ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಚಂದ್ರಕಲಾ ಅವರನ್ನು ಅಮಾನತುಗೊಳಿಸಿ, ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಈ ಕ್ರಮಕ್ಕೆ ಕಾರಣವಾದದ್ದು, ಇತ್ತೀಚೆಗೆ ಎಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಅವರು ವಿನೋಬನಗರ ಠಾಣೆಗೆ ಅಚಾನಕ್ ಭೇಟಿ ನೀಡಿದ ಸಂದರ್ಭದಲ್ಲಿ, ಇನ್‌ಸ್ಪೆಕ್ಟರ್ ಚಂದ್ರಕಲಾ ಅವರು ಅಪೇಕ್ಷಿತ ರೀತಿಯಲ್ಲಿ ಸ್ಪಂದಿಸದಿರುವುದು ಹಾಗೂ ಇಲಾಖೆಯ ಕರ್ತವ್ಯ ಪಾಲನೆಗೆ ನಿರ್ಲಕ್ಷ್ಯ ವಹಿಸಿದ್ದಾರನ್ನುವೇ ಆಗಿದೆ.
ವಿಭಾಗದ ತನಿಖೆಯಲ್ಲಿ ಚಂದ್ರಕಲಾ ಅವರು ದಾಖಲೆ ನಿರ್ವಹಣೆಯಲ್ಲಿ ಲೋಪವಿರುವುದು, ಹಿರಿಯ ಅಧಿಕಾರಿಗಳೊಂದಿಗೆ ಸಮನ್ವಯ ಕಾಪಾಡದೇ ಇದ್ದುದು ಬೆಳಕಿಗೆ ಬಂದಿದೆ. ಹಿರಿಯರು ಠಾಣೆಗೆ ಬಂದಾಗ ಸ್ಥಳದಲ್ಲಿಯೇ ಸರಿಯಾದ ಮಾಹಿತಿ ನೀಡದೇ, ತಮ್ಮ ಕರ್ತವ್ಯದತ್ತ ನಿರಾಸಕ್ತಿಯನ್ನು ತೋರಿದ್ದಾರೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ, ಇನ್‌ಸ್ಪೆಕ್ಟರ್ ಚಂದ್ರಕಲಾ ಅವರನ್ನು ತಾತ್ಕಾಲಿಕವಾಗಿ ಒಂದು ತಿಂಗಳ ಕಾಲ ಅಮಾನತು ಮಾಡುವುದಾಗಿ ಎಸ್‌ಪಿ ಮಿಥುನ್ ಕುಮಾರ್ ಆದೇಶಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯಲಿದೆ.
ಕಾನೂನು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ನಂಬಿಕೆಯನ್ನು ಉಳಿಸಿ ಕಾಪಾಡಲು ಈ ಕ್ರಮ ಅಗತ್ಯವಾಯಿತೆಂಬ ಅಭಿಪ್ರಾಯವನ್ನು ಪೊಲೀಸ್ ಇಲಾಖೆ ಹೊರಹಾಕಿದೆ.
ಕೋಲಾರ: ಆಂಧ್ರ ಪ್ರದೇಶ ಪೊಲೀಸರು ಚಿನ್ನದ ರಾಬರಿ ಪ್ರಕರಣದಲ್ಲಿ ಕೆಜಿಎಫ್ ಮೂಲದ ಕಾಂಗ್ರೆಸ್ ಮುಖಂಡನನ್ನು ಬಂಧಿಸಿರುವ ಘಟನೆ ರಾಜ್ಯ ರಾಜಕೀಯ…
ಪುತ್ತೂರು: ಪಿಯುಸಿ ಓದುತ್ತಿದ್ದ ಬಾಲಕಿ ಮೇಲೆ ಆಟೋ ಚಾಲಕನೊಬ್ಬ ದೌರ್ಜನ್ಯ ಎಸಗಿದ ದಾರುಣ ಘಟನೆ ಬೆಳಕಿಗೆ ಬಂದಿದೆ. ಕಾಲೇಜಿಗೆ ರಜೆ…
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಅಸ್ತಾಪನಹಳ್ಳಿ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್ 4 ರಂದು…
ಬಂಗಾರಪೇಟೆ: ದಿನಾಂಕ 05.04.2025 ರಂದು ಮಧ್ಯ ರಾತ್ರಿ 12.30 ಗಂಟೆ ಸಮಯದಲ್ಲಿ ಹುದುಕುಳ ಗೇಟ್ ಬಳಿ ಗಲಾಟೆ ನಡೆಯುತ್ತಿರುವ ಬಗ್ಗೆ…
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಮಾನವೀಯತೆಯೆಂಬ ಮೌಲ್ಯವೇ ಪ್ರಶ್ನೆಗೆ ಒಳಪಡಿಸುವ ದುರ್ಘಟನೆ ಬೆಳಕಿಗೆ ಬಂದಿದೆ. 13 ವರ್ಷದ ಕ್ಯಾನ್ಸರ್ ಪೀಡಿತ ಬಾಲಕಿಯೊಬ್ಬಳ…
ಸೂರತ್: 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೈನ ಸನ್ಯಾಸಿಯೊಬ್ಬರಿಗೆ ಸೂರತ್ ಸೆಷನ್ಸ್ ಕೋರ್ಟ್ 10 ವರ್ಷಗಳ…