ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ ಕೊನೆಯಲ್ಲಿ 14 ಮತ್ತು 15 ವರ್ಷದ ಇಬ್ಬರು ಹೆಣ್ಣು ಮಕ್ಕಳು ಕೊಲೆಯಾಗಿದ್ದಾರೆ. ನಾನು ಮದುವೆಯಾಗಿರುವ ಹೆಂಡತಿ ನನಗೆ ಬೇಕು ಆದರೆ ಅವಳ ಮೊದಲನೇ ಗಂಡನಿಗೆ ಜನಿಸಿದ ಇಬ್ಬರು ಹೆಣ್ಣು ಮಕ್ಕಳ ಜವಾಬ್ದಾರಿ ನನಗೆ ಬೇಕಾಗಿಲ್ಲ ಎಂಬ ಕಾರಣಕ್ಕೆ ಮಲ ತಂದೆಯೇ ತನ್ನ ಹೆಂಡತಿಯ ಎರಡು ಹೆಣ್ಣು ಮಕ್ಕಳನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಿನ್ನೆ ನಡೆದಿದೆ.
ಗಂಡನಿಂದ ವಿಚ್ಛೇದನ ಪಡೆದು ವಾಸವಾಗಿದ್ದ ಅನಿತಾ ಎಂಬ ಮಹಿಳೆಯನ್ನು 9 ವರ್ಷಗಳ ಹಿಂದೆ ಉತ್ತರ ಭಾರತ ಮೂಲದ ಸುಮಿತ್ ಎಂಬ ವ್ಯಕ್ತಿ ಮದುವೆ ಮಾಡಿಕೊಂಡಿದ್ದಾನೆ. ನಾನು ನಿನ್ನನ್ನು ಮದುವೆಯಾಗಿ ಗಂಡನಾಗಿರುವುದಲ್ಲದೆ ನಿನ್ನ ಮಕ್ಕಳಿಗೆ ಅಪ್ಪನಾಗಿ ಜವಾಬ್ದಾರಿ ಒರುತ್ತೇನೆ ಎಂದು ಮದುವೆ ಮಾಡಿಕೊಂಡಿದ್ದಾನೆ ಸುಮಾರು 9 ವರ್ಷಗಳ ಕಾಲ ಹೆಂಡತಿ ಮಕ್ಕಳೊಂದಿಗೆ ಚೆನ್ನಾಗಿ ಜೀವನ ಸಾಗಿಸುತ್ತಿದ ಗಂಡ ಸುಮಿತ್ ಈಗ ಮಕ್ಕಳು ಹರಿಹರೆಯದ ವಯಸ್ಸಿಗೆ ಬಂದಾಗ ಅವರನ್ನು ಕೊಲೆ ಮಾಡಿ ಸಿಕೊಂಡಿದ್ದಾನೆ.
ಉತ್ತರ ಭಾರತ ಮೂಲದ ಕುಟುಂಬ ದಾಸರಹಳ್ಳಿಯ ಕಾವೇರಿ ಬಡಾವಣೆಯಲ್ಲಿ ವಾಸವಿದ್ದರು. ಸುಮಾರು 14-15 ವರ್ಷಗಳ ಹೆಣ್ಣು ಮಕ್ಕಳನ್ನು ಮಲ ತಂದೆಯ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಈ ಕೊಲೆಯಲ್ಲಿ ಮೃತರನ್ನು 14 ವರ್ಷದ ಸೋನಿಯಾ ಹಾಗೂ 15 ವರ್ಷದ ಸೃಷ್ಟಿ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಅಕ್ಕತಂಗಿ ಹಾಗೂ ಅಪ್ರಾಪ್ತ ಬಾಲಕಿಯರಾಗಿದ್ದಾರೆ. ಕೊಲೆಯಾದ ಘಟನೆಗೆ ಬೆಳಕಿಗೆ ಬರುತ್ತಿದ್ದಂತೆ ಘಟನಾ ಸ್ಥಳಕ್ಕೆ ಈಶಾನ್ಯ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಸಜಿತ್ ಹಾಗೂ ಅಮೃತ ಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಾಸರಹಳ್ಳಿಯ ಕಾವೇರಿ ಬಡಾವಣೆಯ ಮನೆಯೋಂದರ ಎರಡನೇ ಮಹಡಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ಕು ಜನ ವಾಸವಾಗಿದ್ದರು ಇನ್ನು ಸಮಿತ್ ಜಪ್ಟೋದಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಶನಿವಾರ ಮಧ್ಯಾಹ್ನ ಹೆಂಡತಿ ಗಾರ್ಮೆಂಟ್ ನಲ್ಲಿ ಕೆಲಸಕ್ಕೆ ಹೋದಾಗ ಸುಮಿತ್ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಇನ್ನು ಈಗ ಘಟನೆಯ ಕುರಿತು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಸಜಿತ್ ಅವರು ದಾಸರಹಳ್ಳಿಯ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿರುವ ಘಟನೆ ಮಧ್ಯಾಹ್ನ 3:30ರಲ್ಲಿ ನಡೆದಿದೆ ಈ ಬಗ್ಗೆ ಮಕ್ಕಳ ತಾಯಿ ದೂರು ನೀಡಿದ್ದಾರೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಆರೋಪಿಯನ್ನ ಬಂಧನ ಮಾಡಲು ತಂಡಗಳನ್ನು ರಚಿಸಲಾಗಿದೆ ಮಕ್ಕಳನ್ನು ಕೊಲೆ ಮಾಡಿದ ಬಳಿಕ ಮಲ ತಂದೆ ಸುಮಿತ್ ನಾಪತ್ತೆಯಾಗಿದ್ದು ಅವರ ಬಂಧನಕ್ಕೂ ಬಲೆ ಬೀಸಲಾಗಿದೆ ಎಂದಿದ್ದಾರೆ.