ಕನ್ನಡದ ಕಿರುತೆರೆ ಜನಪ್ರಿಯ ನಟಿ `ಪವಿತ್ರ ಜಯರಾಂ’ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ ಜನಪ್ರಿಯರಾಗಿರುವ ಕನ್ನಡತಿ ಪವಿತ್ರ ಜಯರಾಂ ಆಂಧ್ರಪ್ರದೇಶದ ಕರ್ನೂಲು ಸಮೀಪದಲ್ಲಿ ಇಂದು (ಮೇ.12) ಮುಂಜಾನೆ ಅಪಘಾತವಾಗಿದೆ ಎಂದು ವರದಿಯಾಗಿದೆ. ಆಂಧ್ರಪ್ರದೇಶದ ಮಹೆಬೂಬ್‌ನಗರ ಜಿಲ್ಲೆಯ ಭೂತ್‌ಪುರ ಪುರಸಭೆ ವ್ಯಾಪ್ತಿಯ ಶೇರಿಪಲ್ಲಿ (ಬಿ) ಗ್ರಾಮದ ಬಳಿ, ಪವಿತ್ರಾ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಹೈದರಾಬಾದ್‌ನಿಂದ ವನಪರ್ತಿಗೆ ಬರುತ್ತಿದ್ದ ಬಸ್ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಪವಿತ್ರಾ ಜಯರಾಮ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಡ್ಯದ ಹನಕೆರೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ಪವಿತ್ರಾ ಜಯರಾಮ್‌ ತೆಲುಗಿನಿ ತ್ರಿನಯನಿ ಸೀರಿಯಲ್‌ ನಟಿಸುತ್ತಿದ್ದರು. ಈ ಧಾರಾವಾಹಿ ಕನ್ನಡಕ್ಕೆ ಡಬ್‌ ಆಗಿ ಜೀ ಕನ್ನಡದಲ್ಲೂ ಪ್ರಸಾರ ಕಂಡಿತ್ತು. ಈ ಸೀರಿಯಲ್‌ಗೂ ಮುನ್ನ ಕನ್ನಡದ ಕೆಲವು ಧಾರಾವಾಹಿಗಳಲ್ಲೂ ಪವಿತ್ರ ಬಣ್ಣ ಹಚ್ಚಿದ್ದರು. ಜೋಕಾಲಿ, ರೋಬೋ ಫ್ಯಾಮಿಲಿ, ರಾಧಾ ರಮಣ, ನೀಲಿ ಸೀರಿಯಲ್‌ನಲ್ಲೂ ನಟಿಸಿದ್ದರು.

error: Content is protected !!