ಕುಂದಗೋಳ : ಇಂದಿನ ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನೃತ್ಯ, ಗಾಯನ, ವಿವಿಧ ಮನರಂ ಜನೆ ಕಾರ್ಯಕ್ರಮಗಳು ಕಣ್ಮರೆಯಾಗುತ್ತಿರುವುದು ಕಂಡು, ಇಲ್ಲೊಂದು ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ದಿನಂ ಪ್ರತಿ ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗುತ್ತಿವೆ.
ಹೌದು.! ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ 12 ನೇ ವರ್ಷದ ಗ್ರಾಮದೇವತೆ ಹಾಗೂ ಉಡಚಮ್ಮ ದೇವೆ ಜಾತ್ರೆ ಮಹೋತ್ಸವ ನಿಮಿತ್ತ, ಬರಗಾಲದ ಬಂಟ, ಬಂಜೆತನ ನಿವಾರಕ, ಎಂದೇ ಖ್ಯಾತಿ ಪಡೆದ ಮಹಾ ಪುರುಷ ಕಲಬುರಗಿ ಶ್ರೀ ಶರಣ ಬಸವೇಶ್ವರ ಪ್ರವಚನ, ವಿವಿಧ ಕಾರ್ಯಕ್ರಮಗಳಿಗೆ ಯರಗುಪ್ಪಿ ಗ್ರಾಮ ದೇವತೆ ದೇವಸ್ಥಾನದ ಆವರಣ ಸಾಕ್ಷಿಯಾಗಿತ್ತು.
ಒಂದು ತಿಂಗಳು ಪ್ರವಚನ ನಡೆಯುವುದರಿಂದ ಊರಿನ ಹಿರಿಯರ ಮಾರ್ಗದರ್ಶನದಂತೆ ಯುವಕರು ಒಂದಿಲ್ಲೊಂದು ಕಾರ್ಯಕ್ರಮ ಆಯೋಜಿಸಿ ಯುವಕರಿಗೆ ಪೋತ್ಸಾಹ, ಹುರಿದುಂಬಿಸಲು, ಪ್ರತಿನಿತ್ಯ ಮನೋಲ್ಲಾಸಕ್ಕಾಗಿ ಕಾರ್ಯಕ್ರಮಗಳು ನಡೆಸುತ್ತಾ ಇರುವುದು ಗಮನಾರ್ಹವಾಗಿದೆ.
ಪ್ರತಿದಿನ ಪ್ರವಚನ ಮಹಾಮಂಗಲ ಆಗಿದ ತಕ್ಷಣ ಮೂಸಿಕಲ್ ಚೇರ್, ಮಹಿಳೆ ಭಾವಚಿತ್ರಕ್ಕೆ ಸಿಂಧೂರ ಇಡುವುದು, ಕಪ್ಪೆ ಕುಣಿತ, ಹಿಂದೆ ಕೈಕಟ್ಟಿ ಬಾಳೆಹಣ್ಣು ತಿನ್ನುವುದು, ಹೀಗೆ ಸಾಕಷ್ಟು ಕಾರ್ಯಕ್ರಮಗಳು ಜೊತೆಗೆ ಮಹಿಳೆಯರು ನಾವೇನು ಕಡಿಮೆ ಇಲ್ಲದಂತೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮುಕ್ತವಾಗಿ ಭಾಗವಹಿಸುತ್ತಿದಾರೆ. ಇನ್ನೂ ಯುವಕರ ಕೇಕೆ, ಶಿಳ್ಳೆ, ಅತಿ ಉತ್ಸಾಹಕ್ಕೆ ಈ ವರ್ಷದ ಹಬ್ಬ ಸಾಕ್ಷಿಯಾಗಿದೆ.
ಒಟ್ಟಿನಲ್ಲಿ ಪ್ರತಿದಿನದ ಕಾರ್ಯಕ್ರಮಗಳು ನೋಡುಗರ ಮನ ಸೆಳೆಯಲು ಈ ಮನರಂಜನೆ ಕಾರ್ಯಕ್ರಮಗಳು ಸುಗ್ಗಿಯ ನಂತರ ಜನರನ್ನು ಒಂದೆಡೆ ಸೇರಿಸಿ ಸಂತೋಷದಿಂದ ಇರಲು ಸಾಕ್ಷಿಯಾಗಿದೆ.
ವರದಿ; ಶಾನು ಯಲಿಗಾರ