ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜೈಲಿನಲ್ಲಿ ಇದ್ದ ಹಿನ್ನೆಲೆಯಲ್ಲಿ, ಈಗ ಅವರ ಹೆಸರು ಮರುಮತ್ತೆ ಸುದ್ದಿಗೆ ಎಳೆದಿದೆ. ಈ ಬಾರಿ ಕಾರಣ, ನಿರ್ಮಾಪಕ ಉಮಾಪತಿ ಅವರ ಮಾತುಗಳು.

‘ರಾಬರ್ಟ್’ ಸಿನಿಮಾದ ಟೈಟಲ್ ವಿವಾದದಿಂದ ಶುರುವಾದ ದರ್ಶನ್ ಮತ್ತು ಉಮಾಪತಿ ನಡುವಿನ ದ್ವೇಷ, ತಗಡು ಎಂಬ ಪದ ಬಳಕೆಯಿಂದ ಮತ್ತಷ್ಟು ಉಲ್ಬಣಗೊಂಡಿತ್ತು. ಈಗ ಉಮಾಪತಿ ಅವರು ನೀಡಿರುವ ಹೊಸ ಹೇಳಿಕೆ, ಈ ಬಾಂಬನ್ನು ಮತ್ತೊಮ್ಮೆ ಸಿಡಿಸಿರುವಂತಾಗಿದೆ.

ಸಿದ್ದಾಪುರ ತಾಲೂಕಿನ ಹಲಗಡಿಕೊಪ್ಪ ಗ್ರಾಮದಲ್ಲಿ ನಡೆದ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಉಮಾಪತಿ ಮಾತನಾಡುತ್ತಾ, “ಈ ಜಗತ್ತಿನಲ್ಲಿ ಎರಡು ರೀತಿಯ ಜನರು ಇರುತ್ತಾರೆ. ಕೆಲವರು ಇತರರಿಗೆ ಮಾದರಿಯಾಗಿ ಬದುಕುತ್ತಾರೆ, ಕೆಲವರು ಎಚ್ಚರಿಕೆ ಕೊಡುವ ರೀತಿಯಲ್ಲಿ ಬದುಕುತ್ತಾರೆ. ಜೈಲಿಗೆ ಹೋಗಿ ಬಂದವರು ಎಚ್ಚರಿಕೆಯ ಪ್ರತೀಕವಾಗುತ್ತಾರೆ ಅಥವಾ ತೊಂದರೆ ನೀಡುವ ಮೂಲಕ ನಾಶವಾಗುತ್ತಾರೆ” ಎಂಬ ಹೇಳಿಕೆಯಿಂದ ಡಿಬಾಸ್‌ನ್ನು ಉಲ್ಲೇಖಿಸಿರುವಂತೆ ಜನರು ಅರ್ಥೈಸಿದ್ದಾರೆ.

ಮತ್ತೊಂದು ಮಹತ್ವದ ಮಾತಿನಲ್ಲಿ ಅವರು, “ದೊಡ್ಡವರನ್ನೆಲ್ಲಾ ಯಾಕೆ ಎದುರು ಹಾಕಿಕೊಳ್ಳುತ್ತಾ ಇರುತ್ತೀಯಾ ಅಂತ ಕೆಲವರು ಕೇಳ್ತಾರೆ. ಆದರೆ ನಿಜ ಹೇಳ್ಬೇಕಂದ್ರೆ, ನಾನು ಯಾರನ್ನೂ ಎದುರು ಹಾಕಿಕೊಳ್ಳಲ್ಲ… ಅವರು ನನ್ನನ್ನು ಎದುರು ಹಾಕಿಕೊಳ್ಳುತ್ತಾರೆ. ನಾನು ಯಾರಿಗಾದರೂ ಭಯಪಡೋಂಥವನು ಅಲ್ಲ” ಎಂದು ಹೇಳಿದ್ದಾರೆ.

ಇದೇ ಭಾಷಣದ ಹಿನ್ನಲೆಯಲ್ಲಿ, ಉಮಾಪತಿ ಮತ್ತೆ ದರ್ಶನ್‌ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ ಎಂಬ ಅಭಿಪ್ರಾಯಗಳು ಎದ್ದಿವೆ. ಈಗ ಈ ಮಾತುಗಳು ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಅಥವಾ ಸಿನಿಮಾ ಲೋಕದ ಬೆಳವಣಿಗೆಗಳಿಗೆ ದಾರಿ ಮಾಡಿಕೊಡುತ್ತವೆ ಎಂಬ ಕುತೂಹಲ ಮೂಡಿದೆ.

Leave a Reply

Your email address will not be published. Required fields are marked *

error: Content is protected !!