ಹ್ಯೂಸ್ಟನ್‌ನಿಂದ ಫೀನಿಕ್ಸ್‌ಗೆ ತೆರಳುತ್ತಿದ್ದ ಸೌತ್ ವೆಸ್ಟ್ ಏರ್‌ಲೈನ್ಸ್ ಫ್ಲೈಟ್ 733ನಲ್ಲಿ ನಡೆದ ಅಹಿತಕರ ಘಟನೆಯಿಂದ ಪ್ರಯಾಣಿಕರು ತೀವ್ರ ಆತಂಕ ಅನುಭವಿಸಿದರು. ಸೋಮವಾರ (ಮಾರ್ಚ್ 4) ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಅಚಾನಕ್ ಬೆತ್ತಲೆಯಾಗಿದ್ದು, ಗೇಟ್‌ಗೆ ಹಿಂತಿರುಗುವಂತೆ ಒತ್ತಾಯಿಸಿದ ಪ್ರಸಂಗ ಸಂಭವಿಸಿದೆ.
ವಿಮಾನದಲ್ಲಿದ್ದ ಮಹಿಳೆ ಇದ್ದಕ್ಕಿದ್ದಂತೆ ಕಿರುಚಲು, ಬಟ್ಟೆ ಬಿಚ್ಚಲು ಪ್ರಾರಂಭಿಸಿದಳು ಎಂದು ವರದಿಯಾಗಿದೆ. ಪ್ರಾರಂಭದಲ್ಲಿ ಸಹಪ್ರಯಾಣಿಕರೊಂದಿಗೆ ಕಿರಿಕಿರಿ, ಬಳಿಕ ಕಾಕ್‌ಪಿಟ್‌ನಲ್ಲಿ ಹೊಡೆದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಮತ್ತೊಬ್ಬ ಪ್ರಯಾಣಿಕನ ಪ್ರಕಾರ, ಮಹಿಳೆ ಅಸ್ಥಿರವಾಗಿ ಮೇಲಕ್ಕೆ ಮತ್ತು ಕೆಳಗೆ ಜಿಗಿಯುತ್ತಾ, ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸಿದ್ದಳು. ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ್ದ ಈ ಘಟನೆ ಏರ್‌ಲೈನ್ಸ್ ಸಿಬ್ಬಂದಿಯನ್ನು ಕೂಡಾ ಕಿರಿಕಿರಿ ಉಂಟುಮಾಡಿತು.
ಘಟನೆಯ ವಿಡಿಯೋ ವೈರಲ್
ಇಡೀ ಘಟನೆಯನ್ನು ಪ್ರಯಾಣಿಕನೊಬ್ಬ ತನ್ನ ಮೊಬೈಲ್‌ನಲ್ಲಿ ಚಿತ್ರಿಸಿದ್ದಾನೆ. ವೈರಲ್ ಆದ ವಿಡಿಯೋದಲ್ಲಿ ಮಹಿಳೆ ಸಂಪೂರ್ಣ ಬೆತ್ತಲೆಯಾಗಿದ್ದು, ವಿಮಾನದ ಒಳಗೆ ನಡೆದಾಡುತ್ತಿರುವುದು, ಕಿರುಚುತ್ತಿರುವುದು ಕಾಣಬಹುದು.
ಈ ಘಟನೆಯ ನಂತರ, ವಿಮಾನವನ್ನು ಗೇಟ್‌ಗೆ ಹಿಂತಿರುಗಿಸಲಾಗಿದ್ದು, ವಿಮಾನ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಮಹಿಳೆಯನ್ನು ನಿರ್ವಹಿಸಲು ಮುಂದಾಗಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
ಕೊಪ್ಪಳದ ಗಂಗಾವತಿ ಬಳಿ ನಡೆದ ವಿದೇಶಿ ಮಹಿಳೆ ಹಾಗೂ ಹೋಮ್‌ಸ್ಟೇ ಮಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ…
ಅರಸೀಕೆರೆ ರೈಲ್ವೆ ಪೊಲೀಸರು ತೀವ್ರ ತನಿಖೆ ನಡೆಸಿ, ರೈಲು ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಹತ್ಯೆ…
ಖಾಸಗಿ ಆಸ್ಪತ್ರೆಯ ದುಬಾರಿ ಬಿಲ್ ನೋಡಿ, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಆಮ್ಲಜನಕ ಮಾಸ್ಕ್ ಸಮೇತ ಆಸ್ಪತ್ರೆಯಿಂದ ಹೊರಗೆ ಬಂದು…
ಬೆಂಗಳೂರು ನೆಲಗದರನಹಳ್ಳಿಯಲ್ಲಿ ಪತಿ ಪತ್ನಿಯ ಸೌಂದರ್ಯ ಕುರಿತು ಟೀಕಿಸಿ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಪತಿ ಪುಲಿ…
ಗುರುವಾರ (ಮಾರ್ಚ್ 7) ರಾತ್ರಿ 11 ರಿಂದ 11:30ರ ನಡುವೆಯೇ ಭಯಾನಕ ಘಟನೆ ನಡೆದಿದೆ. 27 ವರ್ಷದ ಇಸ್ರೇಲಿ ಯುವತಿ…
ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಇತ್ತೀಚೆಗೆ ನೀಡಿದ ಹೇಳಿಕೆ ಹೊಸ ಚರ್ಚೆಗೆ ತುತ್ತಾಗಿದೆ. ಸುದ್ದಿ ಸಂಸ್ಥೆ ಎಎನ್‌ಐ ಜೊತೆಗಿನ ಸಂದರ್ಶನದಲ್ಲಿ…