Latest

ಪೈಪ್‌ಲೈನ್‌ ಕಾಮಗಾರಿಯಲ್ಲಿ ಭೀಕರ ದುರ್ಘಟನೆ: ಮಣ್ಣು ಕುಸಿತದಿಂದ ಇಬ್ಬರು ಸಾವು, ಒಬ್ಬರು ನಾಪತ್ತೆ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪಕ್ಕದ ನ್ಯೂ ಗಾಂಧಿ ನಗರದಲ್ಲಿ ಬುಧವಾರ ಸಂಭವಿಸಿದ ಭೀಕರ ಅವಘಡದಲ್ಲಿ ಇಬ್ಬರು ಕೂಲಿ ಕಾರ್ಮಿಕರು ಮಣ್ಣುಕೆಳಗೆ ಹೂತು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಗೋಕಾಕ ಮೂಲದ ಈ ಕಾರ್ಮಿಕರು ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ನಡೆಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಪೈಪ್‌ ಲೈನ್‌ಗಾಗಿ ಜೆಸಿಬಿಯಿಂದ ಎತ್ತಿದ ಹೊಂಡದಲ್ಲಿ ಕೆಲಸ ನಿರತವಾಗಿದ್ದ ಸಂದರ್ಭದಲ್ಲಿ ಅಚ್ಚಾನೇಕಾಗಿ ಮಣ್ಣು ಕುಸಿದಿದ್ದು, ಕಾರ್ಮಿಕರು ಅದರೊಳಗೆ ಸಿಲುಕಿ ಬಿದ್ದರು. ಪರಿಣಾಮವಾಗಿ ಅವರು ಸ್ಥಳದಲ್ಲೇ ಉಸಿರುಗಟ್ಟಿದ್ದಾರೆ.

ಇನ್ನು ಮತ್ತೊಬ್ಬ ಕಾರ್ಮಿಕನು ಈ ಅವಘಡದ ಬಳಿಕದಿಂದ ನಾಪತ್ತೆಯಾಗಿದ್ದು, ಸ್ಥಳೀಯ ಅಗ್ನಿಶಾಮಕ ದಳ ಮತ್ತು ಪೊಲೀಸರ ತಂಡ ಆತನು ಎಲ್ಲಿ ಹೋಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ನಾಪತ್ತೆಯಾದ ವ್ಯಕ್ತಿಗಾಗಿ ಶೋಧ ಮುಂದುವರೆದಿದ್ದು, ಸ್ಥಳದಲ್ಲಿ ಅಗ್ನಿಶಾಮಕದಳದ ಕಾರ್ಯಚರಣೆ ಮುಂದುವರಿದಿದೆ.

ಅಪಘಾತದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂಜಾಗ್ರತಾ ಕ್ರಮವಾಗಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

nazeer ahamad

Recent Posts

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ವಿವಾದ: ಸರ್ಕಾರದ ತ್ವರಿತ ಕ್ರಮ, ಅಧಿಕಾರಿ ಅಮಾನತು..

ಶಿವಮೊಗ್ಗ: ರಾಜ್ಯದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯಿಂದ ಜನಿವಾರ ತೆಗೆಸಿದ ಘಟನೆ ತೀವ್ರ ವಾಗ್ದಾಳಿ ಮತ್ತು ವಿರೋಧಕ್ಕೆ ಕಾರಣವಾಗಿದೆ. ಸಮಾಜದ…

1 hour ago

ಪಡುಬಿದ್ರಿಯಲ್ಲಿ ಅಕ್ರಮ ಮರಳು ಸಾಗಾಟ: ಪರಾರಿಯಾದ ಚಾಲಕ, ಟಿಪ್ಪರ್ ವಶಕ್ಕೆ

ಪಡುಬಿದ್ರಿ: ಹೆಜಮಾಡಿ ಮಟ್ಟು ರಸ್ತೆಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್‌ವೊಂದು ಪಡುಬಿದ್ರಿ ಪೊಲೀಸರು ಎಪ್ರಿಲ್ 17ರ ಮಧ್ಯರಾತ್ರಿ ವಶಪಡಿಸಿಕೊಂಡಿದ್ದಾರೆ. ತುರ್ತು…

3 hours ago

ಗುರುಗ್ರಾಮ್ ಆಸ್ಪತ್ರೆಯಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಟೆಕ್ನಿಷಿಯನ್ ದೀಪಕ್ ಬಂಧನ”

ಗುರುಗ್ರಾಮ್‌ನ ಖಾಸಗಿ ಆಸ್ಪತ್ರೆಗೆ ಸೇರಿದ್ದ ಮಹಿಳೆಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಾಲ್ಕು ದಿನಗಳ ನಿರಂತರ ತನಿಖೆಯ ಬಳಿಕ ಪೊಲೀಸರ…

4 hours ago

ಆರ್ಥಿಕ ವಂಚನೆ ಹಾಗೂ ಮಾನಸಿಕ ಕಿರುಕುಳದಿಂದ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಆರೋಪಿಗಳ ವಿರುದ್ಧ ಉಲ್ಕೊಂಡ ವೀಡಿಯೋ ವೈರಲ್.!

ಬೆಂಗಳೂರು: ಅನೇಕಲ್‌ನಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಆರ್ಥಿಕ ವಂಚನೆ ಮತ್ತು ಮಾನಸಿಕ ಕಿರುಕುಳದಿಂದ ತತ್ತರಿಸಿ ಜೀವನದ ಕ್ಷಣಿಕ ನಿರ್ಣಯ ಮಾಡಿಕೊಂಡ ದುರ್ಘಟನೆ…

4 hours ago

ಸಾಲದಲ್ಲಿ ಖರೀದಿಸಿದ ವ್ಯಾಪಾರ ವಾಹನಕ್ಕೆ ಬೆಂಕಿ: ಕೆಂಬಾರೆ ಗ್ರಾಮದ ದಂಪತಿಗೆ ಲಕ್ಷಾಂತರ ನಷ್ಟ.

ಬೆಳ್ಳೂರು ತಾಲ್ಲೂಕಿನ ಕೆಂಬಾರೆ ಗ್ರಾಮದಲ್ಲಿ ನಡೆದ ಒಂದು ದುರ್ಭಾಗ್ಯಕರ ಘಟನೆಯು ಸ್ಥಳೀಯರನ್ನು ಬೆಚ್ಚಿಬಿಟ್ಟಿದೆ. ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಮಾರಾಟ ಮಾಡಿ…

6 hours ago

ರಿಷಿಕೇಶ ದುರಂತ: ರಿವರ್‌ ರಾಫ್ಟಿಂಗ್ ವೇಳೆ ನೀರಿಗೆ ಬಿದ್ದು ಯುವಕನ ಸಾವು

ಉತ್ತರಾಖಂಡದ ಪ್ರಸಿದ್ಧ ಪ್ರವಾಸಿ ತಾಣ ರಿಷಿಕೇಶದಲ್ಲಿ ನಡೆಯುತ್ತಿದ್ದ ರಿವರ್‌ ರಾಫ್ಟಿಂಗ್‌ನಾಗಮನ ಒಂದು ದುರಂತದಲ್ಲಿ ಅಂತ್ಯ ಕಂಡಿದೆ. ಡೆಹ್ರಾಡೂನ್‌ನಿಂದ ಪ್ರವಾಸಕ್ಕೆ ಬಂದಿದ್ದ…

6 hours ago