ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಕೆಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಳ್ಳಿಕೆರೆ ಗ್ರಾಮದ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಜನರು ಕುಡಿಯಲು ಹಾಗೂ ಬಳಸಲು ನೀರಿಲ್ಲದೇ ದಿನನಿತ್ಯ ಪರದಾಡುವ ಸ್ಥಿತಿ ಉಂಟಾಗಿದೆ. ನೀರಿನ ಸಮಸ್ಯೆ ನೀಗಿಸಲು ಜಲ ಜೀವನ್ ಮಿಷನ್ ಕಾಮಗಾರಿ ಆಗಮಿಸಿದ್ದು, ಜನರಿಗೆ ಜೆಜೆಎಂ ಕಾಮಗಾರಿ ಕೈ ಹಿಡಿಯುತ್ತದೆ ಎಂದುಕೊಂಡಿದ್ದರು, ಆದರೆ ಅದು ಕೂಡ ಕೈ ಹಿಡಿಯಲಿಲ್ಲ, ಜೆಜೆಎಂ ಕಾಮಗಾರಿ ಸಂಪೂರ್ಣ ಹಳ್ಳ ಹಿಡಿದು ಹೋಗಿರುವುದು ಕಂಡುಬರುತ್ತದೆ. ಇಲ್ಲಿನ ಗ್ರಾಮದ ಜನರು ದಿನನಿತ್ಯ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ, ದೇಶದ ಪ್ರತಿ ಹಳ್ಳಿಗೂ ನಿರಂತರ ಶುದ್ಧ ಕುಡಿಯುವ ನೀರು ಕಲ್ಪಿಸುವ ಮಹತ್ವಾಕಾಂಕ್ಷಿ ಉದ್ದೇಶದೊಂದಿಗೆ ಆರಂಭಗೊಂಡಿರುವ ಜಲ ಜೀವನ್ ಮಿಷನ್‌ನ(ಜೆಜೆಎಮ್) ಯೋಜನೆ ಪ್ರತಿ ಗ್ರಾಮದಲ್ಲಿಯೂ ಕಾಮಗಾರಿ ನಡೆಯುತ್ತಿದ್ದು, ಅದೇ ರೀತಿ ತಳ್ಳಿಕೆರೆ ಗ್ರಾಮದಲ್ಲಿಯೂ ಕಾಮಗಾರಿ ನಡೆದಿರುತ್ತದೆ, ಕಾಮಗಾರಿ ನಡೆದ ಆ ಸಮಯದ ಸ್ಥಳದಲ್ಲಿ ಹಾಕಿದ ಬೋರ್ಡ್ ನಲ್ಲಿ ಜಿಲ್ಲಾ ಪಂಚಾಯತ್ ಬಾಗಲಕೋಟೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಬಾಗಲಕೋಟೆನ ಮೂಲಕ ಕೇಲೂರು ಗ್ರಾಮ ಪಂಚಾಯತಿಯ ತಳ್ಳಿಕೆರೆ ಗ್ರಾಮದ ಜನವಸತಿ ಪ್ರದೇಶದ 386 ಮನೆಗಳಿಗೆ ಕಾರ್ಯಾತ್ಮಕ ನಳ ನೀರು ಕಲ್ಪಿಸುವ ಯೋಜನೆ ಹೊಂದಿದ್ದು,ಕಾಮಗಾರಿಯ ಅಂದಾಜು ಮೊತ್ತ,64 ಲಕ್ಷ 80 ಸಾವಿರ ರೂಪಾಯಿ ಒಳಗೊಂಡಿರುತ್ತದೆ, ತಳ್ಳಿಕೆರೆ ಗ್ರಾಮದ ಜನತೆ ಕಳೆದ ಎರಡು ವರ್ಷಗಳಿಂದ ಮನೆ ಮನೆಗೆ ಗಂಗೆ ಇನ್ನೂ ತಲುಪದೇ ಇರುವುದು ಜನರಲ್ಲಿ ಅಸಮಾಧಾನ ಉಂಟು ಮಾಡಿದೆ. ಗ್ರಾಮದ ಕೆಲ ಪ್ರದೇಶಗಳಲ್ಲಿ ಮಾತ್ರ ಕೆಲಸ ಮಾಡಿ ಅದರಲ್ಲೂ ಸ್ವಲ್ಪವೂ ಕಾಮಗಾರಿಯ ಪೂರ್ಣತೆ ಕಂಡಿರುವುದಿಲ್ಲ, ನಳಗಳನ್ನು ಅಳವಡಿಸಿಲ್ಲ. ಕಾಮಗಾರಿಯ ಬೋರ್ಡ್ ಅನ್ನು ಎರಡು ದಿನ ಮಾತ್ರ ಹಾಕಿ ನಂತರ ಅದನ್ನು ತಾವೇ ಕಿತ್ತುಕೊಂಡು ಹೋಗಿದ್ದಾರೆ ಎಂಬುದು ಅಲ್ಲಿನ ಜನರ ಪಿಸು ಮಾತಾಗಿದೆ, ಇದರಿಂದ ಜೆಜೆಎಂ ಕಾಮಗಾರಿ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಇದರ ಸಲುವಾಗಿ ಗ್ರಾಮದ ಜನರು ಹಲವು ಬಾರಿ ಇದರ ಬಗ್ಗೆ ತಿಳಿಸಿದರು ಯಾವೊಬ್ಬ ಅಧಿಕಾರಿಯೂ ಇದಕ್ಕೆ ಸ್ಪಂದಿಸುತ್ತಿಲ್ಲ, ತಳ್ಳಿಕೇರೆ ಗ್ರಾಮದ ಜನರು ಜೆಜೆಎಂ ಕಾಮಗಾರಿ ಮಾಡಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ, ಇದರಲ್ಲಿ ಕಾಮಗಾರಿ ಮಾಡಿದ ಗುತ್ತಿಗೆದಾರರಾದ ವೀರೇಶ ನಾಗರಬೇಂಚಿ ಹಾಗೂ ಇಂಜಿನಿಯರ್ ಆದ ಕಾಶಿರಾಯ್ ನಾಯಕ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರವರ ಮೇಲೆ ಸೂಕ್ತ ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಗ್ರಾಮದ ಜನರಿಗೆ ನ್ಯಾಯ ಒದಗಿಸಿ ಕೊಡಬೇಕು, ಹಾಗೂ ತಳ್ಳಿಕೆರೆ ಗ್ರಾಮದ ಜನರಿಗೆ ನೀರಿನ ಸೌಲಭ್ಯ ಒದಗಿಸಿ ಕೊಡಬೇಕು.