ಧಾರಾವಾಹಿ ನಟಿ ಪವಿತ್ರಾ ಜಯರಾಮ್ ಅವರು ಕಳೆದ ಭಾನುವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದೇ ಅಪಘಾತದಲ್ಲಿ ಪವಿತ್ರಾ ಬಾಯ್ ಫ್ರೆಂಡ್, ನಟ ಚಂದ್ರಕಾಂತ್ ಗಾಯಗೊಂಡಿದ್ದರು. ಪವಿತ್ರಾ ಸಾವನ್ನು ಸಹಿಸಲಾಗದೆ ಚಂದ್ರಕಾಂತ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಟಿ ಪವಿತ್ರಾ ಜಯರಾಮ್ ಕನ್ನಡ ಸೇರಿದಂತೆ ಬೇರೆ ಭಾಷೆಯ ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದು ಗೊತ್ತೇ ಇದೆ. ಆದರೆ, ಚಂದ್ರಕಾಂತ್ ಕೂಡ ಮದುವೆಯಾಗಿದ್ದವರು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಆದರೆ, ಪವಿತ್ರಾ ಅವರ ಸ್ನೇಹವಾದ ನಂತರ ಕುಟುಂಬದಿಂದ ದೂರ ಉಳಿದಿದ್ದರು ಎಂದು ತಿಳಿದುಬಂದಿದೆ.
ಪವಿತ್ರಾ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಚಂದ್ರಕಾಂತ್ ಖಿನ್ನತೆಗೆ ಒಳಗಾಗಿದ್ದರು. ಅವರಿಲ್ಲದ ಜಗತ್ತಿನಲ್ಲಿ ತಾನು ಇರಲು ಸಾಧ್ಯವಿಲ್ಲ ಎಂದೂ, ಆಕೆಯ ಬಗ್ಗೆ ಸರಣಿ ಪೋಸ್ಟ್‌ಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಕೂಡ ಮಾಡಿದ್ದರು. ಚಂದ್ರಕಾಂತ್ ಎರಡು ದಿನ ಕಾಯುವಂತೆ ಹೇಳಿ ಪೋಸ್ಟ್ ಮಾಡಿದ್ದರು ಆದರೆ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ನಾವು ಚಂದು ಮೊಬೈಲ್ ಗೆ ಫೋನ್ ಮಾಡಿದ್ವಿ. ಆದ್ರೆ ಅವರು ಫೋನ್ ತೆಗೆದುಕೊಳ್ಳಲಿಲ್ಲ, ಬಳಿಕ ನಾವು ನಮಗೆ ತಿಳಿದಿರುವವರನ್ನು ಅವರ ಫ್ಲಾಟ್ ಗೆ ಕಳುಹಿಸಿದ್ದೆ. ಅಲ್ಲಿ ಬಾಗಿಲು ಒಡೆದು ನೋಡಿದಾಗ ಚಂದು ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂತು ಎಂದು ಚಂದ್ರಕಾಂತ್ ಪತ್ನಿ ಶಿಲ್ಪಾ ಹೇಳಿದ್ದಾರೆ.