
ಉತ್ತರ ಪ್ರದೇಶದ ಲಕ್ನೋದಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ. ಫಿರೋಜಾಬಾದ್‌ನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರವೀಂದ್ರ ಕುಮಾರ್ ಬಂಧಿತ ಆರೋಪಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೌಪ್ಯ ಮಾಹಿತಿಯ ಸೋರಿಕೆ:
- ಯುಪಿ ಎಟಿಎಸ್ ಮುಖ್ಯಸ್ಥ ನೀಲಬ್ಜಾ ಚೌಧರಿ ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದ್ದು,
- ರವೀಂದ್ರ ಕುಮಾರ್ ಗಂಗಾಯಣ ಬಾಹ್ಯಾಕಾಶ ಯೋಜನೆ, ಮಿಲಿಟರಿ ಲಾಜಿಸ್ಟಿಕ್ಸ್ ಮತ್ತು ಡ್ರೋನ್‌ಗಳ ಕುರಿತು ಗುಪ್ತ ಮಾಹಿತಿ ಹಂಚಿಕೊಂಡಿದ್ದಾನೆ.
- ಈ ಸಂಬಂಧ ಅವನ ಸಹಚರನನ್ನೂ ಬಂಧಿಸಲಾಗಿದೆ.
ಐಎಸ್‌ಐ ಏಜೆಂಟ್ ‘ನೇಹಾ ಶರ್ಮಾ’ ಮೂಲಕ ಬೇಹುಗಾರಿಕೆ
- ‘ನೇಹಾ ಶರ್ಮಾ’ ಎಂಬ ಕೋಡ್ ನೇಮ್ ಹೊಂದಿದ್ದ ಐಎಸ್‌ಐ ಏಜೆಂಟ್‌ಗೆ ರವೀಂದ್ರ ಕುಮಾರ್ ಮಾಹಿತಿ ಒದಗಿಸುತ್ತಿದ್ದ ಎಂದು ಯುಪಿ ಎಟಿಎಸ್ ಮತ್ತು ಇತರೆ ಕಾನೂನು ಸಂಸ್ಥೆಗಳು ಪತ್ತೆ ಹಚ್ಚಿದ್ದವು.
- ಈ ಹಿನ್ನೆಲೆಯಲ್ಲಿ ಆಗ್ರಾ ಘಟಕ ರವೀಂದ್ರ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು.
- ವಾಟ್ಸಾಪ್ ಮತ್ತು ಫೇಸ್‌ಬುಕ್ ಮೂಲಕ ‘ನೇಹಾ’ ಹೆಸರಿನ ಹ್ಯಾಂಡ್ಲರ್ ಜೊತೆ ಸಂಪರ್ಕದಲ್ಲಿದ್ದು, ಮಿಲಿಟರಿ ಮಾಹಿತಿಗಳನ್ನು ಹಂಚಿಕೊಂಡಿದ್ದನು.
ಸೂಕ್ಷ್ಮ ಮಾಹಿತಿಯ ಲೋಪ:
- ರವೀಂದ್ರ ಕುಮಾರ್ ತನ್ನ ಮೊಬೈಲ್‌ನಲ್ಲಿ ಈ ಹ್ಯಾಂಡ್ಲರ್‌ನ ನಂಬರ್ ಅನ್ನು ‘ಚಂದನ್ ಸ್ಟೋರ್ ಕೀಪರ್ 2’ ಎಂದು ಸೇವ್ ಮಾಡಿದ್ದ.
- ಶಸ್ತ್ರಾಸ್ತ್ರ ಕಾರ್ಖಾನೆಯ ದೈನಂದಿನ ಉತ್ಪಾದನಾ ವರದಿಗಳು ಸೇರಿದಂತೆ ಹಲವು ಮಹತ್ವದ ಮಾಹಿತಿಗಳನ್ನು ಸೋರಿಕೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಯುಪಿ ಎಟಿಎಸ್, ಹೆಚ್ಚಿನ ತನಿಖೆ ಕೈಗೊಂಡಿದೆ. ಅಪಾರ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ಹರಿದುಹೋಗುವ ಸಾಧ್ಯತೆ ಇರುವುದರಿಂದ, ಆರೋಪಿಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.