್‌ ಅಧಿಕಾರಿಯ ಲವ್‌, ಸೆಕ್ಸ್‌, ಧೋಕಾ: ಬುಡಕಟ್ಟು ಯುವತಿಗೆ ನ್ಯಾಯ!

ಜಗತ್ಸಿಂಗ್‌ಪುರ: ಆರುತಿಂಗಳ ಹೋರಾಟದ ನಂತರ ಬುಡಕಟ್ಟು ಸಮುದಾಯದ ಯುವತಿ ಒಎಎಸ್‌ ಅಧಿಕಾರಿಯ ವಿರುದ್ಧ ನಡೆದ ತನ್ನ ನ್ಯಾಯಯುದ್ಧದಲ್ಲಿ ಜಯ ಸಾಧಿಸಿದ್ದಾಳೆ.…

59 minutes ago

ಹೊಸೂರು ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಆರು ಜನ ಗಂಭೀರ ಗಾಯ

ಗದಗ ತಾಲೂಕಿನ ಹೊಸೂರು ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸ್ಫೋಟದ…

3 hours ago

ಆಧಾರ್ ಕಾರ್ಡ್ ಮಾಡಿಸಲು ಅಲೆದಾಟದಿಂದ ಬೇಸತ್ತು ಪ್ರಧಾನಿ ಮೋದಿಗೆ ಪತ್ರ ಬರೆದ ಅಜ್ಜಿ

ಯಲ್ಲಾಪುರ:-ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ ಮಾಡಿಸಲು ಅಲೆದಾಡುತ್ತಿರುವ ಯಲ್ಲಾಪುರ ಕಾನಗೋಡಿನ 80 ವರ್ಷದ ಸರಸ್ವತಿ ಹೆಗಡೆ ಇದೀಗ ಪ್ರಧಾನಿ…

3 hours ago

ಕುರುಪ್ಪಂಪಾಡಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ: ತಾಯಿ ಸೇರಿದಂತೆ ಇಬ್ಬರ ಬಂಧನ

ಕುರುಪ್ಪಂಪಾಡಿಯಲ್ಲಿ ತನ್ನ ಸಹಜೀವನ ಸಂಗಾತಿಯಿಂದ ಲೈಂಗಿಕ ಕಿರುಕುಳಕ್ಕೆ ಗುರಿಯಾದ ಇಬ್ಬರು ಅಪ್ರಾಪ್ತ ಬಾಲಕಿಯರ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಸಿದ…

4 hours ago

ಮನೆ ಕಳ್ಳತನ ಪ್ರಕರಣ:ಕಳ್ಳನಿಗೆ ಹೆಡೆಮುರಿ ಕಟ್ಟಿದ ತಾವರಗೇರಾ ಪೊಲೀಸರು.

ತಾವರಗೇರಾ:- ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ತಾವರಗೇರಾ ಪಟ್ಟಣದ ವಿಶ್ವೇಶ್ವರಯ್ಯ ನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಕಳ್ಳನನ್ನು ಹಿಡಿಯುವಲ್ಲಿ…

4 hours ago