ಕುಂದಗೋಳ: ಜಾನುವಾರುಗಳಿಗೆ ಕಂಡು ಬರುವ ಕಾಲು ಬಾಯಿ ರೋಗದ ನಿಯಂತ್ರಣಕ್ಕಾಗಿ ಲಸಿಕೆ ಲಭ್ಯವಿದ್ದು, ಪಶುಪಾಲಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕಿ ಕುಸುಮಾವತಿ ಶಿವಳ್ಳಿ ಕರೆ ನೀಡಿದರು.
ಅವರು ಕುಂದಗೋಳ ಪಟ್ಟಣದ ಪಶುಪಾಲನಾ ಪಶುವೈದ್ಯಕೀಯ ಸೇವ ಇಲಾಖೆ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಇವರ ಸಹಯೋಗದಲ್ಲಿ ಕಾಲುಬಾಯಿ ಲಸಿಕಾ ಅಭಿಯಾನವನ್ನು ಎತ್ತುಗಳಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಎಲ್ಲೆಡೆ ಜಾನುವಾರುಗಳಿಗೆ ಕಾಲುಬಾಯಿ ರೋಗ ಬಾದಿಸಿದ್ದು ಅವುಗಳ ನಿಯಂತ್ರಣಕ್ಕೆ ಪಶುಪಾಲಕರು ಲಸಿಕೆ ಸದುಪಯೋಗ ಪಡೆದುಕೊಳ್ಳಬೇಕು. ಜಾನುವಾರಗಳು ರೈತರ ಜಿವಾಳಾಗಿದ್ದು ಅವುಗಳ ರಕ್ಷಣೆಗೆ ರೈತರು ಲಸಿಕೆ ಪಡೆಯಬೇಕೆಂದು ಸಲಹೆ ನೀಡಿದರು.
ನಂತರ ತಾಲೂಕಿನ ಪಶು ವೈದ್ಯಾಧಿಕಾರಿ ಮಾತನಾಡಿ ದಿನಾಂಕ 07/11/2022 ರಿಂದ 07/12/2022 ರವರಿಗೆ ಈ ಅಭಿಯಾನ ನಡೆಯಲಿದ್ದು, ಪ್ರತಿಯೊಂದು ಎತ್ತು, ಹೋರಿ, ಹಸು ಎಮ್ಮೆ ಜಾನುವಾರುಗಳಿಗೆ ಲಸಿಕೆ ನಿಡುತ್ತಿದ್ದೆವೆ. ಈಗಾಗಲೇ 19 ತಂಡಗಳೊಂದಿಗೆ 38 ಲಸಿಕಾದಾರರು ಇದ್ದು, ಇನ್ನೂ 6 ಜನ ಮೇಲ್ವಿಚಾರಕ ವೈದ್ಯಾಧಿಕಾರಿ ಇದ್ದು ಪ್ರತಿ ಮನೆ ಮನೆಗೂ ಲಸಿಕೆ ಅಭಿಯಾನ ಪ್ರಾರಂಭಗೂಳ್ಳಿಲಿದೆ ಎಂದು ಮಾಹಿತಿ ನೀಡಿದರು
ವರದಿ; ಶಾನು ಯಲಿಗಾರ