ನಮಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಉತ್ತರಕನ್ನಡ ಜಿಲ್ಲೆ ಮಲೆನಾಡು ಪ್ರದೇಶ ದಟ್ಟ ಕಾಡಿನಿಂದ ಹಾಗೂ ಹಲವಾರು ರೀತಿಯ ಪ್ರಾಣಿಗಳು ಇರುವ ಜಿಲ್ಲೆಯಾಗಿದೆ. ಇದೊಂದು ಘಟನೆ ಭಟ್ಕಳ ತಾಲೂಕಿನಲ್ಲಿ ನಡೆದಿದೆ. ವೆಂಕಟ್ರಮಣ ನಾಯ್ಕ ಎನ್ನುವ ವ್ಯಕ್ತಿ ಅನಧಿಕೃತವಾಗಿ ಅರಣ್ಯ ನಾಶಗೊಳಿಸಿ ರಸ್ತೆ ನಿರ್ಮಾಣಮಾಡಿದ್ದಾರೆ .
ತಾಲೂಕಿನ ತಲಗೊಡು ಕೋಟೆಮನೆ ಭಾಗದಲ್ಲಿ ಕರ್ಗದ್ದೆ ನಿವಾಸಿಯಾದ ವೆಂಕಟ್ರಮಣ ನಾಯ್ಕ ಎಂಬಾತ 150ಮೀ ರಸ್ತೆಯನ್ನು ಅರಣ್ಯ ಸಂಪತ್ತನ್ನು ನಾಶ ಮಾಡಿ ತನ್ನ ಮಣ್ಣಿನ ಲಾರಿಯನ್ನು ಸಾಗಿಸಲು ಅಲ್ಲಿದ್ದ ಮರಗಿಡಗಳನ್ನು ಕಡಿದು ರಸ್ತೆ ನಿರ್ಮಿಸಿದ್ದಾನೆ. ಅವನ ಮಾಲ್ಕಿ ಜಾಗಕ್ಕೆ ಹೋಗಲು ಬೇರೆ ರಸ್ತೆಗಳಿದ್ದರು ಕೂಡ ಇತ ಈ ಗ್ರಾಮದ ಜನರಿಗೆ ತೊಂದರೆಯಾಗುವಂತೆ ಇಲ್ಲಿಯೇ ರಸ್ತೆ ನಿರ್ಮಿಸಿದ್ದಾರೆ ಇದು ಅಲ್ಲಿದ್ದ ಗ್ರಾಮದ ನಿವಾಸಿಗಳಿಗೆ ತುಂಬಾ ತೊಂದರೆಯಾಗಿದ್ದು. ತಮ್ಮ ಕೃಷಿ ಜಮಿನಾದ ಸರಿಸುಮಾರು 500 ಎಕರೆ ಕೃಷಿ ಭೂಮಿ ಇದ್ದಿದ್ದರಿಂದ ಅಲ್ಲಿನ ಕೃಷಿ ಕಾರ್ಯಗಳಿಗೆ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಪ್ರತಿಭಟನೆ ನಡೆಸಿ ಸಂಬಂದ ಪಟ್ಟ ಅಧಿಕಾರಿಗಳಿಗೆ ಇಲ್ಲಿ ರಸ್ತೆಯ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿದ ಆರ್ ಎಫ್ ಓ ಶರತ್ ಶೆಟ್ಟಿಯವರು ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಅರಣ್ಯ ನಾಶ ಮಾಡಿ ರಸ್ತೆ ನಿರ್ಮಿಸಿದ ವೆಂಕಟ್ರಮಣ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿ ಕೊಂಡು ಅಲ್ಲಿ ನಿರ್ಮಿಸಿದ ರಸ್ತೆಗೆ ಗುಂಡಿಗಳನ್ನು ತೆಗೆದು ವಾಹನ ಹೋಗದಂತೆ ನಿಲ್ಲಿಸಲಾಗಿದೆ.
ವರದಿ :ಶ್ರೀಪಾದ್ ಹೆಗಡೆ