ಕುಂದಗೋಳ; ತಾಲೂಕಿನ ಎಲ್ಲೆಡೆ ಮುಂಗಾರು ಪೂರ್ವ ಮಳೆ ಕೈಕೊಟ್ಟಿದೆ. ಇದೀಗ ಮುಂಗಾರು ಕೂಡ ವಿಳಂಬವಾದ ಹಿನ್ನೆಲೆಯಲ್ಲಿ ಅನ್ನದಾತರು ಆತಂಕಕ್ಕೆ ಒಳಗಾಗಿದ್ದಾರೆ, ಇನ್ನೂ ಕೆಲವಡೆ ರೈತರು ಮಳೆಗಾಗಿ ವಿಶೇಷ ಪೊಜೆಗಳನ್ನು ಮಾಡುತ್ತಲ್ಲೆ ಇದ್ದಾರೆ. ಹಾಗೇ ಕುಂದಗೋಳ ಪಟ್ಟಣದ ಕಾಳಿದಾಸ ನಗರದ ನಿವಾಸಿಗಳು ಕಪ್ಪೆಗಳಿಗೆ ಮದುವೆ ಮಾಡಿದ ಘಟನೆಯೂ ನಡೆದಿದೆ.
ಹೌದು..! ಜೂನ ತಿಂಗಳು ಬಂದರೆ ಸಾಕು ರೈತರು ಮಳೆ ಬರುತ್ತೆದೆ ಎನ್ನುವ ನಿರೀಕ್ಷೆಯಲ್ಲಿ ಇರುತ್ತಾರೆ. ಆದರೆ ಇದೀಗ ಹದಿನೈದು ದಿನಗಳು ಕಳೆದರೂ ಮಳೆ ಮಾತ್ರ ಇನ್ನು ಪ್ರವೇಶ ಮಾಡಿಲ್ಲಿ. ಆದ್ದರಿಂದ ಕೆಲವೆಡೆ ರೈತರು ದೇವರು ಮೊರೆ ಹೋಗಿ ವಿಶೇಷ ಪೊಜಿಗಳು ಸಲ್ಲಿಸುತ್ತಿದ್ದಾರೆ. ಅದೇ ರೀತಿ ಕುಂದಗೋಳ ಪಟ್ಟಣದ ಕಾಳಿದಾಸ ನಗರದ ನಿವಾಸಿಗಳು ಮಳೆ ಬರಲಿ ಅಂತ ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿದ್ದು, ಇಲ್ಲಿ ವಿಶೇಷವಾಗಿತ್ತು.
ಮಳೆ ಆಗಿಲ್ಲ ಅಂದರೆ ಆಗಿನ ಪೂರ್ವಜರು ಕಪ್ಪೆಗಳಿಗೆ ಮದುವೆ ಮಾಡುತ್ತಿದ್ದರು, ಇಂದು ಕೂಡ ಅದೇ ಕಾರ್ಯ ಮುಂದುವರಿತ್ತೂ ಬಂದಿದೆ ಅದರಂತೆ ಕುಂದಗೋಳ ಪಟ್ಟಣದ ಕಾಳಿದಾಸ ನಗರದಲ್ಲಿ ಕಪ್ಪೆಗಳಿಗೆ ಮದುವೆ ಮಾಡಲಾಯಿತ್ತು. ಮನುಷ್ಯರ ಮದುವೆ ಹೇಗೆ ನಡೆಯಿತ್ತು ಹಾಗೆ ಮುತ್ತೈದೆಯ ರಿಗೆ ಉಡಿ ತುಂಬುವುದು, ಮನುಷ್ಯರ ಕೈಗಳಿಗೆ ಕಂಕಣ ಕಟುತ್ತಾರೂ ಹಾಗೇ ಕಪ್ಪೆಗಳಿಗೆ ಕಂಕಣ ಕಟ್ಟಿ, ಕೆರೆ ನಿರ್ಮಿಸಿ, ಕಡಪಟ್ಟ ರಸ್ತೆಯಲ್ಲಿರುವ ಯಲ್ಲಮ್ಮ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ. ಮಳೆಗಾಗಿ ಪ್ರಾಥಿಸಿದರು.
ಒಟ್ಟಾರೆಯಾಗಿ ಹೇಳುವುದಾದರೆ ರೈತಾಪಿ ವರ್ಗದ ಈ ಪ್ರಾರ್ಥನೆಯಿಂದ ವರುಣ ದೇವ ನಾಡಿನ ತುಂಬೆಲ್ಲಾ ಕೃಪೆ ತೋರೆಲಿ ಅನ್ನುವುದು ರೈತಾರ ಆಶಯ.
ವರದಿ; ಶಾನು ಯಲಿಗಾರ