ಚಿಕ್ಕನಾಯಕನಹಳ್ಳಿ: ಬೋನಿಗೆ ಬಿದ್ದ ಚಿರತೆಗೆ ಚಿಕಿತ್ಸೆ, ತೀನಂಶ್ರೀ ಸಸ್ಯಕಾಶಿಯಲ್ಲಿ ಆರೈಕೆ, ಚಿರತೆ ನೋಡಲು ಚಿಕ್ಕನಾಯಕನಹಳ್ಳಿ ಹೊಸಹಳ್ಳಿ ಅಕ್ಕ ಪಕ್ಕದ ಗ್ರಾಮಸ್ಥರು ಲಗ್ಗೆ.
ತುರುವೇಕೆರೆ ತಾಲೂಕಿನ ಕ್ಯಾಮಸಂದ್ರದಲ್ಲಿ ಇರಿಸಿದ ಬೋನಿಗೆ ಬಿದ್ದ ಚಿರತೆ ಕಾಲಿಗೆ ಮುಳ್ಳು ತಂತಿ ತಗುಲಿ ಗಾಯಗೊಂಡಿದ್ದ ಚಿರತೆ ಗಾಯಗೊಂಡ ಚಿರತೆಯನ್ನು ಚಿಕ್ಕನಾಯಕನಹಳ್ಳಿ ತೀನಂಶ್ರೀ ಸಸ್ಯಕಾಶಿಯಲ್ಲಿ ತಜ್ಞ ವೈದ್ಯರುಗಳ ತಂಡ ಎರಡು ದಿನಗಳಿಂದ ಚಿಕಿತ್ಸೆ ನೀಡುತ್ತಿದೆ ಇಂದು ನಿಗಾವಣಿ ಅಬ್ಸರ್ವ್ ನಲ್ಲಿ ಇಟ್ಟು ನಾಳೆ ಮೇಲಧಿಕಾರಿಗಳ ಆದೇಶದಂತೆ ಚಿರತೆಯನ್ನು ಕಾಡಿಗೆ ಬಿಡಲಾಗುವುದು ಎಂದು ಚಿಕ್ಕನಾಯಕನಹಳ್ಳಿ ಆರ್.ಎಫ್ ಓ. ಅರುಣ್ ಕುಮಾರ್ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮಂಜುನಾಥ್ ಗಿರೀಶ್ ಸಾರ್ವಜನಿಕರು ಸೇರಿದ್ದರು
ವರದಿ: ಸ್ವಾಮಿನಾಥ್