ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾರಿ ಮಳೆ ಮತ್ತು ಗಾಳಿಯ ಆರ್ಭಟ ದಿಂದಾಗಿ ಹಲವಾರು ಕಡೆಗಳಲ್ಲಿ ಮನೆಗಳು ಎಲ್ಲವೂ ನಾಶವಾಗುತ್ತಿದೆ, ಇಂತಹದೊಂದು ಘಟನೆ ಪರಮೇಶ್ವರ ನಾರಾಯಣ ಗುನಗಾ ಕಾನಗೋಡ ಬಾಳೆಹದ್ದ ರವರ ಮನೆ ದಿನಾಂಕ 28-07-2024 ರಂದು ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ವಿಪರೀತ ಮಳೆ ಗಾಳಿಯ ಹೊಡೆತಕ್ಕೆ ಮನೆಯ ಹಿಂಭಾಗದಲ್ಲಿ ಇರುವ ಗೋಡೆ ಕುಸಿದು ಬಿದ್ದಿದ್ದು ಯಾವುದೇ ಪ್ರಾಣ ಹಾನಿ ಉಂಟಾಗಲಿಲ್ಲ ಎಂಬ ಮಾಹಿತಿ ದೊರೆತಿದೆ ಘಟನೆಯ ಪರಿಶೀಲನೆ ಬಗ್ಗೆ ನೊಡಲ್ ಅಧಿಕಾರಿಗಳು ಉಮ್ಮಚಗಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಲಾಗಿ ಸದರಿ ಮನೆಯು ಇನ್ನು ಶಿಥಿಲಾವಸ್ಥೆಯಲ್ಲಿದ್ದು ಪೂರ್ತಿಯಾಗಿ ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ಮನೆಯ ಕುಟುಂಬಸ್ಥರಿಗೆ ವಸತಿಯ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ನೊಟೀಸ್ ನೀಡಲಾಗಿದೆ.
ವರದಿ: ಶ್ರೀಪಾದ್ ಎಸ್